ಐಪಿಎಲ್ 2020 ಆರಂಭದಿಂದಲೂ ಸದಾ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುವ ಎಂ. ಎಸ್ ಧೋನಿ ನಾಯತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಮತ್ತೊಂದು ಆಘಾತ ಅನುಭವಿಸಿದೆ. ಚೆನ್ನೈ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಅವರು 13ನೇ ಆವೃತ್ತಿಯ ಐಪಿಎಲ್ನಿಂದ ಇಂಜುರಿಯಿಂದಾಗಿ ಹಿಂದೆ ಸರಿದಿದ್ದಾರೆ. ಧೋನಿ ತಂಡದ ಸ್ಥಿತಿ ಸದ್ಯ ತೂಗುಯ್ಯಾಲೆಯಲ್ಲಿ ಇರುವಾಗಲೇ ಬ್ರಾವೋ ಟೂರ್ನಿಯಿಂದ ಔಟ್ ಆಗಿರುವುದು ದೊಡ್ಡ ಹೊಡೆತ ಬಿದ್ದಂತಾಗಿದೆ.
ಈ ಬಗ್ಗೆ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಮಾಹಿತಿ ನೀಡಿದ್ದು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದು, ಗಾಯದ ಸಮಸ್ಯೆಯಿಂದ ಟೂರ್ನಮೆಂಟ್ ಮುಗಿಯುವ ಮುನ್ನವೇ ತಮ್ಮ ದೇಶಕ್ಕೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
IPL 2020, KKR vs RCB: ಪ್ಲೇ ಆಫ್ ಸನಿಹದಲ್ಲಿ ಆರ್ಸಿಬಿ: ಕೋಲ್ಕತ್ತಾಗೆ ಮಹತ್ವದ ಪಂದ್ಯ
ಇತ್ತೀಚೆಗೆ ಕೆರಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ನಾಯು ಸೆಳೆತಕ್ಕೀಡಾಗಿ ನೋವು ಅನುಭವಿಸುತ್ತಿರುವ ಬ್ರಾವೋ ಇನ್ನೂ ಗುಣಮುಖರಾಗಿಲ್ಲ. ಸಿಪಿಎಲ್ ಫೈನಲ್ನಲ್ಲಿ ಬೌಲಿಂಗ್ ಕೂಡಾ ಮಾಡಲು ಆಗಿರಲಿಲ್ಲ. ಗಾಯದ ನಡುವೆಯೇ ಐಪಿಎಲ್ ಆಡಲು ಬಂದ ಬ್ರಾವೋ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಟೂರ್ನಿಯ ಆರಂಭಿಕ ಮೂರು ಪಂದ್ಯಗಳಿಂದ ದೂರ ಉಳಿದಿದ್ದರು. ಇದಾಗ್ಯೂ ತಂಡಕ್ಕೆ ಮರಳಿದರೂ, ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ವಿಂಡೀಸ್ ಆಲ್ರೌಂಡರ್ನ ಹಳೇ ಖದರ್ ಕಾಣಿಸಿರಲಿಲ್ಲ.
ಈಗ ಬ್ರಾವೋ ಅಲಭ್ಯರಾಗಿರುವುದನ್ನು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದು, ಬ್ರಾವೋ ಆದಷ್ಟು ಬೇಗ ಚಿಕಿತ್ಸೆ ಪಡೆಯಲು ತಮ್ಮ ದೇಶಕ್ಕೆ ತೆರಳಲಿದ್ದಾರೆ ಎಂದಿದ್ದಾರೆ. 6 ಪಂದ್ಯಗಳಲ್ಲಿ 7 ರನ್, 6 ವಿಕೆಟ್ ಗಳಿಸಿದ ಬ್ರಾವೋಗೆ 2020ರ ಐಪಿಎಲ್ ಅತ್ಯಂತ ಕಳಪೆಯದ್ದಾಗಿತ್ತು.
Devdutt Padikkal: ಕೊನೆಗೂ ರಿಲೇಶನ್ಶಿಪ್ ಸ್ಟೇಟಸ್ ಬಿಟ್ಟುಕೊಟ್ಟ ದೇವದತ್ ಪಡಿಕಲ್ !
ಇನ್ನೂ ಕಳೆದ ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ಕೋಚ್ ಸ್ಟೀವನ್ ಫ್ಲೆಮಿಂಗ್, ಬ್ರಾವೋ ಗಾಯಗೊಂಡಿರುವುದು ನಮ್ಮ ದುರಾದೃಷ್ಟ. ಹೀಗಾಗಿ ಕೊನೆಯ ಓವರ್ ಬೌಲ್ ಮಾಡಲಾಗಲಿಲ್ಲ. ಜಡೇಜಾ ಅಂತಿಮ ಓವರ್ ಎಸೆಯಲು ಸಿದ್ಧರಿರಲಿಲ್ಲ. ಆದರೂ ಅನಿವಾರ್ಯ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಯಿತು ಎಂದಿದ್ದರು.
ಸದ್ಯ ಬ್ರಾವೋ ಅಲಭ್ಯರಾಗಿರುವುದನ್ನು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದು, ಬ್ರಾವೋ ಆದಷ್ಟು ಬೇಗ ಚಿಕಿತ್ಸೆ ಪಡೆಯಲು ತಮ್ಮ ದೇಶಕ್ಕೆ ತೆರಳಲಿದ್ದಾರೆ ಎಂದಿದ್ದಾರೆ. 6 ಪಂದ್ಯಗಳಲ್ಲಿ 7 ರನ್, 6 ವಿಕೆಟ್ ಗಳಿಸಿದ ಬ್ರಾವೋಗೆ 2020ರ ಐಪಿಎಲ್ ಅತ್ಯಂತ ಕಳಪೆಯದ್ದಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ