IPL

  • associate partner

IPL 2020, CSK vs DC: ಇಂದು ಸಿಎಸ್​ಕೆ vs ಡೆಲ್ಲಿ; ಇಂದು ಡ್ರೀಮ್11ನಲ್ಲಿ ನೀವು ಮಾಡಬೇಕಾಗಿದ್ದೇನು?

ಪಂದ್ಯ ಆಡುವ ಎರಡೂ ತಂಡಗಳಲ್ಲಿ 11 ಜನರನ್ನು ಆಯ್ಕೆ ಮಾಡಿ ನೀವೇ ಒಂದು ತಂಡವನ್ನು ಕಟ್ಟಬೇಕು. ಓರ್ವ ನಾಯಕ ಹಾಗೂ ಉಪನಾಯಕನ್ನು ನೀವು ಆಯ್ಕೆ ಮಾಡಬೇಕು. ನೀವು ಆಯ್ಕೆ ಮಾಡಿರುವ ಆಟಗಾರರು ಉತ್ತಮವಾಗಿ ಆಡಿದರೆ ನಿಮಗೆ ಒಳ್ಳೆಯ ಪಾಯಿಂಟ್​ ಲಭ್ಯವಾಗುತ್ತದೆ.

news18-kannada
Updated:September 25, 2020, 1:00 PM IST
IPL 2020, CSK vs DC: ಇಂದು ಸಿಎಸ್​ಕೆ vs ಡೆಲ್ಲಿ; ಇಂದು ಡ್ರೀಮ್11ನಲ್ಲಿ ನೀವು ಮಾಡಬೇಕಾಗಿದ್ದೇನು?
ವಿರಾಟ್​
  • Share this:
 ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಎರಡನೇ ಪಂದ್ಯದಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ಇಂದು ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ ಮೇಲೆರಲು ಎರಡೂ ತಂಡಕ್ಕೂ ಗೆಲ್ಲಲೇಬೇಕಾದ ಅಗತ್ಯತೆ ಬಂದೊದಗಿದೆ. ಹೀಗಾಗಿ, ಗೆಲ್ಲೋದು ಯಾರು ಎಂಬ ಕುತೂಹಲ ಪ್ರೇಕಕರಲ್ಲಿದೆ. ಇಂದಿನ ಪಂದ್ಯ ಹಳೆ ಬೇರು ಹೊರ ಚಿಗುರಿನ ನಡುವಿನ ಗುದ್ದಾಟ ಎನ್ನಬಹುದು. ಏಕೆಂದರೆ, ಧೋನಿ ನೇತೃತ್ವದ ಚೆನ್ನೈ ತಂಡದಲ್ಲಿ ಅನುಭವಿ ಆಟಗಾರರೇ ಇದ್ದಾರೆ. ಇನ್ನು, ಅನನುಭವಿ ಶ್ರೇಯಸ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ​ ಯುವ ತಂಡ.  ಹಾಗಾದ್ರೆ,  ಇಂದು ಡ್ರೀಮ್​11 ಅಲ್ಲಿ ಗಮನಿಸಬೇಕಾದ ಅಂಶಗಳೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಡ್ರೀಮ್​ 11 ಈ ಬಾರಿಯ ಐಪಿಎಲ್​ಗೆ ಸ್ಪಾನ್ಸರ್​ ಶಿಪ್​ ನೀಡುತ್ತಿದೆ. ಡ್ರೀಮ್​11ನಲ್ಲಿ ಹಣ ಹಾಕಿ ಸಾಕಷ್ಟು ಜನರು ದೊಡ್ಡ ಮೊತ್ತದ ಲಾಭ ಮಾಡಿದ್ದಾರೆ. ಇನ್ನೂ ಕೆಲವರು ಹಣ ಕಳೆದುಕೊಂಡಿದ್ದಾರೆ. ಸ್ವಲ್ಪ ತಲೆ ಉಪಯೋಗಿಸಿದರೆ ನೀವು ದೊಡ್ಡ ಮೊತ್ತದ ಹಣ ಮಾಡಬಹುದು. ಹೇಗೆ ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ.

ಪಂದ್ಯ ಆಡುವ ಎರಡೂ ತಂಡಗಳಲ್ಲಿ 11 ಜನರನ್ನು ಆಯ್ಕೆ ಮಾಡಿ ನೀವೇ ಒಂದು ತಂಡವನ್ನು ಕಟ್ಟಬೇಕು. ಓರ್ವ ನಾಯಕ ಹಾಗೂ ಉಪನಾಯಕನ್ನು ನೀವು ಆಯ್ಕೆ ಮಾಡಬೇಕು. ನೀವು ಆಯ್ಕೆ ಮಾಡಿರುವ ಆಟಗಾರರು ಉತ್ತಮವಾಗಿ ಆಡಿದರೆ ನಿಮಗೆ ಒಳ್ಳೆಯ ಪಾಯಿಂಟ್​ ಲಭ್ಯವಾಗುತ್ತದೆ. ಹಾಗಾದರೆ, ಈ ಆಟಗಾರರು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಟಿಪ್ಸ್​.

ಸ್ಟಾರ್​ ಆಟಗಾರರು ಕೈ ಕೊಡಬಹುದು!:

ಆಲ್​ರೌಂಡರ್​ ಪ್ರದರ್ಶನ ನೀಡುವವರನ್ನು ಕ್ಯಾಪ್ಟನ್​ ಆಗ ಮಾಡಿದರೆ ನಿಮಗೆ ಲಾಭದಾಯಕವಾಗಲಿದೆ. ಒಂದೊಮ್ಮೆ ನೀವು ಆಯ್ಕೆ ಮಾಡಿರುವ ಆಟಗಾರ ಬ್ಯಾಟಿಂಗ್​ ನಲ್ಲಿ ಕೈಕೊಟ್ಟರೆ ಬೌಲಿಂಗ್​ ನಲ್ಲಿ ವಿಕೆಟ್​ ಪಡೆಯಬಹುದು.

ಉಪ ನಾಯಕನ​ ಆಯ್ಕೆ ಯಾರನ್ನು ಮಾಡಬೇಕು?:

ಹೊಸ ಆಟಗಾರ ಅಥವಾ ಬೇರೆ ಕಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಈಗ ತಾನೇ ಐಪಿಎಲ್​ ಗೆ ಪದಾರ್ಪಣೆ ಮಾಡುತ್ತಿದ್ದಾನೆ ಎನ್ನುವಂಥ ಆಟಗಾರರನ್ನು ಹುಡುಕಿ ಉಪ ನಾಯಕನನ್ನಾಗಿ ಮಾಡಬೇಕು. ಯಾರೂ ನಿರೀಕ್ಷೆ ಮಾಡಿರದ ಆಟಗಾರರಿಗೆ ಆದ್ಯತೆ ನೀಡಬೇಕು. ಇಂಥ ಆಟಗಾರರನ್ನು ಸಾಕಷ್ಟು ಜನರು ಕಡೆಗಣಿಸಿರುತ್ತಾರೆ. ಒಂದೊಮ್ಮೆ, ನಿಮ್ಮ ಪಟ್ಟಿಯಲ್ಲಿ ಈ ಆಟಗಾರ ಇದ್ದರೆ ನಿಮಗೆ ಜಾಕ್​ ಪಾಟ್​ ಹೊಡೆಯೋದು ಗ್ಯಾರಂಟಿ.ಹಿನ್ನೆಲೆ ತಿಳಿದಿರಲಿ: ನೀವು ದುಡಿದ ಅತ್ಯಮೂಲ್ಯ ಹಣವನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ, ಸ್ವಲ್ಪ ಅಧ್ಯಯನವನ್ನೂ ಮಾಡಿ. ನೀವು ಆಯ್ಕೆ ಮಾಡುತ್ತಿರುವ ಆಟಗಾರನ ಇತ್ತೀಚಿನ ಫರ್ಫಾರ್ಮೆಂಸ್​ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಿ.

ಬ್ಯಾಟ್ಸಮನ್ ಅನ್ನು ಕ್ಯಾಪ್ಟನ್​ ಆಯ್ಕೆ ಮಾಡುವಾಗ ಇದನ್ನು ಗಮನಿಸಿ: ನೀವು ಯಾವುದೋ ಬ್ಯಾಟ್ಸ್​ ಮನ್​ ಅನ್ನು ಕ್ಯಾಪ್ಟನ್​ ಆಗಿ ಆಯ್ಕೆ ಮಾಡುತ್ತಿದ್ದೀರಿ ಎಂದಾದರೆ, 2 ಡೌನ್​ ಒಳಗೆ ಇರುವ ಆಟಗಾರನನ್ನು ಮಾಡಬೇಕು. ಏಕೆಂದರೆ, ಒಮ್ಮೊಮ್ಮೆ 2ಡೌನ್​ ನಂತರದವರಿಗೆ ಬ್ಯಾಟಿಂಗ್​ ಸಿಗದೆ ಇರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಆ ಬಗ್ಗೆ ಗಮನಿಸಿ.

ಬೌಲರ್​​ ಆಯ್ಕೆ ವೇಳೆ ಇರಲಿ ಗಮನ:

ನೀವು ಬೌಲರ್​ ಅನ್ನು ಕ್ಯಾಪ್ಟನ್​ ಅಥವಾ ಉಪ ನಾಯಕನನ್ನಾಗಿ ಆಯ್ಕೆ ಮಾಡುತ್ತಿದ್ದೀರಿ ಎಂದಾದರೆ ಅತ್ಯುತ್ತಮ ಬೌಲರ್​ ಅನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಪಾಯಿಂಟ್ಸ್​ ಕಡಿಮೆ ಆಗಬಹುದು.

ಸಂಭಾವ್ಯ ತಂಡದ ಬಗ್ಗೆ ಇರಲಿ ಗಮನ:

ತಂಡದ ಆಟಾಗರನೋರ್ವ ಗಾಯಗೊಂಡಿರುತ್ತಾನೆ. ಹೀಗಾಗಿ, ಆತ ಮುಂದಿನ ಪಂದ್ಯದಲ್ಲಿ ಆಡೋದು ಅನುಮಾನ ಆಗಿರುತ್ತದೆ. ಅಂಥ ಆಟಗಾರರ ಬಗ್ಗೆ ಗಮನವಹಿಸಿ. ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಒಳಿತು.
Published by: Rajesh Duggumane
First published: September 25, 2020, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading