HOME » NEWS » Ipl » GLENN MAXWELL HAS PLAYED FOR SO MANY FRANCHISES BECAUSE OF HIS INCONSISTENCY IN IPL GAUTAM GAMBHIR ZP

IPL 2021: RCB ಆಟಗಾರನ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಗೌತಮ್ ಗಂಭೀರ್

ಕಳೆದ ಸೀಸನ್​ನಲ್ಲಿ 13 ಪಂದ್ಯಗಳಿಂದ ಮ್ಯಾಕ್ಸ್​ವೆಲ್ ಕಲೆಹಾಕಿದ್ದು ಕೇವಲ 108 ರನ್​ಗಳು ಮಾತ್ರ. ವಿಚಿತ್ರ ಎಂದರೆ ಸಿಡಿಲಬ್ಬರದ ದಾಂಡಿಗ ಎಂದು ಗುರುತಿಸಿಕೊಂಡಿರುವ ಮ್ಯಾಕ್ಸಿ ಒಂದು ಸಿಕ್ಸರ್​ ಸಿಡಿಸಲು ಕೂಡ ಯಶಸ್ವಿಯಾಗಿರಲಿಲ್ಲ. 

news18-kannada
Updated:April 7, 2021, 6:26 PM IST
IPL 2021:  RCB ಆಟಗಾರನ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಗೌತಮ್ ಗಂಭೀರ್
Gautam Gambhir
  • Share this:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಐಪಿಎಲ್ ಪ್ರದರ್ಶನ ಅತ್ಯಂತ ನಿರಾಶದಾಯಕ ಎಂದು ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ತಿಳಿಸಿದ್ದಾರೆ. ಏಕೆಂದರೆ ಕಳೆದ ಹಲವು ಸೀಸನ್​ಗಳಲ್ಲಿ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಐಪಿಎಲ್​ನಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದಾಗ್ಯೂ ಅವರು ದೊಡ್ಡ ಮೊತ್ತಕ್ಕೆ ಬಿಡ್​ ಆಗುತ್ತಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ತಂಡದಲ್ಲಿನ ಅವರ ಪ್ರದರ್ಶನ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿದರೆ, ಆತನನ್ನು ಯಾವುದೇ ಫ್ರಾಂಚೈಸಿ ಬಿಟ್ಟು ಕೊಡುತ್ತಿರಲಿಲ್ಲ. ನೀವು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ನೋಡಿ, ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. 2014ರ ಐಪಿಎಲ್ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಬಿಟ್ಟರೆ, ಮತ್ಯಾವತ್ತೂ ಮಿಂಚಿಲ್ಲ. ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್​ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಗಂಭೀರ್ ತಿಳಿಸಿದ್ದಾರೆ.

ಕಳೆದ ಸೀಸನ್​ನಲ್ಲಿ ಪಂಜಾಬ್ ಪರ 10.74 ಕೋಟಿ ರೂ.ಗೆ ಆಡಿದ್ದ ಮ್ಯಾಕ್ಸ್​ವೆಲ್ ಅವರನ್ನು ಈ ಬಾರಿ 14.25 ಕೋಟಿಗೆ ಆರ್​ಸಿಬಿ ತಂಡದ ಖರೀದಿಸಿದೆ. ಒಂದು ಫ್ರ್ಯಾಂಚೈಸಿ ಆಟಗಾರನನ್ನು ಬಿಡುಗಡೆ ಮಾಡಲು ಏಕೈಕ ಕಾರಣವೆಂದರೆ ಪ್ರದರ್ಶನ ನೀಡದಿರುವುದು. ಇದಾಗ್ಯೂ ಆಸ್ಟ್ರೇಲಿಯಾ ತಂಡದಲ್ಲಿನ ಅವರ ಪ್ರದರ್ಶನ ಗಮನಿಸಿ ಫ್ರಾಂಚೈಸಿಗಳು ಎಕ್ಸ್-ಫ್ಯಾಕ್ಟರ್ ಎಂದು ಹೆಚ್ಚಿನ ಮೊತ್ತ ಹೂಡಿದೆ ಎಂದು ಗಂಭೀರ್ ತಿಳಿಸಿದರು.

ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದರೆ, ಅವರು ಅನೇಕ ಫ್ರಾಂಚೈಸಿಗಳಿಗಾಗಿ ಆಡುತ್ತಿರಲಿಲ್ಲ. ಅವರು ಆಡಿದ ಹಿಂದಿನ ಫ್ರಾಂಚೈಸಿ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಅವರು ದೆಹಲಿ ಪರ ಆಡಿದಾಗ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಲಾಗಿತ್ತು. ಇಂತಹ ಅತ್ಯುತ್ತಮ ಅವಕಾಶ ಪಡೆದರೂ ಅವರು ಮಿಂಚುತ್ತಿರಲಿಲ್ಲ ಎಂದು ಗಂಭೀರ್ ಹೇಳಿದರು.

ಕಳೆದ ಸೀಸನ್​ನಲ್ಲಿ 13 ಪಂದ್ಯಗಳಿಂದ ಮ್ಯಾಕ್ಸ್​ವೆಲ್ ಕಲೆಹಾಕಿದ್ದು ಕೇವಲ 108 ರನ್​ಗಳು ಮಾತ್ರ. ವಿಚಿತ್ರ ಎಂದರೆ ಸಿಡಿಲಬ್ಬರದ ದಾಂಡಿಗ ಎಂದು ಗುರುತಿಸಿಕೊಂಡಿರುವ ಮ್ಯಾಕ್ಸಿ ಒಂದು ಸಿಕ್ಸರ್​ ಸಿಡಿಸಲು ಕೂಡ ಯಶಸ್ವಿಯಾಗಿರಲಿಲ್ಲ.  ಅಲ್ಲದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು.​  ಇದೀಗ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಮ್ಯಾಕ್ಸ್​ವೆಲ್ ಸ್ಥಾನ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಸ್ಥಾನ ಪಡೆಯಲಿದ್ದು, ಆರ್​ಸಿಬಿ ಪರ ಚೊಚ್ಚಲ ಪಂದ್ಯದಲ್ಲೇ ಮಿಂಚಲಿದ್ದಾರಾ ಕಾದು ನೋಡಬೇಕಿದೆ.
Published by: zahir
First published: April 7, 2021, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories