ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕ್ಯಾಚ್​ ಬಿಟ್ಟ ವಿಚಾರ; ಇನ್ಸ್​ಟಾ ಲೈವ್​​ನಲ್ಲೇ ಕಿಂಗ್ ಕೊಹ್ಲಿ ಕಾಲೆಳೆದ ರಾಹುಲ್

RCB vs KXIP: ಕಿಂಗ್ಸ್​ ಇಲವೆನ್​ ಪಂದ್ಯದ ಕಳೆದ ಮ್ಯಾಚ್​ನಲ್ಲಿ ರಾಹುಲ್​ ಅವರ ಎರಡು ಕ್ಯಾಚ್​ಅನ್ನು ಕೊಹ್ಲಿ ಬಿಟ್ಟಿದ್ದರು. ಹೀಗಾಗಿ ಕಾಲೆಳೆಯುವ ಉದ್ದೇಶದಿಂದ ರಾಹುಲ್​ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.

ಕೊಹ್ಲಿ-ರಾಹುಲ್

ಕೊಹ್ಲಿ-ರಾಹುಲ್

 • Share this:
  ಪಂಜಾಬ್​ ಆಡಿದ ಏಳು ಪಂದ್ಯಗಳಲ್ಲಿ ಆರರಲ್ಲಿ ಸೋತು ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಪಂಜಾಬ್​ ಗೆದ್ದಿರುವುದು ಆರ್​ಸಿಬಿ ವಿರುದ್ಧ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿ, ಇಂದು ಪಂಜಾಬ್​ ವಿರುದ್ಧ ಸೆಣೆಸಲಿದೆ. ಇಂದಿನ ಪಂದ್ಯದ ಬಗ್ಗೆ ರಾಹುಲ್​ ಹಾಗೂ ವಿರಾಟ್​ ಲೈವ್​ ಚ್ಯಾಟ್​ನಲ್ಲಿ ಮಾತನಾಡಿದ್ದು, ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ರಾಹುಲ್​ ಲೈವ್​ನಲ್ಲೇ ಕೊಹ್ಲಿ ಕಾಲೆಳೆದಿದ್ದಾರೆ. ಕೊಹ್ಲಿ ಹಾಗೂ ರಾಹುಲ್​ ಪ್ಯೂಮಾ ಇಂಡಿಯಾಕ್ಕಾಗಿ ಲೈವ್​ ಬಂದಿದ್ದರು. ಅಭಿಮಾನಿಗಳು ಕೇಳಿರುವ ಪ್ರಶ್ನೆಯನ್ನು ರಾಹುಲ್​ ಮುಂದಿಟ್ಟಿದ್ದರು ಕೊಹ್ಲಿ. ಈ ಎಲ್ಲ ಪ್ರಶ್ನೆಗಳಿಗೂ ರಾಹುಲ್​ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ.

  ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದು ಹೇಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರಾಹುಲ್​, ಆರೇಳು ತಿಂಗಳಿಂದ ಮೈದಾನಕ್ಕೆ ಇಳಿದೇ ಇರಲಿಲ್ಲ. ಈಗ ಐಪಿಎಲ್​ ಆಡುವಾಗ ತುಂಬಾನೇ ಭಯ ಕಾಡಿತ್ತು. ನರ್ವಸ್​ ಆಗಿದ್ದೆ. ಆತ್ಮವಿಶ್ವಾಸ ಕೂಡ ಕಡಿಮೆ ಆಗಿತ್ತು. ಆದರೆ, ಮೈದಾದನದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರದಲ್ಲಿ ಹೊಸ ಆತ್ಮ ವಿಶ್ವಾಸ ಬಂದಿದೆ ಎಂದಿದ್ದಾರೆ.

  ಇದೇ ವೇಳೆ ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಹೇಗೆ ಸಿದ್ಧರಾಗಿದ್ದೀರಿ ಎನ್ನುವುದನ್ನು ಹೇಳಿ ಎಂದು ರಾಹುಲ್​ ಬಳಿ ಕೊಹ್ಲಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ್ದ ರಾಹುಲ್​, ಮುಂದಿನ ಎಲ್ಲ ಪಂದ್ಯಗಳನ್ನು ನಾವು ಗೆಲ್ಲಲೇ ಬೇಕಿದೆ. ಹೀಗಾಗಿ, ಗುರುವಾರದ ಪಂದ್ಯದಲ್ಲೂ ಗೆಲುವು ದಾಖಲಿಸುವುದು ಅನಿವಾರ್ಯ. ಕಳೆದ ಪಂದ್ಯದಂತೆ ಈ ಬಾರಿಯೂ ನಿಮ್ಮ ತಂಡದವರು ಮತ್ತಷ್ಟು ಕ್ಯಾಚ್​ ಬಿಡಲಿ ಎಂದು ಆಶಿಸುತ್ತೇನೆ ಎಂದು ಕೊಹ್ಲಿ ಕಾಲೆಳೆದಿದ್ದಾರೆ. ಕಿಂಗ್ಸ್​ ಇಲವೆನ್​ ಪಂದ್ಯದ ಕಳೆದ ಮ್ಯಾಚ್​ನಲ್ಲಿ ರಾಹುಲ್​ ಅವರ ಎರಡು ಕ್ಯಾಚ್​ಅನ್ನು ಕೊಹ್ಲಿ ಬಿಟ್ಟಿದ್ದರು. ಹೀಗಾಗಿ ಕಾಲೆಳೆಯುವ ಉದ್ದೇಶದಿಂದ ರಾಹುಲ್​ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
  ಕೊಹ್ಲಿ-ರಾಹುಲ್​ ನಡುವಣ ಲೈವ್​ ಚ್ಯಾಟ್
  Published by:Rajesh Duggumane
  First published: