IPL

  • associate partner

IPL 2020: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಶುರುವಾಗಿದೆ ನಡುಕ: ಯಾಕೆ?, ಈ ವಿಡಿಯೋ ನೋಡಿ

ಆಸೀಸ್ ನಾಯಕ, ಆರ್​ಸಿಬಿ ಓಪನರ್ ಆ್ಯರೋನ್ ಫಿಂಚ್ ಫಾರ್ಮ್​ ಕಳೆದುಕೊಂಡರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷಿ ಈ ವಿಡಿಯೋ...

news18-kannada
Updated:September 14, 2020, 12:19 PM IST
IPL 2020: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಶುರುವಾಗಿದೆ ನಡುಕ: ಯಾಕೆ?, ಈ ವಿಡಿಯೋ ನೋಡಿ
IPL 2020
  • Share this:
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಇದಕ್ಕಾಗಿಯೆ ಆರ್​ಸಿಬಿ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಅದರಲ್ಲೂ ಮೊನ್ನೆಯಷ್ಟೆ ಕ್ಯಾಪ್ಟನ್ ಕೊಹ್ಲಿಯ ನಟರಾಜಾ ಶಾಟ್ ತುಂಬಾನೇ ವೈರಲ್ ಆಗಿತ್ತು. ಧಮಾಕೆದಾರ್ ಶಾಟ್​ಗಳನ್ನ ಹೊಡೆದ ವಿರಾಟ್ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದರಿಂದ ಅಭಿಮಾನಿಗಳಂತು ಖುಷಿಯಲ್ಲಿದ್ದಾರೆ. ಅಲ್ಲದೆ ನಮ್ಮ ತಂಡದ ಆಟಗಾರರು ದಷ್ಟಪುಷ್ಟವಾಗಿ ಸಮರ್ಥರಾಗಿದ್ದಾರೆ ಎಂದು ವಿರಾಟ್ ತಿಳಿಸಿದ್ದರು. ಆದರೆ, ಸದ್ಯ ಆರ್​ಸಿಬಿ ತಂಡಕ್ಕೆ ನಡುಕ ಶುರುವಾಗಿದೆ. ಅಷ್ಟಕ್ಕೂ ಆರ್​ಸಿಬಿಗೆ ಭಯ ಶುರುವಾಗಲು ಕಾರಣವೇನು?, ಈ ಸ್ಟೋರಿ ಓದಿ.

ಆರ್​ಸಿಬಿ ಫ್ರಾಂಚೈಸಿ ಈ ಬಾರಿಯ ಹರಾಜಿನಲ್ಲಿ ಆ್ಯರೋನ್ ಫಿಂಚ್, ಕ್ರಿಸ್ ಮೊರೀಸ್, ಇಸುರು ಉದಾನ ಸೇರಿದಂರೆ ಕೆಲವು ಸ್ಟಾರ್ ಆಟಗಾರರನ್ನು ಖರೀದಿ ಮಾಡಿತ್ತು. ಹೀಗೆ ಮೇಲ್ನೋಟಕ್ಕೆ ಆರ್​ಸಿಬಿ ತಂಡ ಬಲಿಷ್ಠವಾಗಿಯೂ ಇದೆ. ಆದರೆ, ಸದ್ಯ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಬೇಕಾಗಿರುವ ಆ್ಯರೋನ್ ಫಿಂಚ್ ಐಪಿಎಲ್ ಹತ್ತಿರವಾಗುತ್ತಿದ್ದಂತೆ ಫಾರ್ಮ್​ ಕಳೆದುಕೊಂಡರಾ ಎಂಬ ಭಯ ಫ್ರಾಂಚೈಸಿಯಲ್ಲಿ ಶುರುವಾಗಿದೆ.

IPL 2020: ಈ ಬಾರಿಯ ಐಪಿಎಲ್​ನಲ್ಲಿ ಈ ತಂಡ ಅದಾಗಲೇ ಅರ್ಧ ಟೂರ್ನಿ ಗೆದ್ದಾಗಿದೆ: ಹೀಗೆ ಹೇಳಿದ್ಯಾರು?

ಇದಕ್ಕೆ ಈ ವಿಡಿಯೋವೇ ಸಾಕ್ಷಿ. ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಆಂಗ್ಲರ ವಿರುದ್ಧ ಫಿಂಚ್ ಪಡೆ ಏಕದಿನ ಸರಣಿ ಆಡುತ್ತಿದೆ. ಟಿ-20 ಸರಣಿ ಸೋಲಿನ ಬಳಿಕ ಆಸ್ಟ್ರೇಲಿಯಾ ಕನಿಷ್ಠ ಏಕದಿನ ಸರಣಿಯನ್ನಾದರು ಗೆಲ್ಲಬೇಕೆಂದು ಪಣತೊಟ್ಟಿದೆ. ಸದ್ಯ ಮೂರು ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲದಲ್ಲಿದೆ.

ಆದರೆ, ಆಸೀಸ್ ನಾಯಕ, ಆರ್​ಸಿಬಿ ಓಪನರ್ ಆ್ಯರೋನ್ ಫಿಂಚ್ ಫಾರ್ಮ್​ ಕಳೆದುಕೊಂಡರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷಿ ಫಿಂಚ್ ಇಂಗ್ಲೆಂಡ್ ಬೌಲರ್ ಕ್ರಿಸ್ ವೋಕ್ಸ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆಗಿರುವುದು. ಸುಲಭವಾದ ಎಸೆತವನ್ನು ಫಿಂಚ್ ಎದುರಿಸುವಲ್ಲಿ ಎಡವಿದರು. ಪರಿಣಾಮ ಔಟ್ ಆಗಿ ನಿರ್ಗಮಿಸಬೇಕಾಯಿತು.

ಫಿಂಚ್ ಕ್ಲೀನ್ ಬೌಲ್ಡ್​ ಆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Virat Kohli: ನನ್ನ ಇಡೀ ಜಗತ್ತು ಒಂದೇ ಫ್ರೇಮ್​ನಲ್ಲಿದೆ: ಅನುಷ್ಕಾ ಫೋಟೋಗೆ ಕೊಹ್ಲಿ ಕಮೆಂಟ್

ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19 ರಂದು ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ.

ಇನ್ನೂ ಇದಾಗಿ ಎರಡು ದಿನಗಳಲ್ಲಿ ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
Published by: Vinay Bhat
First published: September 14, 2020, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading