HOME » NEWS » Ipl » DINESH KARTHIK APPEALS IN FRONT OF SHIKHAR DHAWAN ZP

IPL 2021 Video: ಮೈದಾನದಲ್ಲಿ ಹೈಡ್ರಾಮಾ: ಬಿದ್ದು ಬಿದ್ದು ನಕ್ಕ ವೀಕ್ಷಕರು..!

ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ನೀಡಿದ 155 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 16.3 ಓವರ್​ನಲ್ಲಿ ಗುರಿ ಮುಟ್ಟುವ ಈ ಸೀಸನ್​ 5ನೇ ಗೆಲುವು ದಾಖಲಿಸಿತು.

news18-kannada
Updated:April 30, 2021, 5:06 PM IST
IPL 2021 Video: ಮೈದಾನದಲ್ಲಿ ಹೈಡ್ರಾಮಾ: ಬಿದ್ದು ಬಿದ್ದು ನಕ್ಕ ವೀಕ್ಷಕರು..!
Dhawan-Karthik
  • Share this:
ಕ್ರಿಕೆಟ್ ಮೈದಾನ ಆಟಗಾರರ ನಡುವಣ ಹಾಸ್ಯ ಸನ್ನಿವೇಶಗಳಿಗೆ ಹಲವು ಬಾರಿ ಸಾಕ್ಷಿಯಾಗಿವೆ. ಅಂತಹದ್ದೊಂದು ಸನ್ನಿವೇಶ ಇಂಡಿಯನ್ ಪ್ರೀಮಿಯರ್ ಲೀಗ್​ನ 25ನೇ ಪಂದ್ಯದಲ್ಲೂ ಕಂಡು ಬಂತು. ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 155 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿತ್ತು. ಒಂದೆಡೆ ಪೃಥ್ವಿ ಶಾ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಶಿಖರ್ ಧವನ್ ಎಚ್ಚರಿಕೆಯ ಆಟವಾಡುತ್ತಿದ್ದರು.

ಇತ್ತ ವಿಕೆಟ್ ಪಡೆಯಲು ಕೆಕೆಆರ್​ ಬೌಲರುಗಳ ಹರಸಾಹಸಪಡುತ್ತಿದ್ದರು. ಇದೇ ವೇಳೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಬೌಲರುಗಳನ್ನು ಹುರಿದುಂಬಿಸುತ್ತಿದ್ದರು. ಅದರಂತೆ 12ನೇ ಓವರ್​ನಲ್ಲಿ ಶಿಖರ್ ಧವನ್ ಕ್ರೀಸ್ ಕಚ್ಚಿ ಆಡುತ್ತಿದ್ದರು. ಈ ವೇಳೆ ಧವನ್ ಮಿಸ್ ಮಾಡಿದ ಚೆಂಡನ್ನು ಹಿಡಿದು ಕಾರ್ತಿಕ್ ಸ್ಟಂಪ್ ಔಟ್ ಮಾಡಿದರು. ಆದರೆ ಶಿಖರ್ ಧವನ್ ಕ್ರೀಸ್​ ಒಳಗಿದ್ದರು.

ಹೀಗಾಗಿ ಸ್ವಂಪ್ ಔಟ್ ಮಾಡುತ್ತಿದ್ದಂತೆ ಕಾರ್ತಿಕ್ ಅಂಪೈರ್​ಗೆ ಮನವಿ ಸಲ್ಲಿಸುವ ಬದಲು ಶಿಖರ್ ಧವನ್ ಅವರಲ್ಲಿ ಜೋರಾಗಿ ಅಪೀಲ್ ಮಾಡಿದ್ದರು. ಕಾರ್ತಿಕ್ ಅವರ ಈ ಕಿರುಚಾಟಕ್ಕೆ ಬೆದರಿ ಬಿದ್ದಂತೆ ಶಿಖರ್ ಧವನ್ ನಟಿಸಿದರು. ಅತ್ತ ಶಿಖರ್ ಅವರ ಫನ್ನಿ ರಿಯಾಕ್ಷನ್ ನೋಡಿದ ದಿನೇಶ್ ಕಾರ್ತಿಕ್ ಮುಖದಲ್ಲಿ ನಗು...ಇತ್ತ ಪಂದ್ಯ ವೀಕ್ಷಿಸುತ್ತಿದ್ದ ಆಟಗಾರರು ಹಾಗೂ ಕಮೆಂಟೇಟರ್​ಗಳೂ ಕಂಟ್ರೋಲ್ ಬಿದ್ದು ಬಿದ್ದು ನಕ್ಕರು.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ನೀಡಿದ 155 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 16.3 ಓವರ್​ನಲ್ಲಿ ಗುರಿ ಮುಟ್ಟುವ ಈ ಸೀಸನ್​ 5ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
Published by: zahir
First published: April 30, 2021, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories