IPL

  • associate partner

IPL 2020: ಕಂಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿರುವ ಏಕೈಕ ತಂಡ CSK..!

IPL 2020: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2020 ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, ಹೊಸ ಇತಿಹಾಸ ಸೃಷ್ಟಿಯಾಗಲಿದೆ.

news18-kannada
Updated:October 20, 2020, 5:57 PM IST
IPL 2020: ಕಂಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿರುವ ಏಕೈಕ ತಂಡ CSK..!
Dhoni
  • Share this:
IPL 2020 ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಸೋತಿರುವ ಸಿಎಸ್​ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಮೂಲಕ ಕಳೆದ 12 ಸೀಸನ್​​ಗಳಲ್ಲಿನ ಹೀನಾಯ ಪ್ರದರ್ಶನಕ್ಕೆ ಧೋನಿ ಪಡೆ ಸಾಕ್ಷಿಯಾಗಿದೆ. ಇನ್ನು ಕೇವಲ 4 ಪಂದ್ಯಗಳು ಮಾತ್ರ ಚೆನ್ನೈ ತಂಡಕ್ಕೆ ಉಳಿದಿದ್ದು, ಹೀಗಾಗಿ ಪ್ಲೇ ಆಫ್ ಕನಸು ಬಹುತೇಕ ಕಮರಿದೆ. ಇದಾಗ್ಯೂ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ಹಾಗೂ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಿ ನೆಟ್ ರನ್​ ರೇಟ್ ಆಧಾರದಲ್ಲಿ ಮಾತ್ರ ಟಾಪ್ 4 ರಲ್ಲಿ ಸ್ಥಾನ ಪಡೆಯಬಹುದು.

ಇದೇ ಕಾರಣದಿಂದ ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಸಹ ಸಿಎಸ್​ಕೆ ಇನ್ನೂ ಪ್ಲೇ ಆಫ್​​ಗೆ ಲಗ್ಗೆಯಿಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅಂಕ ಪಟ್ಟಿಯ 7ನೇ ಅಥವಾ 8ನೇ ಸ್ಥಾನದಿಂದ ಪುಟಿದೇಳುವ ಸಾಮರ್ಥ್ಯವಿರುವ ತಂಡವಿದ್ದರೆ ಅದು ಸಿಎಸ್​ಕೆ ಮಾತ್ರ ಎಂದಿದ್ದಾರೆ.

ಚೆನ್ನೈ ಫ್ರಾಂಚೈಸಿಗೆ ತಂಡವನ್ನು ಹೇಗೆ ನಿಭಾಯಿಸಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಅವರು ಆಟಗಾರರಿಗೆ ಉತ್ಸಾಹ ತುಂಬಿ ನಿರಾಳರನ್ನಾಗಿಸುತ್ತಾರೆ. ಇದು ನನಗೂ ಚೆನ್ನಾಗಿ ಗೊತ್ತು. ಏಕೆಂದರೆ ನಾನು ಕೂಡ 2015 ರಲ್ಲಿ ಸಿಎಸ್​ಕೆ ತಂಡದ ಭಾಗವಾಗಿದ್ದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಈ ವರ್ಷ ಸಿಎಸ್​ಕೆ ತಂಡದಲ್ಲಿ ಹರ್ಭಜನ್ ಸಿಂಗ್, ಸುರೇಶ್ ರೈನಾ ಅವರು ಇಲ್ಲದಿರುವುದು, ಕೆಲವರು ಗಾಯಾಳುಗಳಾಗಿರುವುದು ಮುಳುವಾಯಿತು. ಆದರೆ ಐಪಿಎಲ್ ಕ್ರಿಕೆಟ್‌ನ ಯಶಸ್ವಿ ನಾಯಕ ಧೋನಿ ಅವರು ಇರುವುದರಿಂದ ಯಾವ ರೀತಿಯ ಪರಿಸ್ಥಿತಿಯಲ್ಲಿದ್ದರೂ ತಂಡವನ್ನು ಮುಂದೆ ಕೊಂಡೊಯ್ಯಲಿದ್ದಾರೆ ಎಂದು ಭಾವಿಸುತ್ತೇನೆ ಎಂದು ಪಠಾಣ್ ಹೇಳಿದರು.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2020 ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಏಕೆಂದರೆ ಕಳೆದ 10 ಸೀಸನ್ ಆಡಿರುವ ಸಿಎಸ್​ಕೆ ಪ್ರತಿ ಬಾರಿ ಕೂಡ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ. ಹೀಗಾಗಿ ಇದೇ ಮೊದಲ ಬಾರಿ ಲೀಗ್​ ಹಂತದಲ್ಲೇ ಸಿಎಸ್​ಕೆ ಹೊರಬೀಳಲಿದೆಯಾ ಕಾದು ನೋಡಬೇಕಿದೆ.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:  KL Rahul: ಧೋನಿ ಬಿರುದು ರಾಹುಲ್​ಗೆ ನೀಡಿದಾಗ ಹೀಗಿತ್ತು ಪ್ರತಿಕ್ರಿಯೆ..!
Published by: zahir
First published: October 20, 2020, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading