IPL 2020: CSK ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ ಮಹತ್ವದ ಬದಲಾವಣೆ..!

Chris Morris: ಬ್ಯಾಟಿಂಗ್​ನಲ್ಲಿ ಕೊಹ್ಲಿ ಪಡೆ ಮಿಂಚಿದರೂ, ಬೌಲಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪರಾಕ್ರಮ ಮೆರೆದಿಲ್ಲ. ಇದೇ ಈಗ ತಂಡದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಡೆತ್​ ಓವರ್​ನಲ್ಲಿ ಅಧಿಕ ರನ್ ಬಿಟ್ಟು ಕೊಟ್ಟಿರುವುದೇ ಸೋಲಿಗೆ ಪ್ರಮುಖ ಕಾರಣವಾಯಿತು.

RCB

RCB

 • Share this:
  IPLನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತಿದೆ. ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ವಿರಾಟ್ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 59 ರನ್​ಗಳ ಹೀನಾಯ ಸೋಲು ಇದೀಗ ಮತ್ತೊಮ್ಮೆ ಆರ್​ಸಿಬಿ ಪಾಳಯವನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಮುಂದಿನ 8 ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೆ ಮಾತ್ರ ಪ್ಲೇ ಆಫ್ ಕನಸನ್ನು ಜೀವಂತವಿರಿಸಿಕೊಳ್ಳಬಹುದು. ಇದೇ ಕಾರಣದಿಂದ ಆರ್​ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಸಹ ಮುಂದಿನ 8 ದಿನಗಳಲ್ಲಿ ಆರ್​ಸಿಬಿಯ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ ಎಂದಿದ್ದಾರೆ.

  ಇತ್ತ ಬ್ಯಾಟಿಂಗ್​ನಲ್ಲಿ ಕೊಹ್ಲಿ ಪಡೆ ಮಿಂಚಿದರೂ, ಬೌಲಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪರಾಕ್ರಮ ಮೆರೆದಿಲ್ಲ. ಇದೇ ಈಗ ತಂಡದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಡೆತ್​ ಓವರ್​ನಲ್ಲಿ ಅಧಿಕ ರನ್ ಬಿಟ್ಟು ಕೊಟ್ಟಿರುವುದೇ ಸೋಲಿಗೆ ಪ್ರಮುಖ ಕಾರಣವಾಯಿತು. ಆಲ್​ರೌಂಡರ್ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಇಸುರು ಉದಾನ ಅವರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇನ್ನು ತಂಡದಲ್ಲಿ ಸ್ಟಾರ್ ಆಲ್​ರೌಂಡರ್ ಕ್ರಿಸ್ ಮೊರೀಸ್ ಇದ್ದರೂ, ಗಾಯದ ಕಾರಣದಿಂದ ಮೊದಲ 5 ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.

  ಇದೀಗ ಕ್ರಿಸ್‌ ಮೊರೀಸ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ನೆಟ್‌ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ಆಲ್​ರೌಂಡರ್ ಮೈದಾನದಲ್ಲಿ ಬೆವರಿಳಿಸುತ್ತಿದ್ದು, ಮುಂದಿನ ಪಂದ್ಯಕ್ಕೆ ಸಂಪೂರ್ಣ ಫಿಟ್ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅದರಂತೆ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದ ಮೂಲಕ ಕ್ರಿಸ್ ಮೊರೀಸ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಇಸುರು ಉದಾನ ಸ್ಥಾನದಲ್ಲಿ ಕ್ರಿಸ್ ಆಡಲಿದ್ದು, ಈ ಮೂಲಕ ಕೊಹ್ಲಿ ಪಡೆಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

  ಇನ್ನು ಕ್ರಿಸ್ ಮೋರಿಸ್ ಆಗಮನದ ಬಗ್ಗೆ ವಿರಾಟ್ ಕೊಹ್ಲಿ ಕೂಡ ಮಾತನಾಡಿದ್ದು, ಮುಂದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದಿದ್ದಾರೆ. ಅಲ್ಲದೆ ಕ್ರಿಸ್ ತಂಡವನ್ನು ಕೂಡಿಕೊಳ್ಳುವುದರಿಂದ ಆರ್​ಸಿಬಿ ಮತ್ತಷ್ಟು ಸಮತೋಲನವಾಗಲಿದೆ ಎಂದಿದ್ದಾರೆ.

  ಐಪಿಎಲ್​ನಲ್ಲಿ 61 ಪಂದ್ಯಗಳನ್ನಾಡಿರುವ 39 ಇನಿಂಗ್ಸ್​ನಲ್ಲಿ 517 ರನ್​ ಕಲೆಹಾಕಿದ್ದಾರೆ. ಈ ಇನಿಂಗ್ಸ್​ಗಳಲ್ಲಿ 27 ಸಿಕ್ಸರ್ ಹಾಗೂ 37 ಬೌಂಡರಿಗಳು ಮೂಡಿಬಂದಿದ್ದವು. ಹಾಗೆಯೇ 7.99 ಎಕಾನಮಿಯೊಂದಿಗೆ ಒಟ್ಟು 69 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಕ್ರಿಸ್ ಮೊರೀಸ್ ಎಂಟ್ರಿ ಆರ್​ಸಿಬಿಯ ಡೆತ್ ಬೌಲಿಂಗ್ ಮತ್ತಷ್ಟು ಬಲಿಷ್ಠಗೊಳಿಸಲಿದೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: