news18-kannada Updated:April 8, 2021, 7:37 PM IST
glenn maxwell
14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 9ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಇದೀಗ ಪ್ರಸ್ತುತ ಐಪಿಎಲ್ ಆಡುತ್ತಿರುವ ಆಟಗಾರರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಪ್ರಕಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಎಬಿ ಡಿವಿಲಿಯರ್ಸ್ ತಮ್ಮ ಆಲ್ ಟೈಮ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದರು. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿರುವ ಮ್ಯಾಕ್ಸ್ವೆಲ್ ಕೂಡ ತಮ್ಮ ನೆಚ್ಚಿನ ಐಪಿಎಲ್ ಇಲೆವೆನ್ ಪ್ರಕಟಿಸಿದ್ದಾರೆ. ಆದರೆ ಮ್ಯಾಕ್ಸಿಯ ಈ ತಂಡದಲ್ಲಿ ಹಲವಾರು ದಿಗ್ಗಜ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ ಎಂಬುದು ವಿಶೇಷ.
ಗ್ಲೆನ್ ಮ್ಯಾಕ್ಸ್ವೆಲ್ ಆಯ್ಕೆ ಮಾಡಿರುವ ಆಲ್ ಟೈಮ್ ಐಪಿಎಲ್ ತಂಡ ಹೀಗಿದೆ. ಮ್ಯಾಕ್ಸ್ವೆಲ್ ರಚಿಸಿರುವ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಆರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. 3ನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಸುರೇಶ್ ರೈನಾರಿಗೆ ನಾಲ್ಕನೇ ಸ್ಥಾನ ನೀಡಲಾಗಿದೆ. ಇನ್ನು ಐದನೇ ಸ್ಥಾನಕ್ಕೆ ಮ್ಯಾಕ್ಸ್ವೆಲ್ ತಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಆರನೇ ಆಟಗಾರನನ್ನಾಗಿ ಆಂಡ್ರೆ ರಸೆಲ್ ಹಾಗೂ ಏಳನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಅವರನ್ನು ಹೆಸರಿಸಿದ್ದಾರೆ. ಹಾಗೆಯೇ ನಾಯಕನ ಜವಾಬ್ದಾರಿಯನ್ನೂ ಧೋನಿಗೆ ವಹಿಸಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಬಂದರೆ ಮ್ಯಾಕ್ಸ್ವೆಲ್ ಆರಿಸಿಕೊಂಡಿರುವ ಏಕೈಕ ಸ್ಪಿನ್ನರ್ ಹರ್ಭಜನ್ ಸಿಂಗ್.
ಉಳಿದಂತೆ ಮೋಹಿತ್ ಶರ್ಮಾ , ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಮ್ಯಾಕ್ಸ್ವೆಲ್ ತಮ್ಮ ಆಲ್ ಟೈಮ್ ಐಪಿಎಲ್ ತಂಡದಲ್ಲಿ ವೇಗಿಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಾಗ್ಯೂ ಐಪಿಎಲ್ನ ಸ್ಪಿನ್ ಮಾಂತ್ರಿಕ ರಶೀದ್ ಖಾನ್, ಯಾರ್ಕರ್ ಕಿಂಗ್ ಲಸಿತ್ ಮಲಿಂಗಾ, ಹಿಟ್ಮ್ಯಾನ್ ರೋಹಿತ್ ಶರ್ಮಾ, ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರಂತಹ ಹೆಸರುಗಳನ್ನು ಮ್ಯಾಕ್ಸ್ವೆಲ್ ಪರಿಗಣಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
Published by:
zahir
First published:
April 8, 2021, 7:37 PM IST