IPL 2020: ವಿಷಲ್ ಹೊಡಿ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: CSK ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್..?

ರಾಜಸ್ಥಾನ್ ರಾಯಲ್ಸ್ ​ ವಿರುದ್ಧದ ಪಂದ್ಯದಲ್ಲಿ ಧೋನಿ ಪಡೆ 16 ರನ್​ಗಳಿಂದ ಸೋಲನುಭವಿಸಿತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್​ಗಳಿಂದ ಹೀನಾಯವಾಗಿ ಪರಾಜಯಗೊಂಡಿತು.

CSK 2020

CSK 2020

 • Share this:
  IPLನ 13ನೇ ಸೀಸನ್​ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಎಲ್ಲವೂ ಸರಿಯಿಲ್ಲ. ಏಕೆಂದರೆ ಐಪಿಎಲ್​ ಆರಂಭಕ್ಕೂ ಮುನ್ನವೇ ತಂಡದ ಆಧಾರಸ್ತಂಭ ಸುರೇಶ್ ರೈನಾ ಟೂರ್ನಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ತಂಡದಿಂದ ಹಿಂದೆ ಸರಿದಿದ್ದರು. ಇದಾಗ್ಯೂ ಮುಂಬೈ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸಿಎಸ್​ಕೆ ಭರ್ಜರಿಯಾಗಿ ಟೂರ್ನಿ ಆರಂಭಿಸಿತ್ತು. ಆದರೆ ನಂತರದ ಪಂದ್ಯಗಳಿಂದ ಮತ್ತೊಬ್ಬ ಸ್ಟಾರ್ ಬ್ಯಾಟ್ಸ್​ಮನ್ ಅಂಬಾಟಿ ರಾಯುಡು ಗಾಯದ ಕಾರಣ ಹೊರುಗಳಿಯುವಂತಾಯಿತು. ಇನ್ನು ಸಿಪಿಎಲ್ ಮುಗಿಸಿ ತಂಡವನ್ನು ಕೂಡಿಕೊಂಡ ಪ್ರಮುಖ ಆಲ್​ರೌಂಡರ್ ಡ್ವೇನ್ ಬ್ರಾವೊ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಮೊದಲ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.

  ಇನ್ನು ರಾಜಸ್ಥಾನ್ ರಾಯಲ್ಸ್ ​ ವಿರುದ್ಧದ ಪಂದ್ಯದಲ್ಲಿ ಧೋನಿ ಪಡೆ 16 ರನ್​ಗಳಿಂದ ಸೋಲನುಭವಿಸಿತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್​ಗಳಿಂದ ಹೀನಾಯವಾಗಿ ಪರಾಜಯಗೊಂಡಿತು. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್​ಕೆ ಇದೀಗ ಪಾಯಿಂಟ್ಸ್ ಪಟ್ಟಿಯಲ್ಲಿ ಪಾತಾಳದಲ್ಲಿದೆ. ಈ ಚಿಂತೆಯ ಸಿಎಸ್​ಕೆ ಫ್ರಾಂಚೈಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.

  ಹೌದು, ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಅನುಭವಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ತಂಡದಿಂದ ತೆಗೆದು ಹಾಕಲು ತಯಾರಿ ನಡೆಸಿದೆ. ಅಲ್ಲದೆ ಈ ಇಬ್ಬರು ಆಟಗಾರರ ಒಪ್ಪಂದ ರದ್ದುಗೊಳಿಸಲು ಸಿಎಸ್​ಕೆ ಫ್ರಾಂಚೈಸಿ ನಿರ್ಧರಿಸಿದೆ. ಈಗಾಗಲೇ ತಮ್ಮ ವೆಬ್​ಸೈಟ್​ನಿಂದ ಇಬ್ಬರು ಆಟಗಾರರನ್ನು ಕೈಬಿಟ್ಟಿದ್ದು, ಶೀಘ್ರದಲ್ಲೇ ಇದರ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.

  ಇನ್ನು ಈ ಇಬ್ಬರು ಆಟಗಾರರು 2018ರಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು ಈ ಸೀಸನ್​ನೊಂದಿಗೆ ಅಂತ್ಯವಾಗಲಿದೆ. ಹಾಗಾಗಿ ಈ ಬಾರಿ ಭಜ್ಜಿ ಹಾಗೂ ರೈನಾರನ್ನು ಕೈ ಬಿಡಲು ಸಿಎಸ್​ಕೆ ನಿರ್ಧರಿಸಿದೆ. ಅದರಂತೆ ಮುಂದಿನ ಸೀಸನ್​ನಲ್ಲಿ ಈ ಇಬ್ಬರು ಆಟಗಾರರು ಚೆನ್ನೈ ಪರ ಆಡುವುದು ಅನುಮಾನ.

  ಸುರೇಶ್ ರೈನಾ ಜೊತೆ 11 ಕೋಟಿ ಹಾಗೂ ಹರ್ಭಜನ್ ಸಿಂಗ್ ಜೊತೆ 2 ಕೋಟಿ ರೂಪಾಯಿ ಒಪ್ಪಂದ ಮಾಡಲಾಗಿತ್ತು. ಈ ಸೀಸನ್​ನಲ್ಲಿ ಇಬ್ಬರು ಆಟಗಾರರು ತಂಡದ ಪರ ಆಡದ ಕಾರಣ ಈ ಮೊತ್ತ ನೀಡಲಾಗುವುದಿಲ್ಲ. ಹಾಗೆಯೇ ಆಡದಿರುವ ಆಟಗಾರರನ್ನು ಮುಂದುವರೆಸಲು ಕೂಡ ಸಿಎಸ್​ಕೆ ಫ್ರಾಂಚೈಸಿ ಇಚ್ಛಿಸಿಲ್ಲ. ಹೀಗಾಗಿ 14ನೇ ಸೀಸನ್​ನಲ್ಲಿ ಐಪಿಎಲ್​ನಲ್ಲಿ ರೈನಾ-ಭಜ್ಜಿ ಬೇರೆ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: