• ಹೋಂ
  • »
  • ನ್ಯೂಸ್
  • »
  • IPL
  • »
  • Irfan Pathan: ವಯಸ್ಸು ಎನ್ನುವುದು ಕೆಲವರಿಗೆ ಸಂಖ್ಯೆ, ಉಳಿದವರಿಗೆ ತಂಡದಿಂದ ಕೈಬಿಡಲು ಕಾರಣ..!

Irfan Pathan: ವಯಸ್ಸು ಎನ್ನುವುದು ಕೆಲವರಿಗೆ ಸಂಖ್ಯೆ, ಉಳಿದವರಿಗೆ ತಂಡದಿಂದ ಕೈಬಿಡಲು ಕಾರಣ..!

Dhoni

Dhoni

ಇರ್ಫಾನ್ ಪಠಾಣ್ ಮಾಡಿರುವ ಟ್ವೀಟ್ ಪರ-ವಿರೋಧ ಚರ್ಚೆಗಳು ಜೋರಾಗಿದೆ. ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರನನ್ನು ವಯಸ್ಸಿನ ಕಾರಣದಿಂದಲೇ ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು.

  • Share this:

IPL 13ನೇ ಸೀಸನ್​ನ 14ನೇ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಮಾಡಿರುವ ಟ್ವೀಟ್​ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಈ ಪಂದ್ಯದ ಬಳಿಕ ಪಠಾಣ್, ವಯಸ್ಸು ಎನ್ನುವುದು ಕೆಲವರಿಗೆ ಸಂಖ್ಯೆ, ಉಳಿದವರಿಗೆ ತಂಡದಿಂದ ಕೈಬಿಡಲು ಅದೊಂದು ಕಾರಣ ಎಂದು ಟ್ವೀಟ್ ಮಾಡಿದ್ದರು.


ಇರ್ಫಾನ್ ಪಠಾಣ್ ಮಾಡಿದ ಈ ಟ್ವೀಟ್​ಗೆ 1000000 ಪರ್ಸೆಂಟ್​ ನಿನ್ನ ಮಾತಿಗೆ ನನ್ನ ಸಹಮತವಿದೆ ಎಂದು ಹರ್ಭಜನ್ ಸಿಂಗ್ ಕೂಡ ಮರುತ್ತರ ನೀಡಿದ್ದರು. ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರ ಹೇಳಿಕೆಗಳು ಹೋಗಿ ನಿಂತಿದ್ದು ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದೆ ಎಂಬುದು ವಿಶೇಷ.


ಹೌದು, ಸಿಎಸ್​ಕೆ -ಎಸ್ಆರ್​ಹೆಚ್ ನಡುವಣ ಪಂದ್ಯದ ಬಳಿಕ ಪಠಾಣ್ ಹೀಗೊಂದು ಟ್ವೀಟ್ ಮಾಡಲು ಮುಖ್ಯ ಕಾರಣ ಧೋನಿಯ ಆಟ. ವಿಶ್ವದ ಗ್ರೇಟ್ ಫಿನಿಶರ್ ಎಂದು ಕರೆಸಿಕೊಳ್ಳುವ ಮಾಹೀ ಸನ್​ರೈಸರ್ಸ್ ಹೈದರಾಬಾದ್ ತಂಡದ 18ರ ಯುವ ಸ್ಪಿನ್ನರ್ ಸಮದ್ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ಪಂದ್ಯ ಗೆಲ್ಲಿಸಿಕೊಡುವಲ್ಲಿ ಎಡವಿದ್ದರು. ಅದರಲ್ಲೂ ರನ್​ ಒಡಲು ಒದ್ದಾಡುತ್ತಿದ್ದರು. ಕೇವಲ 36 ಎಸೆತಗಳನ್ನು ಎದುರಿಸಿದರೂ ಧೋನಿ ಸಿಕ್ಕಾಪಟ್ಟೆ ಬಳಲಿದಂತೆ ಕಂಡು ಬಂದಿದ್ದರು. ಧೋನಿ ಕ್ರಿಸ್‍ನಲ್ಲಿದ್ದರೂ ಚೆನ್ನೈ ತಂಡ 7 ರನ್ ಅಂತರದಲ್ಲಿ ಸೋಲುಂಡಿತ್ತು.


ಇರ್ಫಾನ್ ಪಠಾಣ್


ಈ ಸೋಲಿನ ಬಳಿಕ ಧೋನಿ ವಯಸ್ಸಿನ ಕುರಿತು ಚರ್ಚೆ ಕೂಡ ಶುರವಾಗಿತ್ತು. ಇದರ ಬೆನ್ನಲ್ಲೇ ಪಠಾಣ್ ಮಾಡಿದ ವಯಸ್ಸು ಕೆಲವರಿಗೆ ನಂಬರ್, ಉಳಿದವರಿಗೆ ತಂಡದಿಂದ ತೆಗೆದು ಹಾಕಲು ಕಾರಣ ಎಂಬ ಟ್ವೀಟ್ ಪರೋಕ್ಷವಾಗಿ ಧೋನಿಗೆ ನೀಡಿದ ಟಾಂಗ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಭಜ್ಜಿ ಕೂಡ ಸಹಮತಿ ಸೂಚಿಸುವುದರೊಂದಿಗೆ ಚರ್ಚೆಯು ಮತ್ತೊಂದು ಹಂತಕ್ಕೆ ಹೋಯಿತು.


ಇದೀಗ ಇರ್ಫಾನ್ ಪಠಾಣ್ ಮಾಡಿರುವ ಟ್ವೀಟ್ ಪರ-ವಿರೋಧ ಚರ್ಚೆಗಳು ಜೋರಾಗಿದೆ. ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಆಟಗಾರನನ್ನು ವಯಸ್ಸಿನ ಕಾರಣದಿಂದಲೇ ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಅದರಲ್ಲೂ ಧೋನಿ ನಾಯಕರಾಗಿದ್ದ ವೇಳೆ ದಿಗ್ಗಜ ಕ್ರಿಕೆಟಿಗರಿಗೆ ವಿದಾಯ ಪಂದ್ಯ ಆಡುವ ಅವಕಾಶ ಕೂಡ ನೀಡಲಾಗಿರಲಿಲ್ಲ. ಆವಾಗ ವಯಸ್ಸು ಮುಖ್ಯವಾಗಿತ್ತು ಎಂದು ಹಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:



ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್

top videos
    First published: