IPL

  • associate partner
HOME » NEWS » Ipl » IPL 2020 CHRIS GAYLE RECOVERS FROM FOOD POISONING LIKELY TO PLAY AGAINST RCB ZP

IPL 2020: RCBಗೆ ಶುರುವಾಗಿದೆ ಹೊಸ ಟೆನ್ಶನ್: ಕೊಹ್ಲಿಯ ಚಿಂತೆ ಹೆಚ್ಚಿಸಿದ ಗೆಳೆಯ..!

ಐಪಿಎಲ್‌ನಲ್ಲಿ ಇದುವರೆಗೆ 125 ಪಂದ್ಯಗಳನ್ನು ಆಡಿರುವ ಕ್ರಿಸ್‌ ಗೇಲ್, 41.13ರ ಸ್ಟ್ರೈಕ್‌ರೇಟ್‌ನಲ್ಲಿ 4484 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 28 ಅರ್ಧಶಕಗಳು ಸೇರಿವೆ.

news18-kannada
Updated:October 13, 2020, 4:49 PM IST
IPL 2020: RCBಗೆ ಶುರುವಾಗಿದೆ ಹೊಸ ಟೆನ್ಶನ್: ಕೊಹ್ಲಿಯ ಚಿಂತೆ ಹೆಚ್ಚಿಸಿದ ಗೆಳೆಯ..!
Virat Kohli
  • Share this:
ಐಪಿಎಲ್ 2020 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್​ಗೆ ಏರುವ ವಿಶ್ವಾಸ ಮೂಡಿಸಿದೆ. ಅದರಲ್ಲೂ ಸತತ ಗೆಲುವಿನಿಂದ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಕೊಹ್ಲಿ ಪಡೆಯ ಮುಂದಿನ ಗುರಿ ಕಿಂಗ್ಸ್ ಇಲೆವೆನ್ ಪಂಜಾಬ್. ಇದುವೇ ಈಗ ಆರ್​ಸಿಬಿ ಚಿಂತೆಗೆ ಕಾರಣವಾಗಿದೆ. ಏಕೆಂದರೆ 13ನೇ ಸೀಸನ್​ನಲ್ಲಿ ಬೆಂಗಳೂರು ತಂಡವನ್ನು ಅತ್ಯಂತ ಹೀನಾಯವಾಗಿ ಸೋಲಿಸಿದ್ದು ಪಂಜಾಬ್ ಟೀಮ್.

ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ 97 ರನ್​ಗಳ ಹೀನಾಯ ಸೋಲನುಭವಿಸಿತ್ತು. ಇದೀಗ ಗೆಲುವಿನ ಲಯದಲ್ಲಿರುವ ಕೊಹ್ಲಿ ಪಡೆ ಮತ್ತೆ ಕಿಂಗ್ಸ್ ಇಲೆವೆನ್ ತಂಡವನ್ನು ಅಕ್ಟೋಬರ್ 15 ರಂದು ಎದುರಾಕಿಕೊಳ್ಳಲಿದೆ. ಈ ಮೂಲಕ ಹಳೆಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದರೆ ಈ ಪಂದ್ಯದ ಮೂಲಕ ಕಿಂಗ್ಸ್ ಇಲೆವೆನ್ ಪಾಳಯದ ಸ್ಪೋಟಕ ಆರಂಭಿಕ ಕ್ರಿಸ್ ಗೇಲ್ ಮತ್ತೆ ಮೈದಾನಕ್ಕಿಳಿಯುವುದು ಬಹುತೇಕ ಖಚಿತ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಫುಡ್‌ ಪಾಯ್ಸನ್‌ನಿಂದ ಬಳಲುತ್ತಿದ್ದ ಗೇಲ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಅ.15 ರಂದು ನಡೆಯುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೊದಲನೇ ಪಂದ್ಯವನ್ನು ತನ್ನ ಗೆಳೆಯ ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ ವಿರುದ್ಧ ಆಡಲು ಮಾಜಿ ಆರ್​ಸಿಬಿ ಆಟಗಾರ ಸಜ್ಜಾಗಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಸ್ಟಾರ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಹೊಟ್ಟೆ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅಭ್ಯಾಸಕ್ಕೆ ಮರಳಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪರ ಈ ಹಿಂದೆಯೇ ಗೇಲ್ ಕಣಕ್ಕಿಳಿಯಬೇಕಿತ್ತು. ಅದರಲ್ಲೂ ಕೆಕೆಆರ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ವಿಂಡೀಸ್ ಆಟಗಾರ ಆಡುವುದು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.


ಇದೀಗ ಸಂಪೂರ್ಣ ಫಿಟ್ ಆಗಿರುವ ಯುನಿವರ್ಸಲ್ ಬಾಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶಾರ್ಜಾ ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸುದ್ದಿ ಬೆನ್ನಲ್ಲೇ  ಆರ್​ಸಿಬಿ ಬೌಲರುಗಳಿಗೆ ಗೇಲ್ ಅನ್ನು ಕಟ್ಟಿ ಹಾಕುವ ಟೆನ್ಶನ್ ಶುರುವಾಗಿದೆ. ಹಾಗೆಯೇ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಗೆಳೆಯನ ಬ್ಯಾಟಿಂಗ್ ತ್ರಂತ್ರಗಳಿಗೆ ಪ್ರತಿತಂತ್ರ ಹೆಣೆಯುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಅಕ್ಟೋಬರ್ 15 ರಂದು ಶಾರ್ಜಾ ಮೈದಾನದಲ್ಲಿ ಎಬಿಡಿ vs ಗೇಲ್, ಕೊಹ್ಲಿ vs ರಾಹುಲ್ ಕದನ ಏರ್ಪಡುವುದಂತು ದಿಟ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
Published by: zahir
First published: October 13, 2020, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories