ಬ್ರೆಂಡನ್ ಮೆಕಲಂ...ಟಿ20 ಕ್ರಿಕೆಟ್ನ ದೊಡ್ಡ ಹೆಸರು. ಅದರಲ್ಲೂ ಐಪಿಎಲ್ನಲ್ಲಿ ಮೊದಲ ಶತಕ ಸಿಡಿಸಿದ್ದು ಇದೇ ಮೆಕಲಂ. ಅತ್ತ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟಿಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೋಚ್, ಇತ್ತ ಕೆಕೆಆರ್ ತಂಡದ ಪ್ರದರ್ಶನದಿಂದ ಚಿಂತಿತರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಕೇವಲ 84 ರನ್ಗಳಿಸಿರುವುದು ಇದೀಗ ಕೋಚ್ ಕಣ್ಣು ಕೆಂಪಾಗಿಸಿದೆ. ಈ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 112 ರನ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 148 ರನ್ಗಳಿಗೆ ಮುಗ್ಗರಿಸಿದ್ದ ಕೆಕೆಆರ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್ನಲ್ಲಿ ಜಯಗಳಿಸಿತ್ತು.
ಈ ಪ್ರದರ್ಶನ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ ಅಂದುಕೊಂಡಿದ್ದರೆ, ಮತ್ತದೇ ಬ್ಯಾಟಿಂಗ್ ವೈಫಲ್ಯದೊಂದಿಗೆ ಆರ್ಸಿಬಿ ವಿರುದ್ದ 8 ವಿಕೆಟ್ಗಳಿಂದ ಸೋಲನುಭವಿಸಿತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೆಕೆಆರ್ ಕೋಚ್ ಬ್ರೆಂಡನ್ ಮೆಕಲಂ ತಂಡದ ಆಟಗಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನಾವು ಮೇಲಿನ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಯೋಜನೆಗಳನ್ನು ರೂಪಿಸಿದ್ದೆವು. ಆದರೆ ದುರಾದೃಷ್ಟವಾಶತ್, ಅದು ಫಲ ಕೊಡಲಿಲ್ಲ. ನಾವು ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದೇವೆ. ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. 40 ರನ್ಗೆ 6 ವಿಕೆಟ್ ಕಳೆದುಕೊಂಡು ತುಂಬಾ ಪಂದ್ಯಗಳನ್ನು ಗೆಲ್ಲಲಾಗುವುದಿಲ್ಲ ಎಂದು ಮೆಕಲಂ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಅದೃಷ್ಟ ಇನ್ನೂ ಕೂಡ ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ. ಈ ಅದೃಷ್ಟವನ್ನು ಮತ್ತಷ್ಟು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ. ನಮ್ಮ ವಿಧಾನದಲ್ಲಿ ನಾವು ತುಂಬಾ ಹಿಂಜರಿಯುತ್ತಿದ್ದೇನೆ. ಇದು ಸ್ವಲ್ಪ ನಿರಾಶಾದಾಯಕ. ನಾವು ಸಕಾರಾತ್ಮಕವಾಗಿರಲು ಮತ್ತು ಕೆಲ ಪ್ರಯತ್ನಗಳ ಬಗ್ಗೆ ಆಟದ ಮೊದಲು ಮಾತನಾಡಿದ್ದೇವೆ. ಆದರೂ 84 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸ್ಕೋರ್ ಬಾರಿಸಿ 150 ಪಂದ್ಯಗಳಲ್ಲಿ ಒಂದನ್ನು ನೀವು ಗೆಲ್ಲಬಹುದಷ್ಟೇ ಎಂದು ಮೆಕಲಂ ಹೇಳಿದ್ದಾರೆ.
ನಾವು ಮತ್ತೆ ಪುಟಿಯಬೇಕಾಗಿದೆ. ಕೆಲ ದಿನಗಳಲ್ಲಿ ಮತ್ತೆ ಆಡಲಿದ್ದೇವೆ. ಅಂದು ಪಂದ್ಯಾವಳಿಯ ಸ್ವರೂಪ ಮತ್ತು ಪರಿಸ್ಥಿತಿಗಳು ಹೊಸ ಸವಾಲಾಗಿರಲಿದೆ. ಈ ಚಾಲೆಂಜ್ಗಳನ್ನು ಸ್ವೀಕರಿಸಲು ಈಗಲೇ ಸಿದ್ಧರಾಗಬೇಕಿದೆ ಎಂದು ಮೆಕಲಂ ಹೇಳಿದರು. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ದೊಡ್ಡ ಸವಾಲಾಗಿದೆ. ಈ ಎರಡೂ ತಂಡಗಳು ಮುಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೆ ಕೆಕೆಆರ್ ಅಂಕ ಪಟ್ಟಿಯಲ್ಲಿ ಕೆಳಗಿಳಿಯಲಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ