Dhoni-Gautham: ಅರೇ.. ಶಾಕ್​ ಆಗ್ಬೇಡಿ, ನೀವ್​ ನೋಡ್ತಿರೋದು ನಿಜ! ಧೋನಿ-ಗಂಭೀರ್​​ ಸಮಾಗಮಕ್ಕೆ ಕ್ರೀಡಾಭಿಮಾನಿಗಳು ಫಿದಾ

ಈ ಹೈ-ಸ್ಕೋರಿಂಗ್‌(High Scoring) ಪಂದ್ಯಕ್ಕಿಂತಲೂ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದ್ದು, ಪಂದ್ಯದ ಬಳಿಕ ಎಂ.ಎಸ್.ಧೋನಿ(MS Dhoni) ಹಾಗೂ ಗೌತಮ್‌ ಗಂಭೀರ್‌(Gautham Gambhir) ನಡುವೆ ನಡೆದ ಮಾತುಕತೆ.

ಧೋನಿ-ಗಂಭೀರ್​

ಧೋನಿ-ಗಂಭೀರ್​

  • Share this:
ಕ್ರೀಡೆ ಎಂಬುದು ಮನರಂಜನೆ(Entertainment)ಯನ್ನು ನೀಡುವುದಷ್ಟೇ ಅಲ್ಲದೇ, ಹಲವು ಸಂಬಂಧಗಳನ್ನು ಬೆಸೆಯುವ, ಮನಸ್ತಾಪಗಳನ್ನ ದೂರ ಮಾಡುವ ವೇದಿಕೆ ಎಂಬುದು ಈಗಾಗಲೇ ಸಾಬೀತಾಗಿದೆ. ಇಂತಹದ್ದೇ ಅಪರೂಪದ ಸನ್ನಿವೇಶಕ್ಕೆ ಇದೀಗ 15ನೇ ಆವೃತ್ತಿಯ ಐಪಿಎಲ್‌(IPL) ಟೂರ್ನಿ ಸಾಕ್ಷಿಯಾಗಿದೆ. ಮುಂಬೈ(Mumbai)ನ ಬ್ರೆಬೌರ್ನ್‌ ಮೈದಾನದಲ್ಲಿ ಗುರುವಾರ ನಡೆದ ಲಕ್ನೋ ಸೂಪರ್‌ ಜೈಂಟ್ಸ್‌(Lucknow Super Giants) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡಗಳ ನಡುವಿನ ಪಂದ್ಯ ಭರ್ಜರಿ ಮನರಂಜನೆ ನೀಡಿತು. ಭಾರಿ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಲಕ್ನೋ ತಂಡ ಅದ್ಭುತ ಗೆಲುವು ಸಾಧಿಸಿತು. ಆದರೆ ಈ ಹೈ-ಸ್ಕೋರಿಂಗ್‌(High Scoring) ಪಂದ್ಯಕ್ಕಿಂತಲೂ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದ್ದು, ಪಂದ್ಯದ ಬಳಿಕ ಎಂ.ಎಸ್.ಧೋನಿ(MS Dhoni) ಹಾಗೂ ಗೌತಮ್‌ ಗಂಭೀರ್‌(Gautham Gambhir) ನಡುವೆ ನಡೆದ ಮಾತುಕತೆ.

ಧೋನಿ-ಗಂಭೀರ್​ ಜೊತೆಗಿರುವ ಫೋಟೋ ವೈರಲ್​!

ಉಭಯ ತಂಡಗಳ ನಡುವಿನ ಈ ಪಂದ್ಯ ಮುಗಿಯುತ್ತಿದ್ದಂತೆ, ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿರುವ ಗೌತಮ್‌ ಗಂಭೀರ್‌, ಸಿಎಸ್‌ಕೆ ತಂಡದ ಮಾಜಿ ಕ್ಯಾಪ್ಟನ್‌ ಎಂ.ಎಸ್. ಧೋನಿ ಬಳಿಗೆ ತೆರಳಿ ಮಾತುಕತೆ ನಡೆಸಿದರು. ಟೀಂ ಇಂಡಿಯಾದ ಈ ಇಬ್ಬರು ಮಾಜಿ ಆಟಗಾರರು ಮಾತುಕತೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಯಿತು. ಪಂದ್ಯದ ನಂತರ ಇಬ್ಬರು ಆಟಗಾರರು ದೀರ್ಘ ಕಾಲದವರೆಗೂ ಮಾತುಕತೆ ನಡೆಸಿದರು. ಪಂದ್ಯ ಮುಗಿಯುತ್ತಿದ್ದಂತೆ ಗೌತಮ್‌ ಗಂಭೀರ್‌, ಖುದ್ದು ಧೋನಿ ಬಳಿಗೆ ತೆರಳಿ ಮಾತಕತೆ ಆರಂಭಿಸಿದರು. ನಂತರ ಇವರಿಬ್ಬರ ಮಾತುಕತೆಯಲ್ಲಿ ಲಕ್ನೋ ತಂಡದ ವೇಗದ ಬೌಲರ್‌ ಆವೇಶ್‌ ಖಾನ್‌ ಸೇರ್ಪಡೆಗೊಂಡರು. ಆದರೆ ಧೋನಿ ಹಾಗೂ ಗಂಭೀರ್‌ ನಡುವಿನ ಮಾತುಕತೆಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿತು.

2011ರ ವಿಶ್ವಕಪ್​ ಹೀರೋಗಳು ಧೋನಿ-ಗಂಭೀರ್​!

ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜ ಆಟಗಾರರು ಭಾರತೀಯ ಕ್ರಿಕೆಟ್‌ನಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. 2007ರ ಟಿ20 ವಿಶ್ವಕಪ್‌ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲೂ ಈ ಇಬ್ಬರು ಜೊತೆಯಾಗಿದ್ದರು. ಆದರೆ ನಂತರದಲ್ಲಿ ಧೋನಿ ಹಾಗೂ ಗಂಭೀರ್‌ ನಡುವೆ ಬಿರುಕು ಮೂಡಿರುವ ಹಾಗೂ ಗಂಭೀರ್‌ ಕ್ರಿಕೆಟ್‌ ಬದುಕು ಅಂತ್ಯವಾಗಲು ಧೋನಿಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿತ್ತು.



ಇದನ್ನೂ ಓದಿ: ಟಿ20 ಅಲ್ಲಿ ಹೊಸ ದಾಖಲೆ ಬರೆದ ಧೋನಿ, ಬ್ರಾವೋ ಈಗ ನಂಬರ್ ಒನ್ ಬೌಲರ್

ಈ ನಡುವೆ ಧೋನಿ ಅವರ ಕುರಿತು ಕ್ರೀಡಾ ನಿರೂಪಕ ಜತಿನ್‌ ಸ್ಯಾಪ್ರೋ ಅವರ ಶೋನಲ್ಲಿ ಮಾತನಾಡಿದ್ದ ಗಂಭೀರ್‌, ತಮಗೆ ಎಂ.ಎಸ್‌. ಧೋನಿ ಅವರ ಬಗ್ಗೆ ಅಪಾರ ಗೌರವವಿದ್ದು, 138 ಕೋಟಿ ಜನರ ಎದುರು ನಾನು ಇದನ್ನು ಹೇಳುತ್ತೇನೆ. ಭಾರತೀಯ ಕ್ರಿಕೆಟ್‌ಗೆ ಧೋನಿ ಅವರ ಕೊಡುಗೆ ಸಾಕಷ್ಟಿದೆ. ಪ್ರತಿ ಸಂದರ್ಭದಲ್ಲೂ ನಾನು ಅವರ ಬೆನ್ನಿಗೆ ನಿಂತಿದ್ದೇನೆ ಎಂದಿದ್ದರು.

ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಂಭೀರ್​!

ಗೌತಮ್‌ ಗಂಭೀರ್‌ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು. ಅಲ್ಲದೆ ಹಲವು ವರ್ಷಗಳ ಕಾಲ ಧೋನಿ ನಾಯಕತ್ವದಲ್ಲಿ ಇವರು ಟೀಂ ಇಂಡಿಯಾದಲ್ಲಿ ಆಡಿದ್ದರು. ಧೋನಿ ಅವರೊಂದಿಗೆ ತಂಡದ ಉಪ-ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದ ಗಂಭೀರ್‌, ಭಾರತ ತಂಡ ಟಿ20 ಹಾಗೂ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಇದನ್ನೂ ಓದಿ: ಪಂಜಾಬ್ ರಾಜರನ್ನು ಎದುರಿಸಲು ಸಜ್ಜಾದ ಕೊಲ್ಕತ್ತಾ! ಉಭಯ ತಂಡಗಳ ಬಲಾಬಲ ಹೇಗಿದೆ?

ಆದರೆ ನಂತರದ ದಿನಗಳಲ್ಲಿ ಉಂಟಾಗಿದ್ದ ಕೆಲವು ಊಹಾಪೋಹಗಳು ಧೋನಿ ಹಾಗೂ ಗಂಭೀರ್‌ ನಡುವೆ ಮನಸ್ತಾಪ ಇರುವಂತೆ ಬಿಂಬಿಸಿತ್ತು. ಆದರೆ ಇದೀಗ ಈ ಇಬ್ಬರು ಮೈದಾನದಲ್ಲಿ ಹಲವು ಹೊತ್ತಿನವರೆಗೆ ಮಾತುಕತೆ ನಡೆಸಿದ್ದು, ಕ್ರಿಕೆಟ್‌ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಅಂದ ಹಾಗೆ ಧೋನಿ ಮತ್ತು ಗೌತಮ್ ಗಂಭೀರ್ ಏನು ಮಾತನಾಡಿರಬಹುದು ಎಂಬುದು ಗೊತ್ತಿಲ್ಲ. ಆದರೆ ಇಬ್ಬರ ನಡುವಿನ ದ್ವೇಷವನ್ನು ಕ್ರಿಕೆಟ್ ಮರೆ ಮಾಚುವಂತೆ ಮಾಡಿತು ಎಂಬುದು ಸುಳ್ಳಲ್ಲ.
Published by:Vasudeva M
First published: