IPL 2020 CSK vs DC: ಡೆಲ್ಲಿ-ಚೆನ್ನೈ ಮುಖಾಮುಖಿ: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

CSK vs DC: ಯುಎಇನಲ್ಲಿ ನಡೆದ 2014 ರ ಐಪಿಎಲ್‌ನ ಫಲಿತಾಂಶ ತೆಗೆದುಕೊಂಡರೂ ಅಲ್ಲೂ ಸಿಎಸ್​ಕೆ ಮೇಲುಗೈ ಸಾಧಿಸಿರುವುದು ಕಾಣಬಹುದು.

dhoni-shreyas

dhoni-shreyas

 • Share this:
  ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ ಜಯದ ಖಾತೆ ತೆರೆದಿದ್ದು, ಇಂದಿನ ಪಂದ್ಯದ ಮತ್ತೊಂದು ವಿಜಯದ ನಿರೀಕ್ಷೆಯಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಜಯಭೇರಿ ಬಾರಿಸಿದ ಧೋನಿ ಪಡೆದ ರಾಜಸ್ಥಾನ್ ವಿರುದ್ಧ ಮುಗ್ಗರಿಸಿತ್ತು. ಇದೀಗ 3ನೇ ಪಂದ್ಯದ ಮೂಲಕ ಮತ್ತೆ ಜಯದ ಲಯಕ್ಕೆ ಮರಳಲು ಸಕಲ ತಯಾರಿ ನಡೆಸಿದೆ. ಹಾಗೆಯೇ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್​ ಹಣಾಹಣಿಯಲ್ಲಿ ಗೆದ್ದುಕೊಂಡಿತ್ತು.

  ಹೀಗಾಗಿ ಇಂದಿನ ಪಂದ್ಯವು ಎರಡು ತಂಡಗಳ ಸಾಮರ್ಥ್ಯವನ್ನು ತೆರೆದಿಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಭಯ ತಂಡಗಳು ಈ ಹಿಂದೆ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಅತೀ ಹೆಚ್ಚು ಬಾರಿ ಗೆಲ್ಲುವ ಮೂಲಕ ಸಿಎಸ್​ಕೆ ಡೆಲ್ಲಿ ವಿರುದ್ಧ ಪಾರುಪತ್ಯ ಸಾಧಿಸಿದೆ.

  21 ಹಣಾಹಣಿಯಲ್ಲಿ ಸಿಎಸ್​ಕೆ 15 ಪಂದ್ಯಗಳನ್ನು ಗೆದ್ದು ಬೀಗಿದ್ರೆ, ಡೆಲ್ಲಿ ಕ್ಯಾಪಿಟಲ್ಸ್​ ವಿಜಯ ಸಾಧಿಸಿದ್ದು ಬರೀ 6 ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ಚೆನ್ನೈ ಈ 15 ಪಂದ್ಯಗಳನ್ನು ಗೆದ್ದಿರುವುದು ಧೋನಿ ನಾಯಕತ್ವದಲ್ಲಿ ಎಂಬುದು ವಿಶೇಷ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರು ಹಲವು ಬಾರಿ ಬದಲಾಗಲಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಸಿಎಸ್​ಕೆಯನ್ನು ಮಣಿಸಲು ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ತಯಾರಿ ನಡೆಸಿದೆ.

  ಇನ್ನು ಕಳೆದ ಸೀಸನ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲೂ ಸೋಲುಂಡಿತು. ಕೊನೆಯ ಬಾರಿ ಡೆಲ್ಲಿ ಸಿಎಸ್​ಕೆ ವಿರುದ್ದ ಗೆದ್ದಿದ್ದು 2018 ರಲ್ಲಿ. ಹೀಗಾಗಿ ಎರಡು ವರ್ಷಗಳ ಬಳಿಕ ಚೆನ್ನೈ ವಿರುದ್ಧ ಸಾಂಘಿಕ ಪ್ರದರ್ಶನ ನೀಡಬೇಕಾದ ಒತ್ತಡ ಕೂಡ ಡೆಲ್ಲಿ ಹುಡುಗರ ಮೇಲಿದೆ.

  ಯುಎಇನಲ್ಲಿ ನಡೆದ 2014 ರ ಐಪಿಎಲ್‌ನ ಫಲಿತಾಂಶ ತೆಗೆದುಕೊಂಡರೂ ಅಲ್ಲೂ ಸಿಎಸ್​ಕೆ ಮೇಲುಗೈ ಸಾಧಿಸಿರುವುದು ಕಾಣಬಹುದು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್​ ಡೇವಿಲ್ಸ್​ (ಹಳೆಯ ಡೆಲ್ಲಿ ಟೀಮ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 93 ರನ್‌ಗಳಿಂದ ಜಯಗಳಿಸಿತ್ತು.

  ಇನ್ನು ಚೆನ್ನೈ ತಂಡದ ಸ್ಟಾರ್ ಆಟಗಾರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದು, ಅದೇ ಆತ್ಮ ವಿಶ್ವಾಸದಲ್ಲೇ ಇಂದು ಕೂಡ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ವಿರುದ್ಧ ಸಿಎಸ್​ಕೆ ತಂಡದ ಆರಂಭಿಕ ಶೇನ್ ವ್ಯಾಟ್ಸನ್ (37 ಸರಾಸರಿಯಲ್ಲಿ 481 ರನ್) ಮತ್ತು ಅಂಬಾಟಿ ರಾಯುಡು 34.07 ಸರಾಸರಿಯಲ್ಲಿ 477 ರನ್ ಗಳಿಸಿದ್ರೆ, ರವೀಂದ್ರ ಜಡೇಜಾ ಡಿಸಿ ವಿರುದ್ಧ 20 ಇನ್ನಿಂಗ್ಸ್‌ಗಳಲ್ಲಿ 300 ರನ್ ಮತ್ತು 15 ವಿಕೆಟ್ ಕಬಳಿಸಿದ್ದಾರೆ.

  ಕ್ಯಾಪಿಟಲ್ಸ್ ಪರ ಶಿಖರ್ ಧವನ್ 35.61 ಸರಾಸರಿಯಲ್ಲಿ ಚೆನ್ನೈ ವಿರುದ್ಧ 641 ರನ್ ಕಲೆಹಾಕಿರುವುದು ವಿಶೇಷ. ಏತನ್ಮಧ್ಯೆ, ಸ್ಪಿನ್ನರ್ ಅಮಿತ್ ಮಿಶ್ರಾ ಚೆನ್ನೈ ವಿರುದ್ಧ 7.09 ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದಾರೆ. ಈ ಇಬ್ಬರು ಅನುಭವಿ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿದ್ರೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

  ಇನ್ನು ರಿಕಿ ಪಾಂಟಿಂಗ್ ತರಬೇತಿಯಲ್ಲಿ ಪಳಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಿನ ಕಳೆದಂತೆ ಭರ್ಜರಿ ಪ್ರದರ್ಶನ ನೀಡುತ್ತಾ ಬರುತ್ತಿದ್ದು, ಇದಕ್ಕೆ ಉತ್ತಮ ಉದಾಹರಣೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಮೊದಲ ಪಂದ್ಯ. ಅಲ್ಲದೆ ಸೋಲಿನ ಸುಳಿಯಲ್ಲೇ ಸಿಲುಕಿದ್ದ ತಂಡವು ಕಳೆದ ಸೀಸನ್​ನಲ್ಲಿ ಪ್ಲೇಆಫ್ ಪ್ರವೇಶಿಸುವ ಮೂಲಕ ಬಲಿಷ್ಠ ತಂಡ ಎನಿಸಿಕೊಂಡಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತೊಂದು ಜಯ ಗಳಿಸಬೇಕೆಂಬ ಉತ್ಸಾಹದಲ್ಲಿ ಶ್ರೇಯಸ್ ಅಯ್ಯರ್ ಪಡೆ ಕಣಕ್ಕಿಳಿಯಲಿದ್ದಾರೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  Also Read: KL Rahul: ಸಚಿನ್ ದಾಖಲೆ ಅಳಿಸಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್
  Published by:zahir
  First published: