ಗೆಲುವು...ಸೋಲು...ಸೋಲು...ಸೋಲು...ಗೆಲುವು..ಸೋಲು...ಸೋಲು...ಇದು ಪ್ರಸ್ತುತ ಐಪಿಎಲ್ನಲ್ಲಿ 3 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಲಿತಾಂಶ. ಕಳೆದ 12 ಸೀಸನ್ಗಳಲ್ಲೂ ಐಪಿಎಲ್ನ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ CSK ಲೆಕ್ಕಾಚಾರಗಳು ಈ ಬಾರಿ ತಲೆಕೆಳಗಾಗುತ್ತಿದೆ. ಅದರಲ್ಲೂ ನಾಯಕ ಧೋನಿ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಹಾಗೆಯೇ ತಂಡದಲ್ಲಿರುವ ಕೆಲ ಆಟಗಾರರ ನಿರುತ್ಸಾಹ ಕೂಡ ಚರ್ಚೆಯಾಗುತ್ತಿದೆ. ಇದೇ ಕಾರಣದಿಂದ ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸಿಎಸ್‌ಕೆ ತಂಡವನ್ನು ವ್ಯಂಗ್ಯವಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೆಹ್ವಾಗ್, ಸಿಎಸ್‌ಕೆ ತಂಡದಲ್ಲಿರುವ ಕೆಲ ಆಟಗಾರರು ಸರ್ಕಾರಿ ನೌಕರಿ ಅಂದುಕೊಂಡಿದ್ದಾರೆ. ಆಡಿದರೂ, ಆಡದಿದ್ದರೂ ಸಂಬಳವಂತು ಸಿಗುತ್ತೆ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದಿದ್ದರು.
ಇದೀಗ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ಬಗ್ಗೆ ಸೆಹ್ವಾಗ್ ಮಾತನಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 37 ರನ್ಗಳಿಂದ ಸೋತಿರುವ ಬಗ್ಗೆ ಮಾತನಾಡಿದ ವೀರು, ನನಗೆ ಸಿಎಸ್‌ಕೆ ಅಭಿಮಾನಿಗಳನ್ನು ನೆನಸಿಕೊಂಡರೆ ಬೇಜಾರಾಗುತ್ತೆ. ಏಕೆಂದರೆ ಸತತ ಸೋಲು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ ಎಂದಿದ್ದಾರೆ.
ಈ ಹಿಂದೆ ಎಲ್ಲಾ ಸೀಸನ್‌ನಲ್ಲಿ ಸಿಎಸ್‌ಕೆ ತಂಡ ಎಂದರೆ ಎದುರಾಳಿಗಳಿಗೆ ಒಂದು ರೀತಿಯ ಭಯವಿತ್ತು. ಅಲ್ಲದೆ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕಾಗಿ ವಿಶೇಷ ಎಚ್ಚರವಹಿಸುತ್ತಿದ್ದವು. ಆದರೆ ಈ ವರ್ಷ ಅವರ ಬ್ಯಾಟಿಂಗ್ ಎಲ್ಲರನ್ನು ನಿರಾಸೆಗೊಳಿಸಿದೆ. ಇಂತಹ ಫಲಿತಾಂಶ ಚೆನ್ನೈ ಅಭಿಮಾನಿಗಳಿಗೆ ನಿಜಕ್ಕೂ ಬೇಸರ. ಏಕೆಂದರೆ ಹೋರಾಡಿದ ತಂಡವೊಂದು ಈ ರೀತಿಯಾಗಿ ನೆಲಕಚ್ಚಿರುವುದು ದುಃಖಕರ ಎಂದು ಸೆಹ್ವಾಗ್ ಹೇಳಿದ್ದಾರೆ.
ಸದ್ಯ ಸಿಎಸ್‌ಕೆ 7 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮಂಗಳವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ 8ನೇ ಪಂದ್ಯವಾಡಲಿದ್ದು, ಈ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಐಪಿಎಲ್ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ