AB de Villiers: ಸಿಡಿಲಬ್ಬರದ ಸಿಡಿಲಮರಿ ಎಬಿಡಿ ಆರ್ಭಟಕ್ಕೆ ಕ್ರಿಸ್ ಗೇಲ್ ದಾಖಲೆಗಳು ಉಡೀಸ್..!

IPL Records: 5 ಬೌಂಡರಿ 6 ಸಿಕ್ಸರ್ ಒಳಗೊಂಡ 73 ರನ್​ಗಳೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಎಬಿಡಿ ತಮ್ಮದಾಗಿಸಿಕೊಂಡರು.

AB de Villiers

AB de Villiers

  • Share this:
    ಶಾರ್ಜಾದ ಮರಳುಗಾಡಿನ ಬದಿಯಲ್ಲಿರುವ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ಬಿರುಗಾಳಿ ಎದ್ದಿತ್ತು. ಹೀಗೆ ಬಿರುಗಾಳಿ ಎಬ್ಬಿಸಿದ್ದು ಮತ್ಯಾರೂ ಅಲ್ಲ ಸಿಡಿಲಬ್ಬರ ಸಿಡಿಲಮರಿ ಎಬಿ ಡಿವಿಲಿಯರ್ಸ್. ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರುಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಎಬಿಡಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅಲ್ಲದೆ ಕೊನೆಯವರೆಗೂ ಬ್ಯಾಟ್ ಬೀಸಿ 33 ಎಸೆತಗಳಲ್ಲಿ 73 ರನ್ ಚಚ್ಚಿದರು.

    ಇದರ ನಡುವೆ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಶತಕದ ಜೊತೆಯಾಟವಾಡಿದರು. ಈ ಅದ್ಭುತ ಇನಿಂಗ್ಸ್​ನೊಂದಿಗೆ ಎಬಿಡಿ ಎರಡು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆರ್​ಸಿಬಿ ಪರ ಅತಿ ಹೆಚ್ಚು ಶತಕದ ಜೊತೆಯಾಟ ಆಡಿದ ದಾಖಲೆ ಇದೀಗ ಕೊಹ್ಲಿ-ಎಬಿಡಿ ನಿರ್ಮಿಸಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್ ಜೊತೆಗೂಡಿ ಕೊಹ್ಲಿ 9 ಬಾರಿ 100 ರನ್​ ಬಾರಿಸಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಸೆಂಚುರಿ ಪಾಟರ್ನರ್​ಶಿಪ್ ಮೂಲಕ ಗೇಲ್ ಹೆಸರಲ್ಲಿದ್ದ ದಾಖಲೆಯನ್ನು ಎಬಿಡಿ ತಮ್ಮ ಹೆಸರಿಗೆ ಬರೆದುಕೊಂಡರು.

    ಇಷ್ಟೇ ಅಲ್ಲದೆ 5 ಬೌಂಡರಿ 6 ಸಿಕ್ಸರ್ ಒಳಗೊಂಡ 73 ರನ್​ಗಳೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಎಬಿಡಿ ತಮ್ಮದಾಗಿಸಿಕೊಂಡರು. ಈ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದ ಆಟಗಾರ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ಕೂಡ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 21 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕ್ರಿಸ್ ಗೇಲ್ ದಾಖಲೆಯನ್ನು ಮುರಿದು ಎಬಿ ಡಿವಿಲಿಯರ್ಸ್ ಈಗ 22 ಬಾರಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

    ಐಪಿಎಲ್​ನಲ್ಲಿ ಅತೀ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಹೀಗಿದೆ:
    1- ಎಬಿ ಡಿ ವಿಲಿಯರ್ಸ್- 22 
    2- ಕ್ರಿಸ್ ಗೇಲ್: 18 
    3- ರೋಹಿತ್ ಶರ್ಮ: 18 
    4- ಡೇವಿಡ್ ವಾರ್ನರ್: 17 
    5- ಎಂಎಸ್ ಧೋನಿ: 17 
    6- ಶೇನ್ ವಾಟ್ಸನ್: 16 
    7- ಯೂಸುಫ್ ಪಠಾಣ್: 16 
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ:IPL 2020: ಮೈದಾನದಲ್ಲೇ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?
    Published by:zahir
    First published: