IPL

  • associate partner
HOME » NEWS » Ipl » DREAM11 IPL 2020 WILL BE STARTING IN 14 DAYS HERE ARE THE INTERESTING DETAILS VB

IPL 2020: ಐಪಿಎಲ್ ಆರಂಭಕ್ಕೆ ಕೇವಲ 13 ದಿನಗಳಷ್ಟೆ ಬಾಕಿ: ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರ!

IPL 2020: ಈ ಬಾರಿಯ ಐಪಿಎಲ್ ಟೂರ್ನಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಪ್ರಮುಖ ವಿಚಾರಗಳಿವೆ. ಈ ಕುರಿತ ಕೆಲ ಮಾಹಿತಿ ಇಲ್ಲಿದೆ.

news18-kannada
Updated:September 5, 2020, 9:43 AM IST
IPL 2020: ಐಪಿಎಲ್ ಆರಂಭಕ್ಕೆ ಕೇವಲ 13 ದಿನಗಳಷ್ಟೆ ಬಾಕಿ: ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರ!
Dream11 IPL 2020
  • Share this:
ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಇನ್ನೇನು ಕೇವಲ 13 ದಿನಗಳಷ್ಟೆ ಬಾಕಿ ಉಳಿದಿವೆ. ಅಭಿಮಾನಿಗಳಂತೂ ಈ ಮಿಲಿಯನ್ ಡಾಲರ್ ಟೂರ್ನಿ ಆರಂಭಕ್ಕೆ ಕಾದುಕುಳಿತಿದ್ದು, ರೋಚಕ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಹಾತೊರೆಯುತ್ತಿದೆ. ಮೈದಾನಕ್ಕೆ ಬಂದು ಪಂದ್ಯ ವೀಕ್ಷಸಲು ಅನುಮತಿ ಇಲ್ಲ ಎಂಬ ಬೇಸರ ಕೊಂಚ ಅಭಿಮಾನಿಗಳಲ್ಲಿದೆ ಆದರೂ ಟೂರ್ನಿ ಆರಂಭವಾಗಿ ತಿಂಗಳು ಕಳಿದ ಬಳಿಕ ಶೇ. 50 ರಷ್ಟು ಜನರನ್ನು ಮೈದಾನದೊಳಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 19 ರಂದು ಈ ಮಹಾಟೂರ್ನಿಗೆ ಚಾಲನೆ ಸಿಗಲಿದ್ದು, ನವೆಂಬರ್ 10ರ ವರೆಗೆ ನಡೆಯಲಿದೆ.

ಇನ್ನೂ ಈ ಟೂರ್ನಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಪ್ರಮುಖ ವಿಚಾರಗಳಿವೆ. ಈ ಕುರಿತ ಕೆಲ ಮಾಹಿತಿ ಇಲ್ಲಿದೆ.

Virat Kohli: ಆರ್​ಸಿಬಿಗೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಬೇಕು ಎಂಬುದು ನನ್ನ ಬಹುದೊಡ್ಡ ಕನಸು: ವಿರಾಟ್ ಕೊಹ್ಲಿ

ಈ ಬಾರಿ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯ ನಿಯಮಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ರಾತ್ರಿ 8 ಗಂಟೆಗೆ ಈ ಪಂದ್ಯಗಳನ್ನು ಆರಂಭಿಸಲಾಗಿತ್ತು. ಆದರೆ, ಈ ಬಾರಿಯ ಟೂರ್ನಿಯಲ್ಲಿ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಈ ಬಾರಿ ಐಪಿಎಲ್‌ನಲ್ಲಿ 10 ಡಬಲ್ ಹೆಡರ್ (ದಿನದಲ್ಲಿ ಎರಡು ಪಂದ್ಯಗಳು) ಪಂದ್ಯಗಳನ್ನು ಇರಲಿದೆ ಎಂದು ತಿಳಿದುಬಂದಿದೆ.

ಐಪಿಎಲ್​ನಲ್ಲಿ ವಾರ್ಷಿಕವಾಗಿ ಅಂದಾಜು 4000 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದುಹೋಗುತ್ತದೆ. ಇದರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಟೋರ್ಟ್ಸ್ ಪಡೆದುಕೊಂಡಿದ್ದು, ಮಾಹಿತಿಯ ಪ್ರಕಾರ ಸ್ಟಾರ್ ಸ್ಟೋಟ್ಸ್ 3,300 ಕೋಟಿ. ರೂಗಳ ನೀಡಿ ಪ್ರಸಾರದ ಹಕ್ಕನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ 10 ಸೆಕೆಂಡಿನ ಜಾಹೀರಾತಿಗೆ ಸ್ಟಾರ್​​​ಸ್ಪೋರ್ಟ್ಸ್​​​​​​ 8 ರಿಂದ 10 ಲಕ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಐಪಿಎಲ್ 2020 ಫೈನಲ್ ನವೆಂಬರ್ 10 ರಂದು ನಡೆಯಲಿದ್ದು, ಇದರಿಂದ ದೀಪಾವಳಿಯ ವಾರದ ಲಾಭ ಪ್ರಸಾರಕರಿಗೆ ಸಿಗಲಿದೆ.ಈ ಬಾರಿಯ ಐಪಿಎಲ್​ನ ಪಂದ್ಯದ ವೇಳೆ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಅಸ್ತು ಎಂದಿದೆ. ಅಂತೆಯೆ ಕ್ರಿಕೆಟಿಗರಿಗೆ ಕೊರೋನಾ ಸೋಂಕು ಹರಡದಂತೆ ಐಪಿಎಲ್​ ಆಡಳಿತ ಮಂಡಳಿ ಬಯೋ ಸೆಕ್ಯೂರ್ ಬಬಲ್​ ನಿಯಮವನ್ನು ಜಾರಿಗೆತಂದಿದೆ.ಇನ್ನೂ ಪಂದ್ಯದ ನಡುವೆ ವಿಕೆಟ್ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪುಗೂಡಿ ಸಂಭ್ರಮ ನಡೆಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್​ಗಳ ಹಾಗೂ ಕ್ಯಾಚ್ ಪಡೆದವರ ಮೈಮೇಲೆ ಏರಿ ಹೋಗುವುದು, ಬೌಲರ್​ಗಳ ಕೈ ತಟ್ಟಿ ಸಂಭ್ರಮಿಸುವುದು ಇಲ್ಲಿ ಕಂಡುಬರದು. ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಬೇಕಿದ್ದರೆ ಕಾಲಿಗೆ ಕಾಲನ್ನು ತಾಗಿಸಲೂಬಹುದು.

IPL 2020: RCB ಅಭ್ಯಾಸ ಶುರು: ಕೊಹ್ಲಿಯ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ವೈರಲ್2020 ಐಪಿಎಲ್ ಹೆಚ್ಚಿನ ಆಟಗಾರರಿಗೆ ಕೊನೆಯ ಟೂರ್ನಿ ಆಗಿರಲಿದೆ. ಅದರಲ್ಲೂ ಪ್ರಮುಖವಾಗಿ 40ರ ಹರೆಯದ ಕ್ರಿಸ್ ಗೇಲ್, ಇಮ್ರಾನ್ ತಾಹಿರ್, ಡೇಲ್ ಸ್ಟೈನ್, ಅಮಿತ್ ಮಿಶ್ರಾ ಸೇರಿದಂತೆ ಕೆಲವು ಆಟಗಾರರಿಗೆ ಇದೇ ಕೊನೆಯ ಐಪಿಎಲ್ ಆಗುವ ಸಾಧ್ಯತೆ ಇದೆ.
Published by: Vinay Bhat
First published: September 5, 2020, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories