news18-kannada Updated:October 19, 2020, 1:12 PM IST
ಪಂದ್ಯ ಮುಗಿದ ನಂತರದಲ್ಲಿ ಟ್ವೀಟ್ ಮಾಡಿದ್ದ ಯುವರಾಜ್, ಆಟ ಈಗ ಶುರು ಆಗಿದೆ. ನನ್ನ ಲೆಕ್ಕಾಚಾರದ ಪ್ರಕಾರ ಪಂಜಾಬ್ ಪ್ಲೇಆಫ್ ಪ್ರವೇಶಿಸುತ್ತದೆ. ಅಲ್ಲಿಯೂ ಗೆದ್ದು, ಮುಂಬೈ ಅಥವಾ ಡೆಲ್ಲಿಯ ವಿರುದ್ಧ ಫೈನಲ್ ಪಂದ್ಯ ಆಡಲಿದೆ ಎಂದಿದ್ದರು.
ಮುಂಬೈ ವಿರುದ್ಧ ಎರಡನೇ ಸೂಪರ್ ಓವರ್ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಗೆದ್ದು ಬೀಗಿತ್ತು. ಪಂಜಾಬ್ ತಂಡ ನೀಡಿದ ಅದ್ಭುತ ಪ್ರದರ್ಶನ ಕಂಡು ಎಲ್ಲರೂ ಮೆಚ್ಚುಗೆ ಹೊರ ಹಾಕಿದ್ದಾರೆ. ಈ ಮಧ್ಯೆ ಪಂಜಾಬ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಹುಲ್ ತಂಡ ಫೈನಲ್ಗೆ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಕಮೆಂಟ್ಗೆ ಉತ್ತರಿಸಿರುವ ಚಹಾಲ್, ಯುವಿ ಕಾಲೆಳೆದಿದ್ದಾರೆ.
ಮುಂಬೈ ನೀಡಿದ 177 ರನ್ಗಳ ಕಠಿಣ ಸವಾಲು ಬೆನ್ನತ್ತಿದ ಪಂಜಾಬ್ ಉತ್ತಮ ಆರಂಭ ಕಂಡುಕೊಂಡಿತು. ನಂತರ ನಿಧಾನವಾಗಿ ವಿಕೆಟ್ ಬಿದ್ದರೂ ರಾಹುಲ್ ಉತ್ತಮವಾಗಿ ಆಡಿದರು. ಕೊನೆಗೆ ಮ್ಯಾಚ್ ಟೈ ಆಗಿತ್ತು. ನಂತರ ಆಡಿದ ಸೂಪರ್ ಓವರ್ನಲ್ಲಿ ಮೊದಲ ಸೂಪರ್ ಓವರ್ ಟೈ ಆದರೆ, ಮತ್ತೊಂದು ಸೂಪರ್ ಓವರ್ನಲ್ಲಿ ಪಂಜಾಬ್ ತಂಡ ಗೆದ್ದಿತ್ತು.
ಈ ಪಂದ್ಯ ಮುಗಿದ ನಂತರದಲ್ಲಿ ಟ್ವೀಟ್ ಮಾಡಿದ್ದ ಯುವರಾಜ್, ಆಟ ಈಗ ಶುರು ಆಗಿದೆ. ನನ್ನ ಲೆಕ್ಕಾಚಾರದ ಪ್ರಕಾರ ಪಂಜಾಬ್ ಪ್ಲೇಆಫ್ ಪ್ರವೇಶಿಸುತ್ತದೆ. ಅಲ್ಲಿಯೂ ಗೆದ್ದು, ಮುಂಬೈ ಅಥವಾ ಡೆಲ್ಲಿಯ ವಿರುದ್ಧ ಫೈನಲ್ ಪಂದ್ಯ ಆಡಲಿದೆ ಎಂದಿದ್ದರು.
ಇದಕ್ಕೆ ಕಮೆಂಟ್ ಮಾಡಿದ ಚಹಾಲ್, ಹಾಗಿದ್ದರೆ ನಾವು ಭಾರತಕ್ಕೆ ವಾಪಾಸು ಬರಲೇ ಎಂದು ಚಹಾಲ್ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಯುವಿ, ಇನ್ನೂ ಸ್ವಲ್ಪ ದಿನ ಇದ್ದು, ಇನ್ನೊಂದಷ್ಟು ವಿಕೆಟ್ ಪಡೆದು ಬನ್ನಿ ಎಂದಿದ್ದಾರೆ. ನವೆಂಬರ್ 10ವರೆಗೂ ವಿಕೆಟ್ ತೆಗೆಯುತ್ತಲೇ ಇರುತ್ತೇನೆ ಎಂದು ಉತ್ತರಿಸುವ ಮೂಲಕ ಆರ್ಸಿಬಿ ಫೈನಲ್ಗೆ ಏರಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ ಚಹಾಲ್. ಇದಕ್ಕೂ ಉತ್ತರಿಸಿರುವ ಯುವಿ, ಫೈನಲ್ ನೋಡಿಕೊಂಡೇ ಬನ್ನಿ ಎಂದಿದ್ದಾರೆ.
Published by:
Rajesh Duggumane
First published:
October 19, 2020, 1:08 PM IST