Dhoni- ಹೆಂಡತಿ ಕೋಪಕ್ಕೂ ಬಗ್ಗದ ಅಭಿಮಾನ; 45 ದಿನದಿಂದ ಧೋನಿಗಾಗಿ ಕಾದಿರುವ ಫ್ಯಾನ್

Die Hard Fan of MS Dhoni- ಧೋನಿ ಇಲ್ಲವೆಂದರೂ ಕೇಳದೇ ಅವರು ಬರುವವರೆಗೂ ಇಲ್ಲಿಯೇ ಇರುತ್ತೇನೆಂದು ರಾಂಚಿಯಲ್ಲೇ ಬೀಡುಬಿಟ್ಟಿರುವ ನೆರೆಯ ರಾಜ್ಯದ ಆದೇಶ್ ಸೋನಿ ಎಂಬ ವ್ಯಕ್ತಿಯ ಅಭಿಮಾನದ ಕಥೆ ಇದು.

ಎಂಎಸ್ ಧೋನಿ

ಎಂಎಸ್ ಧೋನಿ

 • Cricketnext
 • Last Updated :
 • Share this:
  ರಾಂಚಿ, ಸೆ. 30: ಟೀಮ್ ಇಂಡಿಯಾದ ನಾಯಕತ್ವಕ್ಕೆ ಹೊಸ ಆಯಾಮವನ್ನೇ ಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ ಅಂದರೆ ಅದೆಷ್ಟೋ ಮಂದಿಗೆ ಹುಚ್ಚು ಅಭಿನಾನ. ಸಿನಿಮಾದ ದೊಡ್ಡ ಹೀರೋಗಳಿಗೆ ಇರುವಂಥ ಅಭಿಮಾನ. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ಅವರ ಜನಪ್ರಿಯತೆ ತಗ್ಗಿಲ್ಲ. ಅವರ ಮೇಲಿನ ಅಭಿಮಾನ, ಪ್ರೀತಿ ಕಡಿಮೆ ಆಗಿಲ್ಲ. ಧೋನಿಯ ಕಟ್ಟರ್ ಅಭಿಮಾನಿಗಳು ದೇಶಾದ್ಯಂತ ಈಗಲೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅಂತೆಯೇ, ಈಗಲೂ ಜಾಹೀರಾತುಗಳು ಧೋನಿಯ ಬೆಂಬಿಡದೇ ಇರುವುದು ಇದೇ ಕಾರಣಕ್ಕೆ ಇರಬಹುದು. ಇದಕ್ಕೆ ಒಂದು ಪಕ್ಕಾ ನಿದರ್ಶನ ಆದೇಶ್ ಸೋನಿ ಎಂಬ ಅಪ್ಪಟ ಅಭಿಮಾನಿಯದ್ದು. ಛತ್ತೀಸ್​ಗಡ ರಾಜ್ದ ಆದೇಶ್ ಸೋನಿ ಅವರು ಧೋನಿಯನ್ನ ನೋಡಿಕೊಂಡೇ ಬರಬೇಕೆಂದು ತೀರ್ಮಾನಿಸಿ ನೆರೆಯ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಒಂದೂವರೆ ತಿಂಗಳಿಂದ ಬೀಡುಬಿಟ್ಟಿದ್ಧಾರಂತೆ.

  ಆದೇಶ್ ಅವರು ಧೋನಿ ಭೇಟಿ ಮಾಡಲು ರಾಂಚಿಗೆ ಹೋದಾಗ ಊರಲ್ಲಿ ಇಲ್ಲದಿರುವುದು ಗೊತ್ತಾಗಿದೆ. ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿ ಶುರುವಾಗುವ ಮುನ್ನವೇ ಧೋನಿ ಇನ್ನೂ ರಾಂಚಿಯಲ್ಲೇ ಇರುತ್ತಾರೆಂದು ಭಾವಿಸಿ ಆದೇಶ್ ರಾಂಚಿಗೆ ಹೋಗಿರುತ್ತಾರೆ. ಆದರೆ, ಧೋನಿ ಊರಲಿಲ್ಲವೆಂದು ಗೊತ್ತಾದ ಬಳಿಕ ಆದೇಶ್ ವಾಪಸ್ ತಮ್ಮ ಊರಾದ ರಾಯಪುರಕ್ಕೆ ಹೋಗದೇ ರಾಂಚಿಯಲ್ಲೇ ಉಳಿದುಕೊಳ್ಳಲು ದೃಢ ನಿಶ್ಚಯ ಮಾಡುತ್ತಾರೆ. ಈತನ ಹೆಂಡತಿಗೆ ವಿಷಯ ತಿಳಿದು ಫೋನ್​ನಲ್ಲೇ ಜಗಳ ಮಾಡಿದರೂ ಈತ ಬಗ್ಗದೇ, ಧೋನಿ ಬರುವವರೆಗೂ ರಾಂಚಿ ನಗರದಲ್ಲೇ ಇರುವುದಾಗಿ ಸಂಕಲ್ಪ ತೊಟ್ಟಿದ್ಧಾರೆ. ಈತ ವರ್ತನೆ ಕಂಡು ಇವನ ಪತ್ನಿ ಮೂರು ನಾಲ್ಕು ದಿನ ಈತನೊಂದಿಗೆ ಮಾತನ್ನೇ ಬಿಟ್ಟಿದ್ದಳಂತೆ. ಆದರೆ, ಅಪ್ಪಟ ಧೋನಿ ಅಭಿಮಾನಿಯಾದ ಈತ ತನ್ನ ಹೆಂಡತಿಗೆ ತನ್ನ ಅಭಿಮಾನದ ಅರಿವು ಮೂಡಿಸಿ ಒಪ್ಪಿಸಿದ್ದಾರಂತೆ.

  ಆದೇಶ್ ಸೋನಿ ನಿಜಕ್ಕೂ ಧೋನಿಯ ಅಪ್ಪಟ ಅಭಿಮಾನಿ ಮತ್ತು ಆರಾಧಕ. ತನ್ನ ಎದೆಯಲ್ಲಿ ಧೋನಿಯ ಟ್ಯಾಟೂ ಹಾಕಿಸಿಕೊಂಡಿದ್ಧಾರೆ. ಧೋನಿಯ ಇಡೀ ಜೀವನವೇ ಆದೇಶ್ ಅವರಿಗೆ ಪ್ರೇರಣೆಯಾಗಿದೆಯಂತೆ. ಮಹೇಂದ್ರ ಸಿಂಗ್ ಧೋನಿ ಬಗ್ಗೆ ಇವರಿಗೆ ಇಷ್ಟು ಅಪಾರ ಅಭಿಮಾನ ಹುಟ್ಟಲು ಕಾರಣ, ಧೋನಿ ಸಣ್ಣ ಪಟ್ಟಣದಿಂದ ಬೆಳೆದು ಬಂದು ತನ್ನ ಪ್ರತಿಭೆ ಮಾತ್ರದಿಂದಲೇ ವಿಶ್ವಖ್ಯಾತಿ ಗಳಿಸಿದ ಪರಿಯಂತೆ. ಧೋನಿಯಂತೆ ತಾನೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿರುವುದಾಗಿ ಆದೇಶ್ ಸೋನಿ ಹೇಳುತ್ತಾರೆ.

  ಇದನ್ನೂ ಓದಿ: MS Dhoni- ಎಂಎಸ್ ಧೋನಿಗೆ ಇದೇ ಕೊನೆಯ ಐಪಿಎಲ್ ಟೂರ್ನಿಯಾ? ಮಾಜಿ ಕ್ರಿಕೆಟಿಗರೊಬ್ಬರ ಅನುಮಾನ

  ಛತ್ತೀಸ್​ಗಡ ರಾಜಧಾನಿ ರಾಯಪುರ್​ನವರಾದ ಆದೇಶ್ ಸೋನಿ ಅವರ ಪತ್ನಿ ಕೋಪಗೊಳ್ಳಲು ಕಾರಣವಿದೆ. ಪತಿ ಯಾರನ್ನಾದರೂ ನೋಡಬೇಕೆಂದು ತಿಂಗಳುಗಟ್ಟಲೆ ಮನೆ ಬಿಟ್ಟು ಹೋಗುವುದನ್ನ ಯಾವ ಪತ್ನಿಯಾದರೂ ಸಹಿಸಿಯಾಳೇ? ಆದರೆ, ಒಂದೆರಡು ದಿನ ಕೋಪಗೊಂಡು ಬಳಿಕ ಗಂಡನ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ಸುಮ್ಮನಾಗಿರುವ ಈ ಪತ್ನಿಯನ್ನ ಪಡೆದ ಆದೇಶ್ ಸೋನಿಯದ್ದು ಅದೃಷ್ಟವೇ.

  ಅಂದಹಾಗೆ, ಮಹೇಂದ್ರ ಸಿಂಗ್ ಧೋನಿ ಅವರು ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಅದಾದ ಬಳಿಕ ಕೂಡಲೇ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗುತ್ತದೆ. ಎಂ ಎಸ್ ಧೋನಿ ಅವರು ಟಿ20 ವಿಶ್ವಕಪ್​ಗೆ ಭಾರತ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ಧಾರೆ. ಆ ಟಿ20 ವಿಶ್ವಕಪ್ ಮುಗಿಯುವುದು ನವೆಂಬರ್ ಎರಡನೇ ವಾರಕ್ಕೆ. ಅದಾದ ಬಳಿಕವಷ್ಟೇ ಧೋನಿ ಭಾರತಕ್ಕೆ ವಾಪಸ್ಸಾಗುವುದು. ಅಂದರೆ, ಈಗಾಗಲೇ ಒಂದೂವರೆ ತಿಂಗಳಿಂದ ರಾಂಚಿಯಲ್ಲಿ ಕಾದು ಕೂತಿರುವ ಅವರ ಅಭಿಮಾನಿ ಆದೇಶ್ ಸೋನಿ ಇನ್ನೂ ಕನಿಷ್ಠ ಒಂದೂವರೆ-ಎರಡು ತಿಂಗಳು ಕಾಯಬೇಕಾಗಬಹುದು.
  Published by:Vijayasarthy SN
  First published: