• ಹೋಂ
  • »
  • ನ್ಯೂಸ್
  • »
  • IPL
  • »
  • IPL 2020: ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ಸಿಡಿಲಬ್ಬರದ ಸಿಡಿಲಮರಿ ಎಬಿಡಿ

IPL 2020: ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆದ ಸಿಡಿಲಬ್ಬರದ ಸಿಡಿಲಮರಿ ಎಬಿಡಿ

AB de Villiers

AB de Villiers

AB de Villiers: ಸದ್ಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಡೆದ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಓವರ್​ನಲ್ಲಿ ಸೂಪರ್ ಗೆಲುವು ದಾಖಲಿಸಿತ್ತು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಪಡೆದ ಆರ್​ಸಿಬಿ 201 ರನ್​ಗಳ ಕಠಿಣ ಗುರಿ ನೀಡಿತು. ಈ ಬೃಹತ್ ಮೊತ್ತ ಪೇರಿಸಲು ಮುಖ್ಯ ಕಾರಣವಾಗಿದ್ದು ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್​.


ಹೌದು, ಕೇವಲ 24 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ ಎಬಿಡಿ ಬೆಂಗಳೂರು ಮೊತ್ತ 200ರ ಗಡಿದಾಟಿಸಿದ್ದರು. ಈ ಭರ್ಜರಿ ಇನಿಂಗ್ಸ್​ನಲ್ಲಿ ಮೂಡಿ ಬಂದಿದ್ದು 4 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳು. ಈ ಆಕರ್ಷಕ ಅರ್ಧಶತಕದೊಂದಿಗೆ ಎಬಿಡಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ್ದರು. ಮುಂಬೈ ವಿರುದ್ಧ 26 ರನ್ ಕಲೆಹಾಕುವುದರೊಂದಿಗೆ ಐಪಿಎಲ್​ನಲ್ಲಿ 4500 ರನ್ ಗಡಿ ದಾಟಿದ ಎರಡನೇ ವಿದೇಶಿ ಆಟಗಾರ ಎನಿಸಿಕೊಂಡರು. ಹಾಗೆಯೇ ಐಪಿಎಲ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ 6ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾದರು.


ಎಬಿಡಿಗೂ ಮುನ್ನ ಡೇವಿಡ್ ವಾರ್ನರ್ ಐಪಿಎಲ್​ನಲ್ಲಿ 4500ಕ್ಕೂ ಅಧಿಕ ರನ್ ಬಾರಿಸಿ ಮೊದಲ ವಿದೇಶಿ ಬ್ಯಾಟ್ಸ್​​ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಿಕ್ಸರ್ ಸಿಡಿಸುವ ಮೂಲಕ ಎಬಿಡಿ ಐಪಿಎಲ್​ನಲ್ಲಿ 200 ಸಿಕ್ಸರ್ ಬಾರಿಸಿದ ದಾಖಲೆಯನ್ನು ಸಹ ಬರೆದಿದ್ದರು. ಇದೀಗ ಡಿವಿಲಿಯರ್ಸ್ ಕೂಡ ಈ ಎಲೈಟ್ ಗ್ರೂಪ್​ಗೆ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.


ಐಪಿಎಲ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿರುವ ಟಾಪ್-5 ಬ್ಯಾಟ್ಸ್​ಮನ್​ಗಳು:-


1- ವಿರಾಟ್ ಕೊಹ್ಲಿ (5435 ರನ್​ಗಳು)
2- ಸುರೇಶ್ ರೈನಾ (5368 ರನ್​ಗಳು)
3- ರೋಹಿತ್ ಶರ್ಮಾ (4998 ರನ್​ಗಳು)
4- ಡೇವಿಡ್ ವಾರ್ನರ್ (4748* ರನ್​ಗಳು)
5- ಶಿಖರ್ ಧವನ್ (4614* ರನ್​ಗಳು)


POINTS TABLE:SCHEDULE TIME TABLE:ORANGE CAP:PURPLE CAP:RESULT DATA:MOST SIXES:KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!

Published by:zahir
First published: