ಇಂಡಿಯನ್ ಪ್ರೀಮಿಯರ್ ಲೀಗ್ ಮರು ಆಯೋಜನೆ ಯಾವಾಗ, ಎಲ್ಲಿ ನಡೆಯಲಿದೆ ಉಳಿದ ಪಂದ್ಯಗಳು..? ಇತ್ಯಾದಿ ಪ್ರಶ್ನೆಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಮ ಹಾಕಲು ಮುಂದಾಗಿದ್ದಾರೆ. ಹೌದು, ಐಪಿಎಲ್ 2021ರ ಮರು ಆಯೋಜನೆ ಬಗ್ಗೆ ಮಾತನಾಡಿರುವ ಗಂಗೂಲಿ, ಉಳಿದ ಪಂದ್ಯಗಳನ್ನು ಭಾರತದಲ್ಲಿ ಆಯೋಜಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಾರಿ ಐಪಿಎಲ್ನ 60 ಪಂದ್ಯಗಳಲ್ಲಿ 29 ಮ್ಯಾಚ್ಗಳು ನಡೆದಿವೆ. ಇನ್ನು 31 ಪಂದ್ಯಗಳು ನಡೆಯಬೇಕಿದೆ. ಈ ಪಂದ್ಯಗಳನ್ನು ಮುಗಿಸದಿದ್ದರೆ ಬಿಸಿಸಿಐಗೆ 2500 ಕೋಟಿ ನಷ್ಟವಾಗಲಿದೆ. ಹೀಗಾಗಿ ಐಪಿಎಲ್ ಅನ್ನು ಮರು ಆಯೋಜಿಸುವುದು ಅನಿವಾರ್ಯ ಎಂದಿದ್ದಾರೆ ಗಂಗೂಲಿ. ಅದಾಗ್ಯೂ ಯಾವಾಗ ಟೂರ್ನಿಯನ್ನು ಆಯೋಜಿಸಲಿದ್ದೇವೆ ಎಂಬುದರ ಬಗ್ಗೆ ದಾದಾ ಸ್ಪಷ್ಟ ಉತ್ತರ ನೀಡಲಿಲ್ಲ.
ಎಲ್ಲೆಡೆಯು 14 ದಿನಗಳ ಕ್ವಾರಂಟೈನ್ ಇದೆ. ಇದು ಟೂರ್ನಿ ಆಯೋಜಿಸಲು ತೊಡಕಾಗಲಿದೆ. ಆಟಗಾರರನ್ನು ಬಯೋಬಬಲ್ನಲ್ಲಿ ಇರಿಸುವುದು ಸಹ ಒಳ್ಳೆಯದಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಬಯೋಬಬಲ್ನಲ್ಲಿ ಕ್ರಿಕೆಟ್ ಆಡಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಟೂರ್ನಿಯನ್ನು ಯಾವಾಗ ನಡೆಸಲಿದ್ದೇವೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ