ಅದು ಐಪಿಎಲ್ನ 26ನೇ ಪಂದ್ಯ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿತ್ತು. ಅಲ್ಲದೆ ಮನೀಶ್ ಪಾಂಡೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಎಸ್ಆರ್ಹೆಚ್ 158 ರನ್ ಪೇರಿಸಿತ್ತು. 159 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ರಿಯಾನ್ ಪರಾಗ್ ಹಾಗೂ ರಾಹುಲ್ ತೆವಾಠಿಯ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೊನೆಯ ಓವರ್ನಲ್ಲಿ ರೋಚಕ ಜಯ ಸಾಧಿಸಿತ್ತು. ಇದೇ ಪಂದ್ಯದಲ್ಲಿ ಖಲೀಲ್ ಅಹ್ಮದ್, ಡೇವಿಡ್ ವಾರ್ನರ್ ಹಾಗೂ ರಾಹುಲ್ ತೆವಾಠಿಯ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಹಾಗೆಯೇ ಅಂತಿಮ ಓವರ್ನಲ್ಲಿ ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟ ಪರಾಗ್ ಮೈದಾನದಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಈ ಸಂಭ್ರಮ ಅಲ್ಲಿಗೆ ಮುಕ್ತಾಯವಾಗಿರಲಿಲ್ಲ.
ಪಂದ್ಯದ ನಂತರ, ರಾಜಸ್ಥಾನ್ ರಾಯಲ್ಸ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಲೇವಡಿ ಮಾಡಿತ್ತು. "ಹೇ ಝೊಮ್ಯಾಟೋ, ನಾವು ಒಂದು LAAAAARGE ಹೈದರಾಬಾದ್ ಬಿರಿಯಾನಿಗೆ ಆದೇಶವನ್ನು ನೀಡಲು ಬಯಸುತ್ತೇವೆ. ಸ್ಥಳ: ಒನ್ ಅ್ಯಂಡ್ ಓನ್ಲಿ ರಾಯಲ್ ಮಿರಾಜ್ " ಎಂದು ಹೈದ್ರಾಬಾದ್ ತಂಡವನ್ನು ಟ್ವೀಟ್ ಮೂಲಕ ಕಾಲೆಳೆದಿದ್ದರು.
ಇದೀಗ 2ನೇ ಮುಖಾಮುಖಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ 8 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಆರ್ಆರ್ ನೀಡಿದ 154 ರನ್ಗಳ ಟಾರ್ಗೆಟ್ನ್ನು 18.1 ಓವರ್ನಲ್ಲಿ ಹೈದರಾಬಾದ್ ಚೇಸ್ ಮಾಡಿದ್ದಾರೆ. ಈ ಪಂದ್ಯದಲ್ಲೂ ಮನೀಷ್ ಪಾಂಡೆ ಆರ್ಆರ್ ವಿರುದ್ಧ ಅಬ್ಬರಿಸಿದ್ದಾರೆ. 47 ಎಸೆತಗಳಲ್ಲಿ 8 ಸಿಕ್ಸರ್ ಒಳಗೊಂಡ ಅಜೇಯ 83 ಚಚ್ಚಿ 2 ಓವರ್ ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನ ಸಂಭ್ರಮದಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆಗಿನ ಹಳೆಯ ಲೆಕ್ಕವನ್ನು ಸನ್ರೈಸರ್ಸ್ ಚುಕ್ತಾ ಮಾಡಲು ಮರೆಯಲಿಲ್ಲ.
ಅಕ್ಟೋಬರ್ 22 ರಂದು ಮಾಡಿದ ರಾಜಸ್ಥಾನ್ ರಾಯಲ್ಸ್ ಮಾಡಿದ ಹೈದರಾಬಾದ್ ಬಿರಿಯಾನಿ ಟ್ರೋಲ್ಗೆ "ನಮ್ಮ ಸ್ನೇಹಿತರಿಗೆ ಖಾರವನ್ನು ನಿಭಾಯಿಸಲು ಸಾಧ್ಯವಿಲ್ಲ, ಬಿರಿಯಾನಿ ಆರ್ಡರ್ ರದ್ದುಗೊಳಿಸಿ. ವಿಶೇಷ ಸೂಚನೆ: ದಾಲ್ ಬಾತಿ ಚೆನ್ನಾಗಿ ಮಾಡಿ ಎಂದು ಮರುತ್ತರ ಮೂಲಕ ಟಾಂಗ್ ನೀಡಿದ್ದಾರೆ. ಕಾಲೆಳೆದಿದ್ದಾರೆ. ಅಲ್ಲಿಗೆ ಸೋಲಿನ ಸೇಡಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಟ್ರೋಲ್ ಲೆಕ್ಕ ಕೂಡ ಚುಕ್ತಾ ಮಾಡಿದ್ದಾರೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ