IPL 2020: ಐಪಿಎಲ್​ನಲ್ಲಿ ಮಿಂಚು ಹರಿಸಲು ಬಂದ ಅಮೆರಿಕ ವೇಗಿ: ಯಾವ ತಂಡಕ್ಕೆ?; ಇಲ್ಲಿದೆ ಮಾಹಿತಿ

ಡ್ವೇನ್‌ ಬ್ರಾವೊ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಅಲಿ ಖಾನ್‌, ಬ್ರೆಂಡನ್‌ ಮೆಕಲಮ್ ಸೇರಿದಂತೆ ಹಲವು ಆಟಗಾರರು ವಿಮಾನದಲ್ಲಿರುವ ಫೋಟೊವನ್ನು ಶೇರ್‌ ಮಾಡಿದ್ದು, ಮುಂದಿನ ನಿಲ್ದಾಣ ದುಬೈ ಎಂಬ ಶೀರ್ಷಿಕೆಯನ್ನು ನೀಡಿದ್ದರು.

news18-kannada
Updated:September 13, 2020, 8:30 AM IST
IPL 2020: ಐಪಿಎಲ್​ನಲ್ಲಿ ಮಿಂಚು ಹರಿಸಲು ಬಂದ ಅಮೆರಿಕ ವೇಗಿ: ಯಾವ ತಂಡಕ್ಕೆ?; ಇಲ್ಲಿದೆ ಮಾಹಿತಿ
RCB vs KKR
  • Share this:
ಬಹುನಿರೀಕ್ಷಿತ 13ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲ ತಂಡಗಳು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದ್ದು, ಸೆಪ್ಟೆಂಬರ್ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಈ ನಡುವೆ ಐಪಿಎಲ್ ಆರಂಭಕ್ಕು ಮುನ್ನ ಕೆಲ ಆಟಗಾರರು ತಂಡದಿಂದ ಹೊರ ನಡೆದಿದ್ದಾರೆ. ಕೆಲವರು ಇಂಜುರಿಯಿಂದಾಗಿ ತಂಡದಿಂದ ಹಿಂದೆ ಸರಿದಿದ್ದಾರೆ. ಹೀಗಿರುವಾಗ ಐಪಿಎಲ್ ಟಿ-20 ಕ್ರಿಕೆಟ್​ನಲ್ಲಿ ಅಬ್ಬರಿಸಲು ಅಮೆರಿಕ ಕ್ರಿಕೆಟಿಗನೊಬ್ಬ ಸಿದ್ಧವಾಗಿದ್ದಾರೆ. ಯಾರವರು?, ಯಾವ ತಂಡಕ್ಕೆ?, ಇಲ್ಲಿದೆ ಮಾಹಿತಿ.

American Cricketer Ali Khan set to join Kolkata Knight Riders as Harry Gurney replacement
ಅಲಿ ಖಾನ್.


ಕ್ರೀಡಾ ಲೋಕಕ್ಕೆ ದೊಡ್ಡ ಆಘಾತ: ಸಿಡಿಲು ಬಡಿದು ಇಬ್ಬರು ಯುವ ಕ್ರಿಕೆಟಿಗರು ಸಾವು

ಗಾಯಕ್ಕೆ ತುತ್ತಾದ ಕಾರಣ ಐಪಿಎಲ್​ನಿಂದ ಹೊರಬಿದ್ದಿರುವ ಇಂಗ್ಲೆಂಡ್​ ವೇಗಿ ಹ್ಯಾರಿ ಗರ್ನೆ ಬದಲಿಗೆ ಅಮೆರಿಕಾ ತಂಡದ ವೇಗದ ಬೌಲರ್​ ಅಲಿ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್​​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿಯೇ ಮೊದಲ ಸಲ ಅಮೆರಿಕ ಆಟಗಾರನೊಬ್ಬ ಕಣಕ್ಕಿಳಿಯಲಿದ್ದಾರೆ.

ಅಲಿ ಖಾನ್‌ ಇತ್ತೀಚೆಗೆ ಮುಕ್ತಾಯವಾಗಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್ ತಂಡದ ಪರ ಆಡಿದ್ದರು. ಕೀರನ್‌ ಪೊಲಾರ್ಡ್ ನಾಯಕತ್ವದ ಟಿಕೆಆರ್‌ ತಂಡ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಎಂಟು ಪಂದ್ಯಗಳಿಂದ ಅಮೆರಿಕನ್‌ ವೇಗಿ ಎಂಟು ವಿಕೆಟ್‌ಗಳನ್ನು ಪಡೆದಿದ್ದರು.

ಟ್ರಿನ್​ಬಾಗೊ ತಂಡ ಕೂಡ ಬಾಲಿವುಡ್​ ನಟ ಶಾರುಖ್​ ಖಾನ್​ ಒಡೆತನದ್ದಾಗಿದೆ. ಇಲ್ಲಿಂದಲೇ ಕೆಕೆಆರ್​ಗೆ ಸೇರಿಕೊಳ್ಳಲು ಅವರಿಗೆ ಸುಲಭ ದಾರಿ ಎಂದು ಹೇಳಲಾಗಿದೆ. ಅಲಿ ಖಾನ್​​ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್​ ಈ ಹಿಂದೆಯೇ ಒಂದು ಸಲ ಪ್ರಯತ್ನ ನಡೆಸಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.

ಅಲ್ಲದೆ 2018ರ ಗ್ಲೋಬಲ್ ಟಿ-20 ಕೆನಡಾ ಟೂರ್ನಿಯಲ್ಲಿ ಖಾನ್ ಎಲ್ಲರ ಗಮನ ಸೆಳೆದಿದ್ದರು. ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಮೂಲಕ ಸಿಪಿಎಲ್‌ಗೆ ಪ್ರವೇಶಿಸಿದ್ದ ಖಾನ್ 2018ರಲ್ಲಿ ಗಯಾನ ಅಮಝಾನ್ ವಾರಿಯರ್ಸ್ ಪರ 12 ಪಂದ್ಯಗಳಲ್ಲಿ 16 ವಿಕೆಟ್‌ಗಳ ಗೊಂಚಲು ಪಡೆದಿದ್ದರು.Prithvi Shaw: ಡೇಟಿಂಗ್​ನಲ್ಲಿ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ: ಹುಡುಗಿ ಯಾರು ಕೇಳಿದ್ರೆ ಶಾಕ್ ಆಗ್ತೀರಾ!

ಡ್ವೇನ್‌ ಬ್ರಾವೊ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಅಲಿ ಖಾನ್‌, ಬ್ರೆಂಡನ್‌ ಮೆಕಲಮ್ ಸೇರಿದಂತೆ ಹಲವು ಆಟಗಾರರು ವಿಮಾನದಲ್ಲಿರುವ ಫೋಟೊವನ್ನು ಶೇರ್‌ ಮಾಡಿದ್ದು, "ಮುಂದಿನ ನಿಲ್ದಾಣ ದುಬೈ" ಎಂಬ ಶೀರ್ಷಿಕೆಯನ್ನು ನೀಡಿದ್ದರು.

ದಿನೇಶ್ ಕಾರ್ತಿಕ್​ ಮುನ್ನಡೆಸುವ ಕೆಕೆಆರ್​ ತಂಡ ಸದ್ಯ ಅಲಿ ಖಾನ್​ ಜೊತೆಗೆ ಇಯಾನ್ ಮಾರ್ಗನ್​, ಪ್ಯಾಟ್​ ಕಮ್ಮಿನ್ಸ್​, ರಾಹುಲ್​ ತ್ರಿಪಾಠಿ, ವರುಣ್ ಚಕ್ರವರ್ತಿ, ಎಂ ಸಿದ್ಧಾರ್ಥ್​, ಕ್ರಿಸ್​ ಗ್ರೀನ್​, ಟಾಮ್​ ಬಾಂಟಮ್​ರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಂತಾಗಿದೆ.
Published by: Vinay Bhat
First published: September 13, 2020, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading