Voice For Women's IPL| ಮಹಿಳಾ IPL ಟೂರ್ನಿ ಆಯೋಜನೆಗಾಗಿ ಕೂಗೆತ್ತಿದ ಭಾರತ ಟಿ 20 ನಾಯಕಿ ಹರ್ಮನ್‌ಪ್ರೀತ್ ಕೌರ್

ಭಾರತ ಪುರುಷ ತಂಡಕ್ಕೆ ಐಪಿಎಲ್ ನೀಡಿದ ಕೊಡುಗೆ ಅಪಾರ. ಅನೇಕ ಉತ್ತಮ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಐಪಿಎಲ್ ನೀಡಿದೆ. ಹೀಗಾಗಿ ಭಾರತದಲ್ಲಿ ಮಹಿಳಾ ಐಪಿಎಲ್ ಅಗತ್ಯತೆ ಇದೆ" ಎಂದು ಭಾರತ ಮಹಿಳಾ ಟಿ20 ನಾಯಕಿ ಹರ್ಮನ್​ಪ್ರೀತ್​ ಕೌರ್ ಅಭಿಪ್ರಾಯಪಟ್ಟಿದ್ದಾರೆ.

ಹರ್ಮನ್‌ಪ್ರೀತ್ ಕೌರ್.

ಹರ್ಮನ್‌ಪ್ರೀತ್ ಕೌರ್.

  • Share this:
    ಆಸ್ಟ್ರೇಲಿಯಾದ (Australia) ಗೋಲ್ಡ್ ಕೋಸ್ಟ್‌ನಲ್ಲಿ ಶನಿವಾರ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್​ (India Women's Cricket) ತಂಡ ರೋಚಕ ಸೋಲನುಭವಿಸಿತ್ತು. ಅಲ್ಲದೆ, ಈ ಹಿಂದೆಯೂ ಅನೇಕ ಟಿ20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡ ಇದೇ ರೀತಿಯ ರೋಚಕ ಸೋಲನುಭವಿಸಿದೆ. ಗೆಲ್ಲಬಹುದಾದ ಪಂದ್ಯಗಳನ್ನು ಕೊನೆಯ ಹಂತದಲ್ಲಿ ಕೈಬಿಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಸೋಲು ಅನೇಕರ ನಿರಾಸೆಗೂ ಕಾರಣವಾಗಿದೆ. ಹೀಗಾಗಿ ಪಂದ್ಯದ ಬಳಿಕ ಮಾತನಾಡಿರುವ ಟಿ20 ಮಹಿಳಾ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್ (Harmanpreet Kaur)​, "ಭಾರತ ಮಹಿಳಾ ಕ್ರಿಕೆಟ್ ತಂಡದ ಆಟ ಮತ್ತಷ್ಟು ಉತ್ಕೃಷ್ಟಗೊಳ್ಳಲು ಮಹಿಳಾ ಐಪಿಎಲ್ ಟೂರ್ನಿಯನ್ನು ಆಯೋಜಿಸಬೇಕು" ಎಂದು ಒತ್ತಾಯಿಸಿದ್ದಾರೆ.

    ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಈ ಹಂತದಲ್ಲಿ ಸ್ಕ್ರೀಸ್​ಗೆ ಆಗಮಿಸಿದ್ದ ತಹ್ಲಿಯಾ ಮೆಕ್‌ಗ್ರಾತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

    ತಹ್ಲಿಯಾ ಮೆಕ್‌ಗ್ರಾತ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಹರ್ಮನ್​ಪ್ರೀತಿ ಕೌರ್, " ಇಂದು ತಹ್ಲಿಯಾ ಮೆಕ್‌ಗ್ರಾತ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದರೆ, ಅವರು WBBL ನಂತಹ ಪಂದ್ಯಾವಳಿಯಿಂದ ಪಡೆಯುತ್ತಿರುವ ಆತ್ಮವಿಶ್ವಾಸವನ್ನು ನಾವು ನೋಡಬಹುದಾಗಿದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡಿದವರಲ್ಲ. ಆದರೆ, ಆಸ್ಟ್ರೇಲಿಯಾ ಪರವಾಗಿ ಆಡುವ ಮೊದಲು ಮಹಿಳಾ ಬಿಗ್​ ಬ್ಯಾಶ್​ನಲ್ಲಿ ಹಲವು ಪಂದ್ಯಗಳನ್ನು ಆಡಿದ್ದಾರೆ. ಈ ಅನುಭವ ಇಂದಿನ ಪಂದ್ಯದಲ್ಲಿ ಅವರ ಕೈಹಿಡಿದಿದೆ. ನಮ್ಮಲ್ಲೂ ಕೆಲವು ಯುವ ಆಟಗಾರರು ಇದ್ದಾರೆ. ಮಹಿಳಾ ಐಪಿಎಲ್ ಆಯೋಜನೆ ಅವರ ಪ್ರತಿಭೆ ಮತ್ತಷ್ಟು ಮೆರುಗಾಗಲು ಅನುಕೂಲಕರವಾಗಿರಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: T20 World Cup| ಭಾರತ ತಂಡಕ್ಕೆ ನೆಟ್​ ಬೌಲರ್ ಆಗಿ ಆಯ್ಕೆಯಾದ ಸನ್ ರೈಸರ್ಸ್ ಪೇಸ್ ಸೆನ್ಸೇಷನ್ ಉಮ್ರಾನ್ ಮಲಿಕ್

    "ಭಾರತ ಪುರುಷ ತಂಡಕ್ಕೆ ಐಪಿಎಲ್ ನೀಡಿದ ಕೊಡುಗೆ ಅಪಾರ. ಅನೇಕ ಉತ್ತಮ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಐಪಿಎಲ್ ನೀಡಿದೆ. ಆಸ್ಟ್ರೇಲಿಯಾದಲ್ಲೂ ಮಹಿಳಾ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮುನ್ನ 20-30 ಬಿಗ್​ಬ್ಯಾಶ್ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುತ್ತಾರೆ. ಹೀಗಾಗಿ ಭಾರತದಲ್ಲಿ ಮಹಿಳಾ ಐಪಿಎಲ್ ಅಗತ್ಯತೆ ಇದೆ" ಎಂದು ಹರ್ಮನ್​ಪ್ರೀತ್​ ಕೌರ್ ಅಭಿಪ್ರಾಯಪಟ್ಟಿದ್ದಾರೆ.
    Published by:MAshok Kumar
    First published: