• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಅತ್ತ ಕ್ಯಾನ್ಸರ್‌ ವಿರುದ್ಧ ತಂದೆಯ ಹೋರಾಟ: ಇತ್ತ ಬೆನ್ ಸ್ಟೋಕ್ಸ್‌ ದಾಖಲೆಯ ಆರ್ಭಟ

IPL 2020: ಅತ್ತ ಕ್ಯಾನ್ಸರ್‌ ವಿರುದ್ಧ ತಂದೆಯ ಹೋರಾಟ: ಇತ್ತ ಬೆನ್ ಸ್ಟೋಕ್ಸ್‌ ದಾಖಲೆಯ ಆರ್ಭಟ

Ben Stokes

Ben Stokes

ಇದಕ್ಕೆ ಸರಿಯಾಗಿ ಸ್ಟೋಕ್ಸ್ ಎಂಬ ವಿಶ್ವಕಪ್ ವೀರ ಅಬ್ಬರಿಸಿದರು. ಐಪಿಎಲ್​ನ ಬಲಿಷ್ಠ ಬೌಲಿಂಗ್ ಪಡೆಯನ್ನು ಧೂಳೀಪಟಗೈದರು. ಕೇವಲ 59 ಎಸೆತಗಳಲ್ಲಿ ಶತಕ ಪೂರೈಸಿದರು.

  • Share this:

ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಿದೆ. ಈ ಭರ್ಜರಿ ಗೆಲುವಿನ ಹಿಂದಿರುವ ರುವಾರಿ ಬೆನ್ ಸ್ಟೋಕ್ಸ್. ಐಪಿಎಲ್​ನಲ್ಲಿ 12 ಪಂದ್ಯಗಳು ಮುಗಿದರೂ ಸ್ಟೋಕ್ಸ್ ಇದುವರೆಗೆ ಆಡಿರುವುದು ಕೇವಲ 6 ಪಂದ್ಯಗಳು ಮಾತ್ರ. ಇದಕ್ಕೆ ಕಾರಣ ಇಂಗ್ಲೆಂಡ್ ಆಲ್​ರೌಂಡರ್ ತಡವಾಗಿ ತಂಡವನ್ನು ಕೂಡಿಕೊಂಡಿರುವುದು. ಆಸ್ಟ್ರೇಲಿಯಾ ಸರಣಿ ಮುಗಿಸಿ ಇಂಗ್ಲೆಂಡ್ ಆಟಗಾರರು ದುಬೈಗೆ ಪ್ರಯಾಣ ಬೆಳೆಸಿದರೂ, ಅವರೊಂದಿಗೆ ಸ್ಟೋಕ್ಸ್ ಆಗಮಿಸಿರಲಿಲ್ಲ. ಏಕೆಂದರೆ ಅದಾಗಲೇ ಸ್ಟೋಕ್ಸ್ ನ್ಯೂಜಿಲೆಂಡ್​ನತ್ತ ಮುಖ ಮಾಡಿದ್ದರು.


ಆಸ್ಟ್ರೇಲಿಯಾ ವಿರುದ್ದದ ಸರಣಿಗೂ ಮುನ್ನ ಪಾಕಿಸ್ತಾನ ನಡುವಣ ಟೆಸ್ಟ್ ಸರಣಿ ವೇಳೆ ಬೆನ್ ಸ್ಟೋಕ್ಸ್ ಅವರ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿತ್ತು. ತಕ್ಷಣವೇ ಸರಣಿಯಿಂದ ಹಿಂದೆ ಸರಿದು ನ್ಯೂಜಿಲೆಂಡ್​ಗೆ ತೆರಳಿದ್ದರು. ಬೆನ್ ಸ್ಟೋಕ್ಸ್ ಕುಟುಂಬ ಮೂಲತಃ ನ್ಯೂಜಿಲೆಂಡ್​ನವರು. ಅವರ ತಂದೆ ಮೆದುಳಿನ ಕ್ಯಾನ್ಸರ್​ಗೆ ತುತ್ತಾಗಿದ್ದರು. ಹೀಗಾಗಿ ಕಳೆದ ವರ್ಷ ಕ್ರಿಸ್​ಮಸ್ ವೇಳೆ ಜೋಹಾನ್ಸ್‌ಬರ್ಗ್‌ ಕ್ಯಾನ್ಸರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ಗೆ ವಾಪಸ್ಸಾಗಿದ್ದರು. ಈ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ಕಿವೀಸ್ ನಾಡಿನತ್ತ ಪ್ರಯಾಣ ಬೆಳೆಸಿದ್ದರು. ಇದೇ ಕಾರಣದಿಂದ ಸ್ಟೋಕ್ಸ್ ಈ ಬಾರಿ ಐಪಿಎಲ್ ಆಡುವುದಿಲ್ಲ ಎನ್ನಲಾಗಿತ್ತು.


ಆದರೆ ಆರು ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್​ಗೆ ಬೆನ್ ಸ್ಟೋಕ್ಸ್​ನಂತಹ ಬೆಸ್ಟ್ ಆಲ್​ರೌಂಡರ್​ನ ಅವಶ್ಯಕತೆಯಿತ್ತು. ಅದೃಷ್ಟವಶಾತ್ ಅತ್ತ ಆಸ್ಪತ್ರೆಯಲ್ಲಿದ್ದ ತಂದೆ ಆರೋಗ್ಯದಲ್ಲೂ ಚೇತರಿಕೆ ಕಾಣಿಸಿತು. ನೇರವಾಗಿ ದುಬೈಗೆ ಆಗಮಿಸಿ ತಂಡವನ್ನು ಸೇರಿಕೊಂಡರು. ಮೊದಲ ಐದು ಪಂದ್ಯಗಳಲ್ಲಿ ಅಬ್ಬರಿಸಲು ಯತ್ನಿಸಿದರೂ, ಅದನ್ನು ಸಿಡಿಲಬ್ಬರವನ್ನಾಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಭಾನುವಾರ ಮುಂಬೈ ವಿರುದ್ಧದ ಪಂದ್ಯ ರಾಜಸ್ಥಾನ್ ರಾಯಲ್ಸ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು.


ಇದಕ್ಕೆ ಸರಿಯಾಗಿ ಸ್ಟೋಕ್ಸ್ ಎಂಬ ವಿಶ್ವಕಪ್ ವೀರ ಅಬ್ಬರಿಸಿದರು. ಐಪಿಎಲ್​ನ ಬಲಿಷ್ಠ ಬೌಲಿಂಗ್ ಪಡೆಯನ್ನು ಧೂಳೀಪಟಗೈದರು. ಕೇವಲ 59 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಅಜೇಯರಾಗುಳಿದ ಆರ್​ಆರ್ ತಂಡದ ಆಲ್​ರೌಂಡರ್ 60 ಎಸೆತಗಳಲ್ಲಿ 107 ರನ್ ಬಾರಿಸಿದರು. ಈ ವೇಳೆ ಸ್ಟೋಕ್ಸ್ ಬ್ಯಾಟ್​ನಿಂದ ಸಿಡಿದದ್ದು 14 ಬೌಂಡರಿ ಹಾಗೂ 3 ಸಿಕ್ಸರ್​ಗಳು. ಸ್ಟೋಕ್ಸ್ ಅವರ ಈ ಅಮೋಘ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಿರಿಸಿತು.


ಪಂದ್ಯದ ಬಳಿಕ ಮಾತನಾಡಿದ ಬೆನ್‌ ಸ್ಟೋಕ್ಸ್‌, ನಿಜ ಹೇಳಬೇಕೆಂದರೆ, ಇದು ಕಹಿಯನ್ನೊಳಗೊಂಡ ಸಿಹಿ ಅನುಭವ. ನಿಜವಾಗಿಯೂ, ನಾನು ನಿನ್ನೆ ಹೊಂದಿದ್ದ ತರಬೇತಿಯು ಅತ್ಯುತ್ತಮವಾಗಿತ್ತು. ಅದೇ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದೆ. ಆರಂಭದಲ್ಲಿ ಮುಂಬೈ ಬೌಲಿಂಗ್‌ಗೆ ಆಡುವುದು ಸ್ವಲ್ಪ ಕಷ್ಟವಿತ್ತು. ನಾವು ಬುಮ್ರಾ ಅವರಿಗೆ ಸ್ಕೋರ್ ಮಾಡಬಹುದೆಂದು ಭಾವಿಸಿದ್ದಕ್ಕಿಂತಲೂ ಹೆಚ್ಚು ಮುಕ್ತವಾಗಿ ರನ್ ಮಾಡಿದ್ದೇವೆ. ಪ್ರಸ್ತುತ ಪರಿಸ್ಥಿತಿ ಸ್ವಲ್ಪ ಕಷ್ಟಕರ. ಆದರೆ ಈ ಆಟ ನಮ್ಮ ಮನೆಯವರಿಗೆ ಸ್ವಲ್ಪ ಸಂತೋಷವನ್ನು ನೀಡಲಿದೆ ಎಂದು ಭಾವಿಸುತ್ತೇನೆ. ಅಲ್ಲದೆ ಈ ಶತಕವನ್ನು ತಂದೆಗೆ ಅರ್ಪಿಸುವುದಾಗಿ ಸ್ಟೋಕ್ಸ್ ತಿಳಿಸಿದರು.


ಈ ಭರ್ಜರಿ ಶತಕದೊಂದಿಗೆ ಬೆನ್​ ಸ್ಟೋಕ್ಸ್​ ಐಪಿಎಲ್​ನಲ್ಲಿ ಎರಡು ಬಾರಿ ಚೇಸಿಂಗ್​ನಲ್ಲಿ ಸೆಂಚುರಿ ಬಾರಿಸಿದ ದಾಖಲೆ ಬರೆದರು. ಈ ಹಿಂದೆ ಗುಜರಾತ್ ಲಯನ್ಸ್ ವಿರುದ್ಧ ಶತಕ ಸಿಡಿಸಿದ್ದರು. ಗುಜರಾತ್ ನೀಡಿದ 161 ರನ್​ಗಳ ಟಾರ್ಗೆಟ್​ನ್ನು ಏಕಾಂಗಿಯಾಗಿ ಬೆನ್ನತ್ತಿದ ಸ್ಟೋಕ್ಸ್ 63 ಎಸೆತಗಳಲ್ಲಿ 103 ರನ್ ಬಾರಿಸಿ ರೈಸಿಂಗ್ ಪುಣೆ ಜೈಂಟ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು.
POINTS TABLE:SCHEDULE TIME TABLE:ORANGE CAP:PURPLE CAP:RESULT DATA:MOST SIXES:ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!

First published: