ವಿರೇಂದ್ರ ಸೆಹ್ವಾಗ್ ಎಂದರೇನೆ ಥಟ್ಟನೆ ನೆನಪಾಗುವುದು ಸಿಡಿಲಬ್ಬರದ ಬ್ಯಾಟಿಂಗ್. ಬೌಲರುಗಳು ಯಾರೇ ಇರಲಿ, ವಿಕೆಟ್ಗಳು ಎಷ್ಟೇ ಬಿದ್ದಿರಲಿ ವೀರು ಮಾತ್ರ ತಮ್ಮ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ಟೆಸ್ಟ್ ಪಂದ್ಯವನ್ನು ಏಕದಿನ ಪಂದ್ಯದಂತೆ, ಏಕದಿನ ಪಂದ್ಯವನ್ನು ಟಿ20 ಅಂತೆ ಆಡುತ್ತಿದ್ದರು. ಇನ್ನು ಐಪಿಎಲ್ನಲ್ಲೂ ಸೆಹ್ವಾಗ್ ಒಂದಷ್ಟು ಕಾಲ ಅಬ್ಬರಿಸಿದ್ದರು. ಹೀಗೆ ನಾನಾ ಬೌಲರುಗಳಿಗೆ ಸ್ಪೋಟಕ ಬ್ಯಾಟಿಂಗ್ ಮೂಲಕ ಬೆವರಿಳಿಸಿದ ವೀರು, ಜೋಫ್ರಾ ಆರ್ಚರ್ನ್ನು ಎದುರಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.
ಹೌದು, ಕರಾರುವಾಕ್ ದಾಳಿ ಮೂಲಕ ಐಪಿಎಲ್ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಭರ್ಜರಿ ಬೌಲಿಂಗ್ ಮಾಡಿದ್ದರು. ಅದರಲ್ಲೂ ಇಂಗ್ಲೆಂಡ್ ವೇಗಿಯ ನಿಖರ ದಾಳಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಬಂದ ವೇಗದಲ್ಲೇ ಪೆವಿಲಿಯನ್ ಕಡೆ ಮುಖ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ವಿರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್ ಅವರು ಜೋಫ್ರಾ ಚೆಂಡನ್ನು ಎದುರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾರ್ನರ್ ಇನ್ನೂ ಸ್ವಲ್ಪ ಸಂವೇದನಾಶೀಲರಾಗಿ ಆಡಬೇಕಿತ್ತು. ಜೋಫ್ರಾ ಎಸೆತಗಳನ್ನು ಎದುರಿಸಬೇಕಾದರೆ ಹೆಚ್ಚು ಜಾಗೃತೆ ವಹಿಸಬೇಕಿತ್ತು ಎಂದಿದ್ದಾರೆ. ಅದೇನೆ ಇರಲಿ ಜೋಫ್ರಾ ಆರ್ಚರ್ ಅಂತು ಕ್ಲಾಸ್ ಬೌಲರ್ ಎಂದು ಸೆಹ್ವಾಗ್ ಶ್ಲಾಘಿಸಿದ್ದಾರೆ.
ಜೋಫ್ರಾ ವಾರ್ನರ್ನ್ನು ಔಟ್ ಮಾಡಲೆಂದೇ ದೇಹಕ್ಕೆ ನೇರವಾಗಿ ಚೆಂಡು ಎಸೆದಿದ್ದರು. ವಿಶ್ವದ ಯಾವುದೇ ಬ್ಯಾಟ್ಸ್ಮನ್ ಅಂತಹ ಎಸೆತಗಳನ್ನು ಆಡದೆ ಬಿಡುವುದಿಲ್ಲ. ಆದರೆ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಆರ್ಚರ್, 2 ಸ್ಲಿಪ್ ಫೀಲ್ಡರ್ಗಳನ್ನು ಇರಿಸಿದ್ದರು. ಅದರಂತೆ ವಾರ್ನರ್ ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿದರು. ಹೀಗೆ ವಾರ್ನರ್ನ್ನು ಔಟ್ ಮಾಡಿದ ಎಸೆತವಂತು ಸುಂದರವಾಗಿತ್ತು ಎಂದು ಸೆಹ್ವಾಗ್ ಗುಣಗಾನ ಮಾಡಿದರು.
ಜೋಫ್ರಾ ಆರ್ಚರ್ ತುಂಬಾ ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಇದು ಈಗ ದೊಡ್ಡ ವಿಷಯವಲ್ಲ. ಆದರೆ ಲೈನ್ ಅ್ಯಂಡ್ ಲೆಂಗ್ತ್ ಹಾಕುವ ಮೂಲಕ ಬ್ಯಾಟ್ಸ್ಮನ್ಗಳನ್ನು ತಪ್ಪು ಹೊಡೆತಗಳಿಗೆ ಪ್ರೇರೇಪಿಸುವುದು ಇದೆಯಲ್ಲ ಅದುವೇ ಮುಖ್ಯ ಸಂಗತಿ. ಈ ವಿಷಯದಲ್ಲಿ ಆರ್ಚರ್ ತುಂಬಾ ಯಶಸ್ವಿ ಬೌಲರ್. ಈಗ ನಾನು ನಿವೃತ್ತರಾಗಿರುವುದರಿಂದ ಅವರನ್ನು ಎದುರಿಸಬೇಕಾಗಿಲ್ಲ ಎಂದು ನಾನು ಸಂತೋಷಪಡುತ್ತಿರುವೆ ಸೆಹ್ವಾಗ್ ಹೇಳಿದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ