13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ತೆರೆಬಿದ್ದಾಗಿದೆ. ಫೈನಲ್ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿತು. ರೋಹಿತ್ ಪಡೆ ಐದನೇ ಬಾರಿ ಕಪ್ ಗೆಲ್ಲಲು ತಂಡದ ಮಧ್ಯಮ ಕ್ರಮಾಂಕ ಆಟಗಾರ ಸೂರ್ಯಕುಮಾರ್ ಯಾದವ್ ಕೊಡುಗೆ ಅಪಾರ. ಟೂರ್ನಿಯ ಆರಂಭದಿಂದ ಬಹಳಷ್ಟು ಸುದ್ದಿಯಲ್ಲಿದ್ದ ಯಾದವ್ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಸದ್ಯ ಟೂರ್ನಿ ಮುಗಿಸಿ ಮನೆಗೆ ತೆರಳಿರುವ ಯಾದವ್ಗೆ ಕುಟುಂಬ ವರ್ಗ ದೊಡ್ಡ ಶಾಕ್ ನೀಡಿತು.
ಪ್ರತಿಬಾರಿಯ ಐಪಿಎಲ್ ಸೀಸನ್ನಲ್ಲಿ ರನ್ ಮಳೆಯನ್ನೇ ಸುರಿಸುತ್ತಿದ್ದ ಸೂರ್ಯಕುಮಾರ್ ಈ ಬಾರಿ ಅದೆ ಲಯದಿಂದ ಬ್ಯಾಟ್ ಬೀಸಿದರು. ಟೂರ್ನಿಯಲ್ಲಿ 480 ರನ್ ಕಲೆಹಾಕಿದರು. ಇಷ್ಟಾದರು ಇವರಿಗೆ ಭಾರತ ತಂಡದ ಪರ ಆಡುವ ಭಾಗ್ಯ ಇನ್ನೂ ಒದಗಿಬಂದಿಲ್ಲ. ಈ ವಿಚಾರ ಐಪಿಎಲ್ ಮಧ್ಯಂತರದಲ್ಲಿ ಸಾಕಷ್ಟು ಚರ್ಚೆಕೂಡ ಆಯಿತು.
IPL 2020: ಐಪಿಎಲ್ನ ಈ ಟೀಂಗೆ ಭಾರತ ತಂಡವನ್ನೇ ಸೋಲಿಸುವ ಶಕ್ತಿ ಇದೆ ಎಂದ ಆಕಾಶ್ ಚೋಪ್ರಾ
ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅನೇಕರಿಗೆ ಮಣೆ ಹಾಕಿತು. ಆದರೆ, ಅನೇಕ ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿರುವ ಸೂರ್ಯಕುಮಾರ್ ಹೆಸರು ಮಾತ್ರ ಇರಲಿಲ್ಲ.
ಇದರಿಂದ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕೆಲ ಕ್ರಿಕೆಟ್ ಪಂಡಿತರು ಕೂಡ ಆಯ್ಕೆ ಸಮಿತಿ ವಿರುದ್ಧ ತಿರುಗಿಬಿದ್ದರು. ಇದಾದ ಮುಂದಿನ ಪಂದ್ಯದಲ್ಲೇ ಟೀಂ ಇಂಡಿಯಾ ಹಾಗೂ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ನಡುವೆ ಸಣ್ಣ ಸಂಘರ್ಷ ನಡೆದ ವಿಚಾರ ಗೊತ್ತೇ ಇದೆ.
IPL 2021: 9 ತಂಡಗಳ ಜೊತೆ ಐಪಿಎಲ್ 2021ರಲ್ಲಿ ಇರಲಿದೆ ಮತ್ತೊಂದು ಬಿಗ್ ಸರ್ಪ್ರೈಸ್: ಏನದು?, ಇಲ್ಲಿದೆ ಮಾಹಿತಿ
ಆದರೆ, ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಾದವ್ ಮುಂಬೈ ತಂಡಕ್ಕೆ ತನ್ನಲಾದ ಎಲ್ಲ ಕೊಡುಗೆಗಳನ್ನು ನೀಡಿದರು. ಹೀಗೆ ಮುಂಬೈ ಇಂಡಿಯನ್ಸ್ ಐದನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು. ಸದ್ಯ ಟೂರ್ನಿ ಮುಗಿದು ಮನೆಗೆ ಬಂದ ಸೂರ್ಯಕುಮಾರ್ ಯಾದವ್ಗೆ ಕುಟುಂಬದವರೆಲ್ಲ ಒಟ್ಟಾಗಿ ಸರ್ಪ್ರೈಸ್ ನೀಡಿದ್ದಾರೆ.
ವಿಡಿಯೋ ಕೃಪೆ: ಕ್ರಿಕ್ವಿಕ್
ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ತಮ್ಮ ಮನೆಗೆ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಕುಟುಂಬದವರೆಲ್ಲ ಒಂದಾಗಿ ಸೂರ್ಯಕುಮಾರ್ಗೆ ಆರತಿ ಎತ್ತಿ, ತಿಲಕ ಇಟ್ಟು ಅದ್ಧೂರಿಯಾಗಿ ವೆಲ್ಕಮ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ