IPL

  • associate partner
HOME » NEWS » Ipl » HAVE TRUSTED ROHIT BHAIS SUGGESTIONS BLINDLY SAYS SURYAKUMAR YADAV ZP

IPL 2020: ರೋಹಿತ್ ಶರ್ಮಾರನ್ನು ಕುರುಡಾಗಿ ನಂಬಿದ್ದೇನೆ: ಸೂರ್ಯಕುಮಾರ್ ಯಾದವ್

ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದದ್ದು ಸೂರ್ಯಕುಮಾರ್ ಯಾದವ್. ಕೇವಲ 47 ಎಸೆತಗಳಲ್ಲಿ 79 ರನ್ ಬಾರಿಸಿದ್ದ ಬಲಗೈ ದಾಂಡಿಗ ಮುಂಬೈ ಮೊತ್ತವನ್ನು 193ಕ್ಕೆ ತಂದು ನಿಲ್ಲಿಸಿದ್ದರು.

news18-kannada
Updated:October 8, 2020, 7:44 PM IST
IPL 2020: ರೋಹಿತ್ ಶರ್ಮಾರನ್ನು ಕುರುಡಾಗಿ ನಂಬಿದ್ದೇನೆ: ಸೂರ್ಯಕುಮಾರ್ ಯಾದವ್
suryakumar yadav
  • Share this:
ಐಪಿಎಲ್​ 13ನೇ ಸೀಸನ್​​ನಲ್ಲೂ ಮುಂಬೈ ಇಂಡಿಯನ್ಸ್ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಆಡಿರುವ 6 ಪಂದ್ಯಗಳಲ್ಲಿ ರೋಹಿತ್ ಪಡೆ 4 ರಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದರಲ್ಲೂ ವಿಶೇಷವಾಗಿ ಪಂದ್ಯದಿಂದ ಪಂದ್ಯಕ್ಕೆ ಒಬ್ಬಬ್ಬೊರೇ ಆಟಗಾರರು ಫಾರ್ಮ್​​ಗೆ ಮರಳುತ್ತಿರುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಬ್ಯಾಟಿಂಗ್​​ನಲ್ಲಿ ರೋಹಿತ್ ಶರ್ಮಾ ವಿಫಲರಾದ ದಿನ, ಕ್ವಿಂಟನ್ ಡಿ ಕಾಕ್ ಮಿಂಚಿದ್ದಾರೆ. ಡಿ ಕಾಕ್ ಬೇಗನೆ ಔಟಾದಾಗ ಸೂರ್ಯಕುಮಾರ್ ಅಬ್ಬರಿಸಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳು ವಿಫಲರಾದಾಗ ಕೀರನ್ ಪೊಲಾರ್ಡ್​ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದ್ದಾರೆ. ಹೀಗೆ ತಂಡದ ಗೆಲುವಿನಲ್ಲಿ ಪ್ರತಿಯೊಬ್ಬರೂ ಆಟಗಾರರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

ಹೀಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದದ್ದು ಸೂರ್ಯಕುಮಾರ್ ಯಾದವ್. ಕೇವಲ 47 ಎಸೆತಗಳಲ್ಲಿ 79 ರನ್ ಬಾರಿಸಿದ್ದ ಬಲಗೈ ದಾಂಡಿಗ ಮುಂಬೈ ಮೊತ್ತವನ್ನು 193ಕ್ಕೆ ತಂದು ನಿಲ್ಲಿಸಿದ್ದರು. ಅಲ್ಲದೆ ಈ ಪಂದ್ಯವನ್ನು ರೋಹಿತ್ ಪಡೆ 57 ರನ್​ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆರು ಪಂದ್ಯಗಳಿಂದ 180 ರನ್ ಕಲೆಹಾಕಿರುವ ಸೂರ್ಯಕುಮಾರ್ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದಾರೆ.

ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ನನಗೆ ಈಗ ಸಾಧಿಸಲು ಸಾಧ್ಯವಾಗದಿದ್ರೆ ಇನ್ಯಾವತ್ತೂ ಆಗಲ್ಲ ಎಂಬುದು ಗೊತ್ತಿದೆ ಎಂಬ ಆತ್ಮ ವಿಶ್ವಾಸದ ಉತ್ತರ ನೀಡಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ನಾನು ಬ್ಯಾಟ್ ಮಾಡಲು ಕಾರಣ ರೋಹಿತ್ ಶರ್ಮಾ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನಾನು ನಾಯಕ ರೋಹಿತ್ ಶರ್ಮಾ ಅವರ ಸಲಹೆಯನ್ನು ಕುರುಡಾಗಿ ನಂಬುತ್ತೇನೆ ಎಂದಿರುವ ಸೂರ್ಯಕುಮಾರ್ ಯಾದವ್, ಪ್ರತಿ ಬಾರಿ ಅವರನ್ನು ಭೇಟಿಯಾಗಿ ಸಂವಹನ ನಡೆಸುತ್ತೇನೆ. ಹೀಗೆ ಹೊಸ ವಿಷಯಗಳನ್ನು ಕಲಿಯುತ್ತಿರುತ್ತೇನೆ. ಕಳೆದ 2-3 ವರ್ಷಗಳಿಂದ, ನಾನು ಸ್ವಲ್ಪ ಪ್ರಬುದ್ಧನಾಗಿದ್ದೇನೆ. ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇದೆ.

ನಾನು ಮಾಡಬಹುದಾದ ಸಣ್ಣ ವಿಷಯಗಳತ್ತ ಗಮನ ಹರಿಸಿದ್ದೇನೆ. ನಾನು ಗುರಿಯ ಬಗ್ಗೆ ಮಾತ್ರ ಯೋಚಿಸಲಾರಂಭಿಸಿದ್ದೇನೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಭಾವಿಸಿರುವೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ನನ್ನ ಆಟದಲ್ಲಿ ತುಂಬಾ ಸುಧಾರಣೆ ಕಂಡು ಬಂದಿದೆ. ರಣಜಿ ಹಾಗೂ ಐಪಿಎಲ್​ನಲ್ಲೂ ಮಿಂಚಿದ್ದೇನೆ. ಮುಂದೆ ಖಂಡಿತವಾಗಿಯೂ ಭಾರತ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
Published by: zahir
First published: October 8, 2020, 7:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories