IPL

  • associate partner
HOME » NEWS » Ipl » DEVDUTT PADIKKAL RECALLS AB DE VILLIERS SPECIAL TEXT MESSAGE DURING IPL 2020 ZP

AB de Villiers: ಪಡಿಕ್ಕಲ್‌ಗೆ ಎಬಿಡಿ ಕಡೆಯಿಂದ ಬಂದಿತ್ತು ವಿಶೇಷ ಸಂದೇಶ..!

Devdutt Padikkal: ಈ ಒಂದು ಸಂದೇಶ ನನಗೆ ನಿಜಕ್ಕೂ ವಿಶೇಷವಾಗಿತ್ತು. ಏಕೆಂದರೆ ಅದು ಬಂದಿರುವುದು ಎಬಿಡಿ ಕಡೆಯಿಂದ. ನನಗೆ ಸಿಕ್ಕಂತಹ ವಿಶೇಷ ಗೌರವ ಅದು. ಅವರು ಬ್ಯಾಟಿಂಗ್ ಮಾಡುವುದನ್ನು ನಾನು ನಿಜಕ್ಕೂ ಎಂಜಾಯ್ ಮಾಡುತ್ತೇನೆ.

news18-kannada
Updated:November 15, 2020, 7:10 PM IST
AB de Villiers: ಪಡಿಕ್ಕಲ್‌ಗೆ ಎಬಿಡಿ ಕಡೆಯಿಂದ ಬಂದಿತ್ತು ವಿಶೇಷ ಸಂದೇಶ..!
AB de Villiers
  • Share this:
ಐಪಿಎಲ್​ 13ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಅದ್ಭುತವಾಗಿ ಬ್ಯಾಟ್ ಬೀಸಿದ್ದ ದೇವದತ್ ಪಡಿಕ್ಕಲ್ ಟಾಪ್ ರನ್​ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಅಷ್ಟೇ ಅಲ್ಲದೆ ತಮ್ಮ ಅತ್ಯುತ್ತಮ ಬ್ಯಾಟಿಂಗ್​ ಮೂಲಕ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿ ರನ್​ ಸರದಾರರಾದ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್​ಗಿಂತ ಅತೀ ಹೆಚ್ಚು ರನ್​ ಕಲೆಹಾಕಿ ಹೊಸ ಆಶಾಕಿರಣವಾಗಿ ಪ್ರಜ್ವಲಿಸಿದರು.

ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಡಿಕ್ಕಲ್ 45 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ಖುದ್ದು ಎಬಿ ಡಿವಿಲಿಯರ್ಸ್ ಯುವ ಆಟಗಾರನಿಗೆ ಮೆಚ್ಚುಗೆಯ ಸಂದೇಶ ಕಳಹಿಸಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪಡಿಕ್ಕಲ್, ನನಗೆ ಈಗಲೂ ನೆನಪಿದೆ. ನಾವು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿಸಿ ಮರಳುತ್ತಿದ್ದೆವು. ಈ ಸಂದರ್ಭದಲ್ಲಿ ನನಗೆ ಎಬಿಡಿ ಒಂದು ಸಂದೇಶ ಕಳುಹಿಸಿದ್ದರು. ನೀನು ತುಂಬಾ ಚೆನ್ನಾಗಿ ಆಡುತ್ತಿದ್ದೀಯಾ. ಇದನ್ನು ಮುಂದುವರೆಸು. ನಿನ್ನ ವಲಯದೊಳಗಿದ್ದು, ಬ್ಯಾಟಿಂಗ್​ನ್ನು ಎಂಜಾಯ್ ಮಾಡು ಎಂದು ಬರೆದಿದ್ದರು.

ಈ ಒಂದು ಸಂದೇಶ ನನಗೆ ನಿಜಕ್ಕೂ ವಿಶೇಷವಾಗಿತ್ತು. ಏಕೆಂದರೆ ಅದು ಬಂದಿರುವುದು ಎಬಿಡಿ ಕಡೆಯಿಂದ. ನನಗೆ ಸಿಕ್ಕಂತಹ ವಿಶೇಷ ಗೌರವ ಅದು. ಅವರು ಬ್ಯಾಟಿಂಗ್ ಮಾಡುವುದನ್ನು ನಾನು ನಿಜಕ್ಕೂ ಎಂಜಾಯ್ ಮಾಡುತ್ತೇನೆ. ಅಲ್ಲದೆ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ಕೂಡ ಸುಲಭ. ಅವರು ಒಂದು ಕಡೆ ಬೌಲರುಗಳನ್ನು ದಂಡಿಸುತ್ತಾ ಇರುತ್ತಾರೆ. ಈ ಆಟವನ್ನು ನೋಡುವುದು ರಸದೌತಣ ಎಂದು ಪಡಿಕ್ಕಲ್ ತಿಳಿಸಿದರು.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 15, 2020, 7:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading