HOME » NEWS » Ipl » FRUSTRATED VIRAT KOHLI TAKES HIS ANGER OUT ON A CHAIR DURING SRH RCB IPL MATCH ZP

Virat Kohli: ಔಟಾದ ಸಿಟ್ಟನ್ನು ಕುರ್ಚಿ ಮೇಲೆ ತೀರಿಸಿದ ವಿರಾಟ್ ಕೊಹ್ಲಿ: ವಿಡಿಯೋ ವೈರಲ್

ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಲು ತಾಳ್ಮೆಯಿಂದ ನೆಲ ಕಚ್ಚಿ ಆಡುತ್ತಿದ್ದ ವಿರಾಟ್ ಕೊಹ್ಲಿ 33 ರನ್ ಗಳಿಸಿದ್ದಾಗ ಜೇಸನ್ ಹೋಲ್ಡರ್ ಅವರ ಅನಿರೀಕ್ಷಿತ ಬೌನ್ಸರ್​ಗೆ ಉತ್ತರ ನೀಡಲು ಹೋಗಿ ಸುಲಭ ಕ್ಯಾಚ್ ನೀಡಿದರು.

news18-kannada
Updated:April 15, 2021, 6:29 PM IST
Virat Kohli: ಔಟಾದ ಸಿಟ್ಟನ್ನು ಕುರ್ಚಿ ಮೇಲೆ ತೀರಿಸಿದ ವಿರಾಟ್ ಕೊಹ್ಲಿ: ವಿಡಿಯೋ ವೈರಲ್
Virat kohli
  • Share this:
ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಆರ್​ಸಿಬಿ 6 ರನ್​ಗಳ ರೋಚಕ ಜಯ ಸಾಧಿಸಿತು. ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಿರಲಿಲ್ಲ. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸುವಲ್ಲಿ ಎಡವಿದರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕೊಹ್ಲಿ, ಅಬ್ಬರಿಸಲಾರಂಭಿಸುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.

ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಲು ತಾಳ್ಮೆಯಿಂದ ನೆಲ ಕಚ್ಚಿ ಆಡುತ್ತಿದ್ದ ವಿರಾಟ್ ಕೊಹ್ಲಿ 33 ರನ್ ಗಳಿಸಿದ್ದಾಗ ಜೇಸನ್ ಹೋಲ್ಡರ್ ಅವರ ಅನಿರೀಕ್ಷಿತ ಬೌನ್ಸರ್​ಗೆ ಉತ್ತರ ನೀಡಲು ಹೋಗಿ ಸುಲಭ ಕ್ಯಾಚ್ ನೀಡಿದರು. ಇದರೊಂದಿಗೆ 33 ರನ್​ಗಳ ಕೊಹ್ಲಿ ಇನಿಂಗ್ಸ್ ಅಂತ್ಯಗೊಂಡಿತು. ಇತ್ತ ವಿಕೆಟ್ ಒಪ್ಪಿಸಿ ಡಗೌಟ್ ಕಡೆ ಬಂದ ಕೊಹ್ಲಿ ಸಿಟ್ಟನ್ನು ಹಾಕಿದರು.

ಡಗೌಟ್​ಗೆ ತಲುಪುತ್ತಿದ್ದಂತೆ ಅಲ್ಲಿದ್ದ ಚೇರನ್ನು ಬ್ಯಾಟ್​ನಿಂದ ಹೊಡೆದುರುಳಿಸುವ ಮೂಲಕ ಕೊಹ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಕೊಹ್ಲಿ ಹೀಗೆ ಕೋಪಗೊಳ್ಳಲು ಮತ್ತೊಂದು ಕಾರಣ ಕೂಡ ಇದೆ. ಅದೇನೆಂದರೆ ಕಳೆದ 4 ವರ್ಷಗಳಿಂದ ಕೊಹ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅಲ್ಲದೆ ಎಸ್​ಆರ್​ಹೆಚ್ ವಿರುದ್ದ ಕಳೆದ ಆರು ಇನಿಂಗ್ಸ್​ಗಳಲ್ಲಿ ಕೊಹ್ಲಿಗಳಿಸಿದ್ದು 12,3,16,14,7,6 ರನ್ ಮಾತ್ರ. ಅಂದರೆ ಒಟ್ಟು ಒಟ್ಟು ಕೇವಲ 58 ರನ್​ಗಳಷ್ಟೇ.

ಇದೀಗ ಈ ಬಾರಿ ಕೂಡ ವಿಫಲರಾಗುತ್ತಿದ್ದಂತೆ ಸಿಟ್ಟು ನೆತ್ತಿಗೇರಿದೆ. ಅದರಂತೆ ಚೇರ್​ನ್ನು ತಳ್ಳಿ ಸಿಟ್ಟನ್ನು ಹೊರಹಾಕಿದ್ದಾರೆ. ಇದಾಗ್ಯೂ ಅತೀ ಕಡಿಮೆ ಮೊತ್ತವನ್ನು ಆರ್​ಸಿಬಿ ಡಿಫೆಂಡ್ ಮಾಡುವ ಮೂಲಕ ಸತತ 2ನೇ ಗೆಲುವು ದಾಖಲಿಸಿದೆ.
Published by: zahir
First published: April 15, 2021, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories