news18-kannada Updated:November 2, 2020, 5:22 PM IST
CSK
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದಲ್ಲ ಒಂದು ಆಘಾತಕ್ಕೆ ಒಳಗಾಗುತ್ತಾ ಸಾಗಿದ ಚೆನ್ನೈ ಸೂಪರ್ ಕಿಂಗ್ಸ್, ಟೂರ್ನಿಯಿಂದ ಹೊರನಡೆದ ಬೆನ್ನಲ್ಲೇ ಮತ್ತೊಂದು ಶಾಕ್ ಅನುಭವಿಸಿದೆ. ತಂಡದ ಸ್ಟಾರ್ ಆಟಗಾರ ಶೇನ್ ವಾಟ್ಸನ್ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯ ಅಂತ್ಯವಾದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂದಿನ ಆವೃತ್ತಿಯಿಂದ ವಾಟ್ಸನ್ ಐಪಿಎಲ್ನಲ್ಲಿ ಭಾಗವಹಿಸುತ್ತಿಲ್ಲ.
39 ವರ್ಷ ಪ್ರಾಯದ ವಾಟ್ಸನ್ 2106ರಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ, ದೇಶೀಯ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2018ರ ಐಪಿಎಲ್ ಹರಾಜಿನಲ್ಲಿ ಇವರನ್ನು ಚೆನ್ನೈ ಫ್ರಾಂಚೈಸಿ ಖರೀದಿ ಮಾಡಿತ್ತು. 2018 ಹಾಗೂ 2019 ಸೀಸನ್ನಲ್ಲಿ ವಾಟ್ಸನ್ ಸಿಎಸ್ಕೆ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು.
Virat Kohli: ನಾನು IPL ನಲ್ಲಿ ಬೆಂಗಳೂರು ಹುಡುಗನಾಗಿ ಆಡುತ್ತಿರುವೆ: ವಿರಾಟ್ ಕೊಹ್ಲಿ
ಅಲ್ಲದೆ 2018ರಲ್ಲಿ ಧೋನಿ ತಂಡ ಚಾಂಪಿಯನ್ ಆಗಲು ವಾಟ್ಸನ್ ಕಾರಣವಾಗಿದ್ದರು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಜೊತೆಗೆ 2019ರ ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ನಲ್ಲಿ ಇಂಜುರಿಯಿಂದ ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿದ್ದನ್ನು ಕ್ರಿಕೆಟ್ ಜಗತ್ತು ಮರೆಯುವಂತಿಲ್ಲ.
ಪಂಜಾಬ್ ವಿರುದ್ಧದ ಪಂದ್ಯ ಮುಗಿದ ಬಳಿಕ ವಾಟ್ಸನ್ ಅವರು ಸಿಎಸ್ಕೆ ಡ್ರೆಸ್ಸಿಂಗ್ ರೂಮ್ನಲ್ಲಿ, ನಾನು ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ನೀಡುತ್ತೇನೆ ಎಂದು ಹೇಳಿದ್ದಾರೆ. ಸಿಎಸ್ಕೆ ತಂಡಕ್ಕೆ ನಾನು ಆಭಾರಿ ಆಗಿರುತ್ತೇನೆ ಎಂದರು. ಈ ಸಂದರ್ಭ ಅವರು ತುಂಬಾ ಭಾವುಕರಾಗಿದ್ದರು ಎಂದು ಸಿಎಸ್ಕೆ ಮೂಲಗಳು ತಿಳಿಸಿವೆ.
MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
ವಾಟ್ಸನ್ ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ರಾಜಸ್ಥಾನ್ ತಂಡದ ಪರ ಆಡಿದ್ದರು. ಆದರೆ, ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಿಎಸ್ಕೆ ಫ್ರಾಂಚೈಸಿ ಖರೀದಿ ಮಾಡಿದ ಬಳಿಕ ಧೋನಿ ನಾಯಕತ್ವದ ಅಡಿಯಲ್ಲಿ ವಾಟ್ಸನ್ ಅಬ್ಬರಿಸಿದ್ದರು. 2018 ರ ಐಪಿಎಲ್ನಲ್ಲಿ 555 ರನ್ ಹಾಗೂ 2019 ರ ಐಪಿಎಲ್ನಲ್ಲಿ 398 ರನ್ ಸಿಡಿಸಿದ್ದರು. ಆದರೆ, ಈ ಬಾರಿಯ ಸೀಸನ್ ವಾಟ್ಸನ್ ಅವರಿಗೆ ಅಷ್ಟೊಂದು ಯಶಸ್ಸು ನೀಡಲಿಲ್ಲ. 11 ಪಂದ್ಯಗಳಲ್ಲಿ ಕೇವಲ 299 ರನ್ ಗಳಿಸಿದ್ದರಷ್ಟೆ.ಐಪಿಎಲ್ನಲ್ಲಿ ಒಟ್ಟು 145 ಪಂದ್ಯಗಳನ್ನು ಆಡಿದ ಶೇನ್ ವಾಟ್ಸನ್, 3874 ರನ್ ಕಲೆಹಾಕಿದ್ದಾರೆ. ಜೊತೆಗೆ 92 ವಿಕೆಟ್ಗಳನ್ನೂ ಕಬಳಿಸಿದ್ದಾರೆ.
Published by:
Vinay Bhat
First published:
November 2, 2020, 5:17 PM IST