ದುಬೈ (ಅ. 29): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಡೆಯುತ್ತಿರುವ ಐಪಿಎಲ್ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸವಾಲಿನ ಮೊತ್ತ ಕಲೆಹಾಕಿದೆ. ನಿತೀಶ್ ರಾಣ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ 20 ಓವರ್ಗಳಲ್ಲಿ 172 ರನ್ ಬಾರಿಸಿದೆ.
ಕೆಕೆಆರ್ ನೀಡಿದ್ದ 173 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭ ಪಡೆದುಕೊಂಡಿತಾದರೂ ಒಂದು ವಿಕೆಟ್ ಕಳೆದುಕೊಂಡಿತು. ಶೇನ್ ವಾಟ್ಸನ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಪವರ್ ಪ್ಲೇ ನಲ್ಲಿ 44 ರನ್ ಕಲೆಹಾಕಿತು. ಆದರೆ, ವಾಟ್ಸನ್ ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸದೆ 14 ರನ್ಗೆ ನಿರ್ಗಮಿಸಿದರು.
2ನೇ ವಿಕೆಟ್ಗೆ ರುತುರಾಜ್ ಜೊತೆಯಾದ ಅಂಬಟಿ ರಾಯುಡು ಭರ್ಜರಿ ಆಟವಾಡಿದರು. 68 ರನ್ಗಳ ಕಾಣಿಕೆ ನೀಡಿದರು. ರಾಯುಡು ಕೇವಲ 20 ಎಸೆತಗಳಲ್ಲಿ 38 ರನ್ ಬಾರಿಸಿದರು. ನಾಯಕ ಎಂ ಎಸ್ ಧೋನಿ ಕೇವಲ 1 ರನ್ ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಸದ್ಯ ಕ್ರೀಸ್ನಲ್ಲಿ ರುತುರಾಜ್ ಜೊತೆ ನಾಯಕ ಸ್ಯಾಮ್ ಕುರ್ರನ್ ಇದ್ದಾರೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಈ ಜೋಡಿ ಮೊದಲ 6 ಓವರ್ಗಳಲ್ಲಿ 48 ರನ್ ಕಲೆಹಾಕಿತು.
ಆದರೆ, 8ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಶುಭ್ಮನ್ ಗಿಲ್(26 ರನ್, 17 ಎಸೆತ) ಔಟ್ ಆಗುವ ಮೂಲಕ ಕೆಕೆಆರ್ ಮೊದಲ ವಿಕೆಟ್ ಪತನ ಕೊಂಡಿತು. ಬಂದ ಬೆನ್ನಲ್ಲೇ ಒಂದು ಸಿಕ್ಸ್ ಸಿಡಿಸಿ ಸುನೀಲ್ ನರೈನ್ ಬ್ಯಾಟ್ ಕೆಳಗಿಟ್ಟರು. ಈ ಬಾರಿ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ರಿಂಕು ಸಿಂಗ್ 11 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಬಳಿಕ ನಾಯಕ ಇಯಾನ್ ಮಾರ್ಗನ್ ಜೊತೆಯಾದ ರಾಣ ಬಿರುಸಿನ ಆಟ ಪ್ರದರ್ಶಿಸಿದರು. ಚೆನ್ನೈ ಬೌಲರ್ಗಳ ಬೆಂಡೆತ್ತಿದ ರಾಣ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರು. ಅದರಲ್ಲೂ 16ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಶಕ್ತಿ ಪ್ರದರ್ಶಿಸಿದರು. 61 ಎಸೆತಗಳಲ್ಲಿ ಆಡಿದ ರಾಣ 10 ಬೌಂಡರಿ, 4 ಸಿಕ್ಸರ್ ಬಾರಿಸಿ 87 ರನ್ ಚಚ್ಚಿದರು.
FIFTY!
A hard fought half-century for @NitishRana_27 off 44 deliveries. His 11th in IPL.#Dream11IPL pic.twitter.com/KHhPOgia7F
— IndianPremierLeague (@IPL) October 29, 2020
ಕೆಕೆಆರ್: ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಇಯಾನ್ ಮಾರ್ಗನ್ (ನಾಯಕ), ಸುನೀಲ್ ನರೈನ್, ರಿಂಕು ಸಿಂಗ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರಣ್ ಚಕ್ರವರ್ತಿ, ಲಾಕಿ ಫರ್ಗೂಸನ್,
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವಾಟ್ಸನ್, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಮಿಚೆಲ್ ಸ್ಯಾಂಟನರ್, ಕರ್ಣ್ ಶರ್ಮಾ, ಲುಂಗಿ ಎನ್ಗಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ