Anushka Sharma: ಐಪಿಎಲ್​ನಲ್ಲಿ ಶುಭಾರಂಭ; ವಿರಾಟ್​ ಹಾಗೂ ಆರ್​ಸಿಬಿಗೆ ಶುಭಕೋರಿದ ಅನುಷ್ಕಾ ಶರ್ಮಾ

EXcerpt IPL 2020 | Virat Kohli: ಆರ್​ಸಿಬಿಯ ರನ್​ ರೇಟ್​ +0.500 ಇದ್ದರೆ, ಸಿಎಸ್​ಕೆಯದ್ದು, +0486 ಇದೆ. ಡೆಲ್ಲಿಯದ್ದು +0.000 ಇದೆ. ಇದಕ್ಕೆ ನಟಿ ಅನುಷ್ಕಾ ಶರ್ಮಾ ಆರ್​ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ಅನುಷ್ಕಾ-ವಿರಾಟ್

ಅನುಷ್ಕಾ-ವಿರಾಟ್

  • Share this:
    ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್​ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ ಅಬ್ಬರಿಸಿದರೆ ಬೌಲಿಂಗ್​ನಲ್ಲಿ ಚಹಾಲ್ ಸ್ಲಿನ್ ಮೋಡಿಯಿಂದ ಕೊಹ್ಲಿ ಪಡೆ 10 ರನ್​ಗಳ ಜಯದೊಂದಿಗೆ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಿದೆ. ಈ ಗೆಲುವಿಗೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಶುಭಾಶಯ ಕೋರಿದ್ದಾರೆ. ಆರ್​ಸಿಬಿ, ಸಿಎಸ್​ಕೆ, ಡೆಲ್ಲಿ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್​ ಎರಡೇ ಬಂದರೂ ರನ್​ ರೇಟ್​ ಆಧಾರದ ಮೇಲೆ ಆರ್​ಸಿಬಿ ಸಿಎಸ್​ಕೆಗಿಂತ ಮುಂದಿದೆ. ಆರ್​ಸಿಬಿಯ ರನ್​ ರೇಟ್​ +0.500 ಇದ್ದರೆ, ಸಿಎಸ್​ಕೆಯದ್ದು, +0486 ಇದೆ. ಡೆಲ್ಲಿಯದ್ದು +0.000 ಇದೆ. ಇದಕ್ಕೆ ನಟಿ ಅನುಷ್ಕಾ ಶರ್ಮಾ ಆರ್​ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಇನ್​ಸ್ಟಾಗ್ರಾಂ ಸ್ಟೇಟಸ್​​ನಲ್ಲಿ ಆರ್​ಸಿಬಿ ಗೆಲುವಿನ ಫೋಟೋ ​ ಹಾಕಿರುವ ನಟಿ ಅನುಷ್ಕಾ ಶರ್ಮಾ, ವಿನ್ನಿಂಗ್​ ಸ್ಟಾರ್ಟ್​ ಎಂದು ಬರೆದುಕೊಂಡಿದ್ದಾರೆ.



    ಮದುವೆಯಾದ ನಂತರ ಅನುಷ್ಕಾ ಶರ್ಮಾ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ನಟನೆಗಿಂತ ಸಿನಿಮಾ ನಿರ್ಮಾಣ ಕಾರ್ಯದಲ್ಲೇ ಹೆಚ್ಚು ತೊಡಗಿದ್ದರು. ಅವರ ಹೊಟ್ಟೆ ಕೊಂಚ ಉಬ್ಬಿದ್ದರಿಂದ ಅನುಷ್ಕಾ ಗರ್ಭಿಣಿ ಎಂದೇ ಹೇಳಲಾಗುತ್ತಿತ್ತು, ಈಗಖುದ್ದು ಅನುಷ್ಕಾ ಶರ್ಮಾ ಈ ವಿಚಾರವನ್ನು ಖಚಿತ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಕಿರುವ ಅನುಷ್ಕಾ, ನಾವು ಈಗ ಇಬ್ಬರಲ್ಲ ಮೂವರು ಎಂದು ಹೇಳಿದ್ದಾರೆ. ಈ ಮೂಲಕ ಅನುಷ್ಕಾ ಗರ್ಭಿಣಿ ಎಂಬುದನ್ನು ಅಧಿಕೃತಗೊಳಿಸಿದ್ದಾರೆ. ಅನುಷ್ಕಾ ಮುಂಬೈನಲ್ಲೇ ಇದ್ದಾರೆ.

    ಮಿಂಚಿದ ಆರ್​ಸಿಬಿ:

    ಆರ್​ಸಿಬಿ ನೀಡಿದ್ದ 164 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್(6) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜಾನಿ ಬೈರ್​ಸ್ಟೋ ಜೊತೆಯಾದ ಮನೀಶ್ ಪಾಂಡೆ ಅತ್ಯುತ್ತಮ ಆಟ ಪ್ರದರ್ಶಿಸಿದರು.

    ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಆರ್​ಸಿಬಿ ಬೌಲರ್​ಗಳನ್ನು ಕಾಡಿದರು. ಆದರೆ, ಉತ್ತಮವಾಗೇ ಆಡುತ್ತಿದ್ದ ಮನೀಶ್ ಪಾಂಡೆ 34 ರನ್ ಗಳಿಸಿರುವಾಗ ಚಹಾಲ್ ಬೌಲಿಂಗ್​ನಲ್ಲಿ ಔಟ್ ಆದರು. ಈ ಮೂಲಕ ಬೈರ್​ಸ್ಟೋ-ಪಾಂಡೆ 67 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಆದರೆ, ತನ್ನ ಅದ್ಭುತ ಆಟ ಮುಂದುವರೆಸಿದ ಬೈರ್​ಸ್ಟೋ ತಂಡದ ರನ್ ಗತಿಯನ್ನು ಕಡಿಮೆ ಆಗದಂತೆ ನೋಡಿಕೊಂಡರು. ಅದರಂತೆ ಅರ್ಧಶತಕವನ್ನೂ ಪೂರೈಸಿದರು. ಆದರೆ, ಈ ಸಂದರ್ಭ ನಡೆದಿದ್ದು ಚಹಾಲ್ ಸ್ಪಿನ್ ಮೋಡಿ.

    ತನ್ನ ಗೂಗ್ಲಿ ಬೌಲಿಂಗ್​ನಿಂದ ಬೈರ್​ಸ್ಟೋ ಅವರನ್ನು ಬೌಲ್ಡ್​ ಮಾಡಿದರೆ ಬಂದ ಬೆನ್ನಲ್ಲೆ ವಿಜಯ್ ಶಂಕರ್ ಕೂಡ ಚಹಾಲ್ ಸ್ಪಿನ್ ಬಲೆಗೆ ಸಿಲುಕು ಪೆವಿಲಯನ್ ಸೇರಿಕೊಂಡರು. ಬೈರ್​ಸ್ಟೋ 43 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 61 ರನ್ ಗಳಿಸಿದರು. ಇದರ ಬೆನ್ನಲ್ಲೆ ಪ್ರಿಯಂ ಗರ್ಗ್​ ಕೂಡ 12 ರನ್​ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

    ಅಂತಿಮವಾಗಿ ಸನ್​ರೈಸರ್ಸ್​ 19.4 ಓವರ್​ನಲ್ಲಿ 153 ರನ್​ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಯಜುವೇಂದ್ರ ಚಹಾಲ್ 3 ವಿಕೆಟ್ ಕಿತ್ತು ಮಿಂಚಿದರೆ, ನವ್​ದೀಪ್ ಸೈನಿ 2 ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದರು. 10 ರನ್​ಗಳ ಗೆಲುವಿನೊಂದಿಗೆ ಆರ್​ಸಿಬಿ ಐಪಿಎಲ್ 2020 ರಲ್ಲಿ ಭರ್ಜರಿ ಶುಭಾರಂಭ ಮಾಡಿ 2 ಅಂಕ ತನ್ನದಾಗಿಸಿದೆ.
    Published by:Rajesh Duggumane
    First published: