IPL

  • associate partner
HOME » NEWS » Ipl » DREAM11 IPL 2020 MS DHONI SMASHES TOWERING SIXES IN CHENNAI SUPER KINGS PRACTICE SESSION SURESH RAINA VB

IPL 2020: ಅಭ್ಯಾಸದ ವೇಳೆ ಧೋನಿಯ ಸ್ಫೋಟಕ ಸಿಕ್ಸರ್ ಕಂಡು ಸುರೇಶ್ ರೈನಾ ಮಾಡಿದ್ದೇನು ನೋಡಿ

ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್​ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಅನೇಕರು ಧೋನಿ ಬ್ಯಾಟಿಂಗ್ ವೈಭವ ಕಂಡು ನಿವೃತ್ತಿ ಘೋಷಿಸಬಾರದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

news18-kannada
Updated:August 22, 2020, 9:07 AM IST
IPL 2020: ಅಭ್ಯಾಸದ ವೇಳೆ ಧೋನಿಯ ಸ್ಫೋಟಕ ಸಿಕ್ಸರ್ ಕಂಡು ಸುರೇಶ್ ರೈನಾ ಮಾಡಿದ್ದೇನು ನೋಡಿ
ಮಹೇಂದ್ರ ಸಿಂಗ್ ಧೋನಿ
  • Share this:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ನಿನ್ನೆ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಯುಎಇ ಫ್ಲೈಟ್ ಏರಿದ್ದು, ಅರಭ್ ರಾಷ್ಟ್ರಕ್ಕೆ ತಲುಪಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ಕ್ಕೆ ಆರಂಭವಾಗಲುದ್ದು, ನವೆಂಬರ್ 10ರ ವರೆಗೆ ನಡೆಯಲಿದೆ.

ಇದಕ್ಕೂ ಮುನ್ನ ಸಿಎಸ್‌ಕೆ ತಂಡದಲ್ಲಿ ಇರುವ ಬಹುತೇಕ ಎಲ್ಲ ಭಾರತೀಯ ಆಟಗಾರರು ಚಿದಂಬರಂ ಮೈದಾನದಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅಭ್ಯಾಸದ ವೇಳೆ ಮಹೇಂದ್ರ ಸಿಂಗ್​ ಧೋನಿ ಮೈದಾನದ ಎಲ್ಲ ಮೂಲೆ ಮೂಲೆಗಳಿಗೂ ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ದಾರೆ. ಇತ್ತ ಧೋನಿ ಸಿಕ್ಸರ್​ ಸಿಡಿಸುತ್ತಿದ್ದರೆ ಸುರೇಶ್​ ರೈನಾ ಶಿಳ್ಳೆ ಹೊಡೆದು ಭರ್ಜರಿ ಸಂಭ್ರಮಿಸಿದ್ದಾರೆ.

IPL​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ..!



ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್​ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಅನೇಕರು ಧೋನಿ ಬ್ಯಾಟಿಂಗ್ ವೈಭವ ಕಂಡು ನಿವೃತ್ತಿ ಘೋಷಿಸಬಾರದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಧೋನಿ ಅಭ್ಯಾಸದ ಕುರಿತು ಮಾತನಾಡಿರುವ ಸಿಎಸ್​ಕೆ ಸಿಇಒ ಕೆ.ಎಸ್​​​​.ವಿಶ್ವನಾಥನ್ ಸಾಯಿ, ಅಭ್ಯಾಸ ನಡೆಸುತ್ತಿದ್ದಾಗ ಮಹೇಂದ್ರ ಸಿಂಗ್​​ ಧೋನಿ ಉತ್ತಮವಾಗಿ ಸ್ಟ್ರೈಕ್ ರೊಟೇಟ್​​ ಮಾಡುತ್ತಿದ್ದರು. ಎಲ್ಲಾ ದಿಕ್ಕುಗಳಲ್ಲಿ ಸಿಕ್ಸರ್​​​​​​​​​​​​​​​​​​​​​​​​​​​ ಹೊಡೆಯುತ್ತಿದ್ದರು. ಧೋನಿ ಆತ್ಮವಿಶ್ವಾಸ, ಸಂತೋಷದಿಂದಲೇ ಕಾಲ ಕಳೆಯುತ್ತಿದ್ದರು. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರರಿಗೂ ಸಹ ಇನ್ಸ್​​​ಟಾಗ್ರಾಂ ಪೋಸ್ಟ್​ನಿಂದ ನಿವೃತ್ತಿಯ ಸುದ್ದಿ ತಿಳಿಯಿತು. ಅದು ತಂಡಕ್ಕೂ ಸರ್​​ಪ್ರೈಸ್​ ಆಗಿತ್ತು ಎಂದಿದ್ದಾರೆ.





ಜಾರ್ಖಂಡ್​ನ ರಾಂಚಿಯವರಾದ ಎಂಎಸ್ ಧೋನಿ ಅವರು 2014ರಲ್ಲೇ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಕೆಲವಾರು ವರ್ಷಗಳವರೆಗೆ ಆಡುವ ಮನಸಿನಲ್ಲಿದ್ದರು. ಆದರೆ, 2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಹಿಂದಡಿ ಇಟ್ಟರು. ಆಗಲೇ ಅವರು ನಿವೃತ್ತಿಯ ಯೋಚನೆಯಲ್ಲಿರುವ ಸುಳಿವು ಸಿಕ್ಕಿತ್ತು.

IPL 2020: RCB ತಂಡದ ನಾಯಕನನ್ನು ಬದಲಿಸ್ತಾರಾ?

ಸದ್ಯ ಧೋನಿ ಅವರು ಐಪಿಎಲ್ ಟೂರ್ನಿಯಲ್ಲಿ ಮಾತ್ರ ಆಡಲಿದ್ದಾರೆ. ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟರ್ ಕರ್ನಲ್ ಆಗಿರುವ ಧೋನಿ ಅವರು ಈ ಬಾರಿಯೂ ಸಿಎಸ್​ಕೆ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸುತ್ತಾರಾ ಎಂದು ಕಾದುನೋಡಬೇಕು.
Published by: Vinay Bhat
First published: August 22, 2020, 9:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories