IPL

  • associate partner

IPL 2020: ಆ ಕನ್ನಡಿಗನನ್ನು ಸೂಪರ್ ಓವರ್​ನಲ್ಲಿ ಕಳುಹಿಸುವಂತೆ ನಾನು ಕಿರುಚಿದೆ: ಆಕಾಶ್ ಚೋಪ್ರಾ

ನಿನ್ನೆಯ ಪಂದ್ಯದಲ್ಲಿ ಮಯಾಂಕ್ ಆರಂಭಿಕರಾಗಿ ಕಣಕ್ಕಿಳಿದು 60 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 7 ಬೌಂಡರಿ ಸಹಿತ 89 ರನ್​ಗಳಿಸಿ ಕೊನೆಯ ಹಂತದಲ್ಲಿ ಔಟ್ ಆದರು.

news18-kannada
Updated:September 21, 2020, 9:58 PM IST
IPL 2020: ಆ ಕನ್ನಡಿಗನನ್ನು ಸೂಪರ್ ಓವರ್​ನಲ್ಲಿ ಕಳುಹಿಸುವಂತೆ ನಾನು ಕಿರುಚಿದೆ: ಆಕಾಶ್ ಚೋಪ್ರಾ
ಮಯಾಂಕ್‌ ಅಗರ್ವಾಲ್
  • Share this:
13ನೇ ಆವೃತ್ತಿಯ ಐಪಿಎಲ್​ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್​ ಇಲೆವೆನ್ ನಡುವಣ ಮ್ಯಾಚ್ ಟೈ ಆದ ಕಾರಣ ಸೂಪರ್ ಓವರ್ ನಡೆದು ಅಂತಿಮವಾಗಿ ಶ್ರೇಯಸ್ ಅಯ್ಯರ್ ಪಡೆ ಗೆಲುವು ಸಾಧಿಸಿತು. ಡೆಲ್ಲಿ ನೀಡಿದ 158 ರನ್​ಗಳ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ಕೂಡ ನಿಗಧಿಕ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್​ಗಳಿಸಿ ಟೈ ಮಾಡಿಕೊಂಡಿತು. ಆದರೆ ರಾಹುಲ್ ಪಡೆ ಸೂಪರ್ ಓವರ್​ನಲ್ಲಿ 2 ವಿಕೆಟ್​ ಕಳೆದುಕೊಂಡು ಕೇವಲ 2 ರನ್​ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ತಂಡ ಕೇವಲ 2 ಎಸೆತಗಳಲ್ಲಿ 3 ರನ್​ಗಳಿಸಿ ಗೆಲುವು ತನ್ನದಾಗಿಸಿತು.

ಪಂಜಾಬ್ ಪರ ಪವರ್ ಪ್ಲೇ ಓವರ್​​ನಲ್ಲಿ ಬ್ಯಾಟಿಂಗ್ ಮಾಡಲು ನಾಯಕ ಕೆ. ಎಲ್ ರಾಹುಲ್ ಹಾಗೂ ನಿಕೋಲಸ್ ಪೂರನ್ ಕಣಕ್ಕಿಳಿದರು. ಆದರೆ, ಇದು ಸರಿಯಾದ ನಿರ್ಧಾರ ಅಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

SRH vs RCB: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪಡಿಕ್ಕಲ್, ಎಬಿಡಿ ಅಬ್ಬರ: ಹೈದರಾಬಾದ್​ಗೆ ಕಠಿಣ ಟಾರ್ಗೆಟ್

ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಚೋಪ್ರಾ, ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಮಯಾಂಕ್‌ ಅಗರ್ವಾಲ್‌ ಅವರನ್ನು ಕಳುಹಿಸದೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ತಾಂತ್ರಿಕ ತಪ್ಪು ಮಾಡಿದೆ ಎಂದು ಹೇಳಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮಯಾಂಕ್ ಆರಂಭಿಕರಾಗಿ ಕಣಕ್ಕಿಳಿದು 60 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 7 ಬೌಂಡರಿ ಸಹಿತ 89 ರನ್​ಗಳಿಸಿ ಕೊನೆಯ ಹಂತದಲ್ಲಿ ಔಟ್ ಆದರು.

IPL 2020 Live Score, SRH vs RCB: ಆರ್​ಸಿಬಿಗೆ ಮೊದಲ ಯಶಸ್ಸು: ವಾರ್ನರ್ ಔಟ್

"ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ಪಂದ್ಯದಲ್ಲಿ ಏನು ಮಾಡಿತು ಎಂಬ ಬಗ್ಗೆ ಅನೇಕ ಪ್ರಶ್ನೆಗಳು ನನ್ನಲ್ಲಿ ಮೂಡಿವೆ. ಪಂದ್ಯವು ನಿಮ್ಮ ಹಿಡಿತದಲ್ಲಿದೆ. ಮಯಾಂಕ್‌ ಅಗರ್ವಾಲ್‌ ಅದ್ಭುತ ಪ್ರದರ್ಶನ ತೋರಿದ್ದರು ಆದರೆ ಅವರನ್ನು ಸೂಪರ್‌ ಓವರ್‌ನಲ್ಲಿ ಏಕೆ ಕಳುಹಿಸಲಿಲ್ಲ?," ಎಂದು ಚೋಪ್ರಾ ಪ್ರಶ್ನೆ ಮಾಡಿದ್ದಾರೆ.

ಪಂದ್ಯ ಆಗುತ್ತಿರುವಾಗ ಕಾಮೆಂಟರ್‌ ಬಾಕ್ಸ್‌ನಲ್ಲಿ ಕುಳಿತಿದ್ದ ನಾನು ಸೂಪರ್‌ ಓವರ್‌ನಲ್ಲಿ ಮಯಾಂಕ್‌ ಅಗರ್ವಾಲ್‌ ಅವರನ್ನು ಕಳುಹಿಸಿ ಎಂದು ಜೋರಾಗಿ ಕೂಗುತ್ತಿದ್ದೆ, ಆದರೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಕೆ.ಎಲ್‌ ರಾಹುಲ್‌ ಹಾಗೂ ನಿಕೋಲಸ್‌ ಪೂರನ್‌ ಅವರನ್ನು ಕಳುಹಿಸಿತು. ನಂತರವಾದರೂ ಮಯಾಂಕ್ ಬರುತ್ತಾರೆ ಎಂದು ಗ್ರಹಿಸಿದ್ದೆ. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಆಯ್ಕೆ ಮಾಡಿಕೊಂಡಿತು ಎಂದು ಚೋಪ್ರಾ ಹೇಳಿದ್ದಾರೆ.
Published by: Vinay Bhat
First published: September 21, 2020, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading