ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡ ಸೋತಿದೆ. ಈ ಮೂಲಕ ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅತ್ತ ಹೈದರಬಾದ್ ಕ್ವಾಲಿಫೈಯರ್ಗೆ ಆಯ್ಕೆ ಆಗಿದ್ದು, ಡೆಲ್ಲಿ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಆರ್ಸಿಬಿ ಬೌಲಿಂಗ್ನಲ್ಲಿ ಮಿಂಚಿತ್ತು. ಫೀಲ್ಡಿಂಗ್ನಲ್ಲಿ ದೇವದತ್ ಪಡಿಕ್ಕಲ್ ಮಾಡಿದ ಆ ಒಂದು ತಪ್ಪು ಆರ್ಸಿಬಿ ಸೋಲಿಗೆ ಕಾರಣವಾಗಿತ್ತು.
ಆರಂಭದಲ್ಲೇ ಹೈದರಾಬಾದ್ ತಂಡ ಮೊಹಮದ್ ಸಿರಾಜ್ ಬೌಲಿಂಗ್ಗೆ ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಪಂದ್ಯಕಟ್ಟೋಕೆ ನಿಂತಿದ್ದು ಕೆ. ವಿಲಿಯಮ್ಸನ್. ನಿಧಾನವಾಗಿ ಬ್ಯಾಟ್ ಬೀಸಿದ ಅವರು ಆಗೊಂದು, ಈಗೊಂದು ಸಿಕ್ಸ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು.
2.4 ಓವರ್ ಬಾಕಿ ಉಳಿದಿರುವಾಗ ವಿಲಿಯಮ್ಸನ್ ಬಾರಿಸಿದ ಶಾಟ್, ಸಿಕ್ಸ್ ಹೋಗುವುದರಲ್ಲಿತ್ತು. ಆದರೆ, ದೇವದತ್ ಇದನ್ನು ತಡೆದಿದ್ದರು. ಬೌಂಡರಿ ಸಮೀಪ ಇದ್ದಿದ್ದರಿಂದ ಹಿಡಿದ ಬೌಲ್ಅನ್ನು ಹೊರಗೆ ಹಾಕಿದ್ದರು. ಆದರೆ, ಈ ಬಾಲ್ ಅವರು ಅಂದುಕೊಂಡಿದ್ದಕ್ಕಿಂತಲೂ ದೂರ ಹೋಗಿ ಬಿದ್ದಿತ್ತು. ಹೀಗಾಗಿ, ಈ ಕ್ಯಾಚ್ ತಪ್ಪಿ ಹೋಗಿತ್ತು. ಒಂದೊಮ್ಮೆ ಈ ಕ್ಯಾಚ್ ಹಿಡಿದಿದ್ದರೆ ಆರ್ಸಿಬಿ ಗೆಲುವಿನ ಲಯಕ್ಕೆ ಬರಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
We fought well, we fought hard. 💔#PlayBold #IPL2020 #WeAreChallengers #Dream11IPL #SRHvRCB pic.twitter.com/NsZgDQLmLt
— Royal Challengers Bangalore (@RCBTweets) November 6, 2020
Post Match Press Conference: SRH v RCB: Simon Katich
Our Head Coach Simon Katich talks about RCB's exit, positives from the tournament and what's in store for the future.#PlayBold #IPL2020 #Dream11IPL #WeAreChallengers pic.twitter.com/zBW3XukNZ3
— Royal Challengers Bangalore (@RCBTweets) November 7, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ