ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮೆಕ್‌ಗಿಲ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಆಸ್ಟ್ರೇಲಿಯಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಪಹರಣ ಘಟನೆಯು ಏಪ್ರಿಲ್ 14 ರಂದು ನಡೆದಿದ್ದು, ಆಸೀಸ್ ಮಾಜಿ ಕ್ರಿಕೆಟಿಗನ ಸಿಡ್ನಿಯಲ್ಲಿರುವ ಮನೆಯಿಂದ ಕಿಡ್ನ್ಯಾಪ್ ಮಾಡಲಾಗಿತ್ತು. ಮನೆಗೆ ಬಂದಿದ್ದ ಬಂದೂಕುಧಾರಿ ತಂಡವೊಂದು ಅಪಹರಿಸಿ ಒಂದು ಗಂಟೆಗಳ ಕಾಲ ಒತ್ತೆಯಾಳಾಗಿಸಿಕೊಂಡಿದ್ದರು. ಆ ಬಳಿಕ ಬಿಡುಗಡೆ ಮಾಡಿದ ಬೆನ್ನಲ್ಲೇ ಮೆಕ್‌ಗಿಲ್ ಪೊಲೀಸರಿಗೆ ದೂರು ನೀಡಿದ್ದರು.
ಅಪಹರಣ ಮಾಡಿದ್ದ ಆರೋಪಿಗಳು ಮೆಕ್‌ಗಿಲ್ ಅವರನ್ನು ವಾಹನದಲ್ಲಿ ಕರೆದೊಯ್ದು, ಬ್ರಿಂಗಲ್ ಎಂಬ ಪ್ರದೇಶದಲ್ಲಿ ಒತ್ತೆಯಾಳಾಗಿಸಿಕೊಂಡಿದ್ದರು. ಈ ವೇಳೆ ಇಬ್ಬರು ಹಲ್ಲೆ ಕೂಡ ನಡೆಸಿದ್ದರು ಎಂದು ಮೆಕ್‌ಗಿಲ್ ತಮ್ಮ ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಡ್ನಿಯ ನ್ಯೂ ಸೌತ್ ವೇಲ್ಸ್ ಪೊಲೀಸರು ಇದೀಗ ಕಿಡ್ಯಾಪ್ ಗ್ಯಾಂಗ್ನ ನಾಲ್ವರನ್ನು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ