IPL

  • associate partner
HOME » NEWS » Ipl » IPL 2020 BRETT LEE PICKS MS DHONI LED CHENNAI SUPER KINGS TO WIN TITLE ZP

IPL 2020: ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ ಬ್ರೆಟ್ ಲೀ

2014 ರ ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಯುಎಇಯಲ್ಲಿ ಕೆಲವು ಐಪಿಎಲ್​ ಪಂದ್ಯಗಳನ್ನು ನಡೆಸಲಾಗಿತ್ತು. ಇದೇ ವೇಳೆ ಅಬುಧಾಬಿಯ ಮೈದಾನದಲ್ಲಿ ಆಡಿದ ಆರು ಪಂದ್ಯಗಳ ಸರಾಸರಿ ಸ್ಕೋರ್ ಕೇವಲ 147 ರನ್​ಗಳು.

news18-kannada
Updated:September 18, 2020, 7:38 PM IST
IPL 2020: ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ ಬ್ರೆಟ್ ಲೀ
Brett Lee
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಸೀಸನ್ ನಾಳೆಯಿಂದ ಯುಎಇನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ. ಐಪಿಎಲ್​ನ ಎರಡು ಬಲಿಷ್ಠ ತಂಡಗಳ ಮುಖಾಮುಖಿಯನ್ನು ವಿಶ್ವ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. 2019ರ ಫೈನಲ್​ನಲ್ಲಿ 1 ರನ್​ಗಳಿಂದ ಸೋತಿದ್ದ ಸಿಎಸ್​ಕೆ ತಂಡವು ಮುಂಬೈ ವಿರುದ್ಧ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಪಣ ತೊಟ್ಟಿದ್ದು, ಈ ಮೂಲಕ ಕಳೆದ ವರ್ಷದ ಸೋಲಿನ ಸೇಡು ತೀರಿಸಲು ಸಜ್ಜಾಗಿ ನಿಂತಿದ್ದಾರೆ. ಅತ್ತ ರೋಹಿತ್ ಪಡೆ ಕೂಡ ಆತ್ಮ ವಿಶ್ವಾಸದಿಂದ ಪುಟಿದೇಳುತ್ತಿದ್ದು, ಸಿಎಸ್​ಕೆ ವಿರುದ್ಧದ ಗೆಲುವಿನ ಮೂಲಕ ಭರ್ಜರಿಯಾಗಿ ಜಯದ ಖಾತೆ ತೆರೆಯಲು ಯೋಜನೆ ರೂಪಿಸಿದ್ದಾರೆ.

ಈ ಎರಡು ಬಲಿಷ್ಠ ಪಡೆಗಳ ಕದನವನ್ನು ಮಾಜಿ ಕೆಕೆಆರ್ ಬೌಲರ್, ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ ಕೂಡ ಎದುರು ನೋಡುತ್ತಿದ್ದು, ಈ ಬಾರಿ ಯಾರಾಗಲಿದ್ದಾರೆ ಚಾಂಪಿಯನ್ ಎಂಬ ಬಗ್ಗೆ ಕೂಡ ಭವಿಷ್ಯ ನುಡಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರೆಟ್ ಲೀ, ನನ್ನ ಪ್ರಕಾರ ಯುಎಇ ಐಪಿಎಲ್​ನಲ್ಲಿ ಧೋನಿ ನಾಯಕತ್ವದ ಸಿಎಸ್​ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದಿದ್ದಾರೆ.

ಏಕೆಂದರೆ ಸ್ಪಿನ್ ವಿಭಾಗದ ದೃಷ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠವಾಗಿದೆ. ಯುಎಇ ಪಿಚ್​ಗಳು ಸ್ಪಿನ್ನರ್‌ಗಳಿಗೆ ಸಹಕಾರಿ. ಹಾಗೆಯೇ ಬೌಂಡರಿ ದೊಡ್ಡದಿರುವ ಕಾರಣ ಹೆಚ್ಚಿನ ಸಿಕ್ಸರ್‌ಗಳನ್ನು ಹೊಡೆಯುವುದು ಕಷ್ಟ. ಅಲ್ಲದೆ ಫೀಲ್ಡ್ ಭಾರತೀಯ ಮೈದಾನದಷ್ಟು ವೇಗವಾಗಿಲ್ಲ. ಮೊದಲ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದ್ದು, ಅಲ್ಲಿ ಐಪಿಎಲ್ ಪಂದ್ಯಗಳಲ್ಲಿ ಕಡಿಮೆ ರನ್ ಮೂಡಿಬಂದಿದೆ. ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ ಕಾರ್ಯಕ್ಷಮತೆ ಮತ್ತಷ್ಟು ಸುಧಾರಿಸಿದ್ರೆ ಸಿಎಸ್​ಕೆ ಪರ ಅದ್ಭುತ ಫಲಿತಾಂಶ ಹೊರಬೀಳಲಿದೆ ಎಂದು ಬ್ರೆಟ್ ಲೀ ಹೇಳಿದರು.

2014 ರ ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಯುಎಇಯಲ್ಲಿ ಕೆಲವು ಐಪಿಎಲ್​ ಪಂದ್ಯಗಳನ್ನು ನಡೆಸಲಾಗಿತ್ತು. ಇದೇ ವೇಳೆ ಅಬುಧಾಬಿಯ ಮೈದಾನದಲ್ಲಿ ಆಡಿದ ಆರು ಪಂದ್ಯಗಳ ಸರಾಸರಿ ಸ್ಕೋರ್ ಕೇವಲ 147 ರನ್​ಗಳು. ಹಾಗಾಗಿ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಹಾಗೆಯೇ ಸಿಎಸ್​ಕೆ ತಂಡದಲ್ಲಿರುವ ಸ್ಪಿನ್ನರ್​ಗಳು ಒಬ್ಬರಿಗಿಂತ ಒಬ್ಬರು ಸಂಪೂರ್ಣವಾಗಿ ಭಿನ್ನರು ಎಂದು ಲೀ ಬಣ್ಣಿಸಿದರು.

ಆದರೆ, ಬ್ಯಾಟಿಂಗ್‌ನಲ್ಲಿ ಸುರೇಶ್ ರೈನಾ ಅವರ ನಿರ್ಗಮನ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತವನ್ನುಂಟು ಮಾಡಿದೆ. ಇದಲ್ಲದೆ ಪವರ್‌ಪ್ಲೇ ತಜ್ಞ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಬಾರಿ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಸ್ಪಿನ್ನರ್​ಗಳ ತಂತ್ರ ಫಲಿಸದಿದ್ರೆ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಗಳಿಸಬೇಕಾಗುತ್ತದೆ. ಎದುರಾಳಿಗಳ ಮೊತ್ತ 160 ಮೀರಿದರೆ, ಅದನ್ನು ಬೆನ್ನಟ್ಟುವ ಕೆಲಸ ಬ್ಯಾಟ್ಸ್‌ಮನ್‌ಗಳದ್ದು ಎಂದು ಲೀ ಹೇಳಿದರು.

ಸರ್ಧಾತ್ಮಕ ಕ್ರಿಕೆಟ್‌ನಿಂದ ಒಂದು ವರ್ಷಕ್ಕೂ ಹೆಚ್ಚು ಸಮಯದ ವಿರಾಮದ ನಂತರ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಮೈದಾನಕ್ಕೆ ಇಳಿಯುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಚೆನ್ನೈನ ನಿಧಾನಗತಿಯ ಬೌಲರ್‌ಗಳು ಯುಎಇ ಪಿಚ್​​ಗಳಲ್ಲಿ ಮಿಂಚಲಿದ್ದಾರೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಅತ್ಯುತ್ತಮ ಸ್ಪಿನ್ನರ್​ಗಳನ್ನು ಒಳಗೊಂಡಿರುವ ಸಿಎಸ್‌ಕೆಗೆ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಬ್ರೆಟ್ ಲೀ ಅಭಿಪ್ರಾಯಪಟ್ಟರು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂ.ಎಸ್.ಧೋನಿ (ನಾಯಕ-ವಿಕೆಟ್ ಕೀಪರ್), ಇಮ್ರಾನ್ ತಾಹಿರ್, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಜೋಶ್ ಹ್ಯಾಜಲ್‌ವುಡ್, ಕೇದಾರ್ ಜಾಧವ್, ಕರಣ್ ಶರ್ಮಾ, ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಲುಂಗಿ ಎನ್‌ಗಿಡಿ, ಸ್ಯಾಮ್ ಕರ್ರನ್ , ಶೇನ್ ವ್ಯಾಟ್ಸನ್, ಮೋನು ಕುಮಾರ್, ಸಾಯಿ ಕಿಶೋರ್, ಎನ್ ಜಗದೀಸನ್, ರುತುರಾಜ್ ಗಾಯಕವಾಡ್, ಕೆ.ಎಂ.ಆಸಿಫ್, ರವೀಂದ್ರ ಜಡೇಜಾ, ಮುರಳಿ ವಿಜಯ್
Published by: zahir
First published: September 18, 2020, 7:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories