Glenn Maxwell| ಟಿ20 ವಿಶ್ವಕಪ್​ಗೆ ತನ್ನ ಫೇವರಿಟ್​ ಟಾಪ್​-5 ಆಟಗಾರರನ್ನು ಆಯ್ಕೆ ಮಾಡಿದ ಮ್ಯಾಕ್ಸ್​ವೆಲ್

ಗ್ಲೆನ್ ಮ್ಯಾಕ್ಸ್​ವೆಲ್ ಅವರ ಡ್ರೀಮ್ ಟೀಮ್​ನಲ್ಲಿ ರಶೀದ್ ಖಾನ್, ಆಂಡ್ರೆ ರಸೆಲ್, ಬೆನ್ ಸ್ಟೋಕ್ಸ್, ಆಸೀಸ್​ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಡಮ್ ಗಿಲ್​ಕ್ರಿಸ್ಟ್​ ಮತ್ತು ಎಕ್ಸ್​ಪ್ರೆಸ್​ ವೇಗದ ಬೌಲರ್ ಶಾನ್ ಟೈಟ್ ಸ್ಥಾನ ಪಡೆದಿದ್ದಾರೆ.

ಗ್ಲೆನ್ ಮ್ಯಾಕ್ಸ್​ವೆಲ್.

ಗ್ಲೆನ್ ಮ್ಯಾಕ್ಸ್​ವೆಲ್.

  • Share this:
    ಐಪಿಎಲ್​ -2021 ಕಳೆಗಟ್ಟಿದೆ (IPL 2021). ಈ ಚುಟುಕು ಕ್ರಿಕೆಟ್ ಉತ್ಸವ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಇನ್ನೂ ಟೂರ್ನಿಯ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಿರುವ ಆರ್​ಸಿಬಿ (RCB) ಈಗಾಗಲೇ ಫ್ಲೇ ಆಫ್​ನಲ್ಲಿ (Play Off) ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದು ರಾಯಲ್ ಚಾಲೆಂಜರ್ಸ್​ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ, ಇದೇ ತಿಂಗಳ ಕೊನೆಯಲ್ಲಿ ಯುಎಇ ನಲ್ಲಿ (UAE) ಟಿ20 ವಿಶ್ವಕಪ್ (T20 World Cup) ಸಹ ನಡೆಯಲಿದ್ದು, ಈ ಟೂರ್ನಿಗೆ ಆರ್​ಸಿಬಿ ತಂಡದ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) 5 ಜನರನ್ನು ಒಳಗೊಂಡ ತಮ್ಮ ಡ್ರೀಮ್ ಟೀಮ್ (Dream Team) ಅನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ (Rashid Khan), ವೆಸ್ಟ್ ಇಂಡೀಸ್ ನ ವಿಧ್ವಂಸಕ ಬ್ಯಾಟ್ಸ್ ಮನ್ ಆಂಡ್ರೆ ರಸೆಲ್ (Andre Russell), ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ (Ben Stokes), ಆಸೀಸ್​ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಡಮ್ ಗಿಲ್​ಕ್ರಿಸ್ಟ್​ (Adam Gilchrist) ಮತ್ತು ಎಕ್ಸ್​ಪ್ರೆಸ್​ ವೇಗದ ಬೌಲರ್ ಶಾನ್ ಟೈಟ್ ಸ್ಥಾನ ಪಡೆದಿದ್ದಾರೆ.

    ಸಂದರ್ಶನ ವೇಳೆ ತನ್ನ ಟಿ-20 ವಿಶ್ವ ಇಲೆವೆನ್‌ಗೆ ಐದು ಆಟಗಾರರನ್ನು ಆಯ್ಕೆ ಮಾಡಿ ಎಂದು ಕೇಳಿಕೊಂಡಾಗ, ಮ್ಯಾಕ್ಸ್‌ವೆಲ್ ಕ್ರಿಕೆಟ್ ಮೈದಾನದಲ್ಲಿ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಈ 5 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಈ ಆಯ್ಕೆ ಸಾಕಷ್ಟು ಕಠಿಣವಾಗಿತ್ತು ಎಂದು ಮ್ಯಾಕ್ಸ್​ವೆಲ್ ತಿಳಿಸಿದ್ದಾರೆ.

    ಟಿ-20 ಕ್ರಿಕೆಟ್ ನಲ್ಲಿ ರಶೀದ್ ಖಾನ್ ಪ್ರಮುಖ ಸ್ಪಿನ್ನರ್ ಆಗಿದ್ದು, ಸ್ಪಿನ್ನರ್​ಗಳ ಪೈಕಿ ಅವರು ಮೊದಲ ಆಯ್ಕೆ. ಏಕೆಂದರೆ, ರಶೀದ್ ಖಾನ್ ಈಗಾಗಲೇ ತನ್ನ ವೃತ್ತಿಜೀವನದಲ್ಲಿ ಹಲವಾರು ಸಾಧನೆಗಳನ್ನು ಸಾಧಿಸಿದ್ದಾನೆ, ಆಟದ ಎಲ್ಲಾ ಸ್ವರೂಪಗಳಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಬ್ಯಾಟ್ಸ್​ಮನ್​ಗಳಿಗೆ ಕಠಿಣ ಸವಾಲಾಗಿದ್ದಾರೆ ಎಂದು ಗ್ಲೆನ್ ಮ್ಯಾಕ್ಸ್​ವೆಲ್ ಅಭಿಪ್ರಾಯಪಟ್ಟಿದ್ದಾರೆ.

    ರಶೀದ್ ಖಾನ್ ಟಿ-20 ಕ್ರಿಕೆಟ್​ನಲ್ಲಿ ಅನುಭವಿ, ಪ್ರಪಂಚದಾದ್ಯಂತ ಹಲವಾರು ಫ್ರಾಂಚೈಸಿಗಳಿಗೆ ಆಡುತ್ತಿದ್ದಾರೆ. ಅವರು ಈವರೆಗೆ 281 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 17.54 ಸರಾಸರಿಯಲ್ಲಿ 388 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, 12.63 ಸರಾಸರಿಯಲ್ಲಿ 1288 ರನ್ ಗಳನ್ನೂ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 51 ಪಂದ್ಯಗಳಲ್ಲಿ 95 ವಿಕೆಟ್​ಗಳನ್ನು ಪಡೆದಿದ್ದಾರೆ.

    ಆಂಡ್ರೆ ರಸೆಲ್ ಬಗ್ಗೆ ಮಾತನಾಡಿರುವ ಮ್ಯಾಕ್ಸ್​ವೆಲ್, "ರಸೆಲ್ ಯಾವುದೇ ಪಂದ್ಯವನ್ನು ಬದಲಿಸಬಲ್ಲ ಆಟಗಾರ. ಇಂತಹ ಆಲ್​ರೌಂಡರ್​ ತನ್ನ ತಂಡದಲ್ಲಿರಬೇಕು ಎಂದು ಯಾವುದೇ ನಾಯಕ ಬಯಸುತ್ತಾರೆ. ರಸೆಲ್ ತನ್ನ ವೃತ್ತಿ ಜೀವನದಲ್ಲಿ 382 ಟಿ-20 ಪಂದ್ಯಗಳಲ್ಲಿ 169.66 ಸ್ಟ್ರೈಕ್ ರೇಟ್ ನಲ್ಲಿ 6,405 ರನ್ ಗಳಿಸಿದ್ದಾರೆ. ಅವರು 5/15 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದ್ದು, 340 ವಿಕೆಟ್ ಗಳಿಸಿದ್ದಾರೆ.

    ಬೆನ್​ ಸ್ಟೋಕ್ಸ್​ ಬಗ್ಗೆಯೂ ಮೆಚ್ಚುಗೆ ಸೂಚಿಸಿರುವ ಮ್ಯಾಕ್ಸ್‌ವೆಲ್ 148 ಟಿ 20 ಪಂದ್ಯಗಳಲ್ಲಿ 24.91 ಸರಾಸರಿಯಲ್ಲಿ 2,865 ರನ್ ಗಳಿಸಿದ್ದಾರೆ ಮತ್ತು 135.07 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅಲ್ಲದೆ, 86 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪರವಾಗಿ, ಸ್ಟೋಕ್ಸ್ 34 ಟಿ 20 ಪಂದ್ಯಗಳನ್ನು ಆಡಿದ್ದಾರೆ, 442 ರನ್ ಮತ್ತು 28 ವಿಕೆಟ್ ಗಳಿಸಿದ್ದಾರೆ.

    ಇದನ್ನೂ ಓದಿ: KKR vs SRH- ಶುಬ್ಮನ್ ಗಿಲ್ ಅಮೋಘ ಆಟ; ಎಸ್ಆರ್​ಎಚ್ ವಿರುದ್ಧ ಕೆಕೆಆರ್ ರೋಚಕ ಗೆಲುವು

    ತನ್ನ ಟಾಪ್ -5 ತಂಡದಲ್ಲಿ ಶಾನ್ ಟೈಟ್ ಅನ್ನು ಸೇರಿಸಿಕೊಂಡಿರುವ ಮ್ಯಾಕ್ಸ್ ವೆಲ್, "ಟೈಟ್​ ವಿರುದ್ಧ ನಾನು ಆಡಿದ್ದೇನೆ. ಹೀಗಾಗಿ ಆತನ ಬೌಲಿಂಗ್ ವೇಗದ ಅರಿವು ನನಗಿದೆ. ವೃತ್ತಿ ಜೀವನದ ಕೊನೆಯಲ್ಲೂ ಸಹ ಆತ ರಾಕೆಟ್​ ನಂತಹ ಚೆಂಡುಗಳನ್ನು ಎಸೆಯುತ್ತಿದ್ದರು, ಅವರ ಬೌಲಿಂಗ್​ ಅನ್ನು ಎದುರುಗೊಳ್ಳುವುದು ಅಷ್ಟು ಸುಲಭವಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ "ಗಿಲ್​ಕ್ರಿಸ್ಟ್​ ಸಾರ್ವಕಾಲಿಕ ಶ್ರೇಷ್ಠ ಚುಟುಕು ಮಾದರಿ ಬ್ಯಾಟ್ಸ್​ಮನ್" ಎಂದು ಅಭಿಪ್ರಾಯಪಟ್ಟಿದ್ದಾರೆ.
    Published by:MAshok Kumar
    First published: