ದುಬೈ (ಅ. 29): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆಯುತ್ತಿರುವ ಐಪಿಎಲ್ನ 49ನೇ ಪಂದ್ಯದಲ್ಲಿ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣೆಸಾಟ ನಡೆಸುತ್ತಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್ಕೆಗೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಇತ್ತ ಕೆಕೆಆರ್ ಪ್ಲೇ ಆಫ್ ಹಂತಕ್ಕೇರಲು ಗೆಲ್ಲಲೇ ಬೇಕಾದ ಇತ್ತಡದಲ್ಲಿದೆ.
ಸದ್ಯ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಈ ಜೋಡಿ ಮೊದಲ 6 ಓವರ್ಗಳಲ್ಲಿ 48 ರನ್ ಕಲೆಹಾಕಿತು.
ಆದರೆ, 8ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್(26 ರನ್, 17 ಎಸೆತ) ಔಟ್ ಆಗುವ ಮೂಲಕ ಕೆಕೆಆರ್ ಮೊದಲ ವಿಕೆಟ್ ಪತನ ಕೊಂಡಿತು. ಬಂದ ಬೆನ್ನಲ್ಲೇ ಒಂದು ಸಿಕ್ಸ್ ಸಿಡಿಸಿ ಸುನೀಲ್ ನರೈನ್ ಬ್ಯಾಟ್ ಕೆಳಗಿಟ್ಟರು. ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ರಿಂಕು ಸಿಂಗ್ 11 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಬಳಿಕ ನಾಯಕ ಇಯಾನ್ ಮಾರ್ಗನ್ ಜೊತೆಯಾದ ರಾಣ ಬಿರುಸಿನ ಆಟ ಪ್ರದರ್ಶಿಸಿದರು. ಚೆನ್ನೈ ಬೌಲರ್ಗಳ ಬೆಂಡೆತ್ತಿದ ರಾಣ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರು. ಅದರಲ್ಲೂ 16ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಶಕ್ತಿ ಪ್ರದರ್ಶಿಸಿದರು. 61 ಎಸೆತಗಳಲ್ಲಿ ಆಡಿದ ರಾಣ 10 ಬೌಂಡರಿ, 4 ಸಿಕ್ಸರ್ ಬಾರಿಸಿ 87 ರನ್ ಚಚ್ಚಿದರು.
ಇಂದಿನ ಪಂದ್ಯಕ್ಕೆ ಸಿಎಸ್‌ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಮ್ರಾನ್ ತಾಹಿರ್ ಹಾಗೂ ಡುಪ್ಲೆಸಿಸ್ ಬದಲು ಶೇನ್ ವಾಟ್ಸನ್ ಹಾಗೂ ಲುಂಗಿ ಎನ್ಬಿಡಿ ಸ್ಥಾನ ಪಡೆದುಕೊಂಡಿದ್ದಾರೆ.
ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೈನ್, ರಿಂಕು ಸಿಂಗ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್,
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವಾಟ್ಸನ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಮಿಚೆಲ್ ಸ್ಯಾಂಟನರ್, ಕರ್ಣ್ ಶರ್ಮಾ, ಲುಂಗಿ ಎನ್ಗಿಡಿ.
Welcome to Match 49 of #Dream11IPL where #CSK will take on #KKR.
Who are you rooting for ?#CSKvKKR pic.twitter.com/xSqVBJplkz
— IndianPremierLeague (@IPL) October 29, 2020
ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಲಯ ಕಂಡಿರುವ ಸಿಎಸ್‌ಕೆ ಸವಾಲು ಕೆಕೆಆರ್ ಪಾಲಿಗೆ ಕಠಿಣವಾಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಸೋಲು ಕಂಡಿತ್ತು. ತಂಡದಲ್ಲಿ ಶುಭ್ಮನ್ ಗಿಲ್, ನಾಯಕ ಮಾರ್ಗನ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ಗಳು ಮಿಂಚುತ್ತಿಲ್ಲ.
ಅಲ್ಲದೆ ಕೆಕೆಆರ್ ಈ ಬಾರಿಯ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೂ ಪಡೆದಿಲ್ಲ. ಇಂದಿನ ಪಂದ್ಯ ಮಹತ್ವದ್ದಾಗಿದ್ದು, ಆರಂಭಿಕ ಆಟಗಾರರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ವರುಣ್ ಚಕ್ರವರ್ತಿ ಮಾತ್ರ ಬೌಲಿಂಗ್ನಲ್ಲಿ ಉತ್ತಮ ಸ್ಪೆಲ್ ಮಾಡುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಲೂಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ಸುನೀಲ್ ನರೈನ್ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇತ್ತ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿರುವ ಧೋನಿ ಈ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಕಳೆದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಮಿಂಚಿದ್ದರು. ಹೀಗಾಗಿ ಕೆಕೆಆರ್ ವಿರುದ್ಧವೂ ಸಿಡಿಯುವ ಕಾತುರದಲ್ಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, 9 ಪಂದ್ಯಗಳಲ್ಲಿ ಕೆಕೆಆರ್ ಜಯದ ನಗೆ ಬೀರಿದ್ದರೆ, 14 ಪಂದ್ಯಗಳಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ