ಅದೆಷ್ಟೋ ಪ್ರತಿಭಾನ್ವಿತ ಕ್ರಿಕೆಟಿಗರು ಕೇವಲ ಒಂದು ಅವಕಾಶಕ್ಕಾಗಿ ಕಾದುಕುಳಿತಿರುತ್ತಾರೆ. ಆ ಪೈಕಿ ಕೆಲವರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಇನ್ನೂ ಕೆಲವರಿಗೆ ಅದೃಷ್ಟ ಕೈಹಿಡಿದಿರುವುದಿಲ್ಲ. ಆದರೆ, ಸತತ ಪ್ರಯತ್ನ ಒಂದಲ್ಲಾ ಒಂದುದಿನ ನಮ್ಮನ್ನು ಇಡೀ ವಿಶ್ವವೇ ಗುರುತಿಸುವಂತೆ ಮಾಡುತ್ತೆ ಎಂಬುದಕ್ಕೆ ಕರ್ನಾಟಕದ ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಸಾಕ್ಷಿ. ಹೌದು, ಪಡಿಕ್ಕಲ್ ಕಳೆದ ವರ್ಷವೇ ಆರ್ಸಿಬಿ ತಂಡದಲ್ಲಿ ಇದ್ದರು. ಆದರೆ, ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಹಾಗಂತ ಪಡಿಕ್ಕಲ್ ಸುಮ್ಮನೆ ಕೂರಲಿಲ್ಲ. ತಮ್ಮಲ್ಲಿರುವ ಪ್ರತಿಭೆಯನ್ನು ರಣಜಿ ಕ್ರಿಕೆಟ್, ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಹೊರಹಾಕಿ ದಾಖಲೆ ಬರೆದರು. ಇದುವೇ ಇಂದು ಪಡಿಕ್ಕಲ್ ಅವರನ್ನು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಸಿದೆ. ಆಡಿದ ಮೊದಲ ಪಂದ್ಯದಲ್ಲೇ ದಾಖಲೆ ಬರೆಯುವಂತೆ ಮಾಡಿದೆ.
RR vs CSK Dream11: ಇಂದು ರಾಜಸ್ಥಾನ-ಚೆನ್ನೈ ನಡುವೆ ಹಣಾಹಣಿ; ಡ್ರೀಮ್11ನಲ್ಲಿ ಇಂದು ಮಾಡಬೇಕಾಗಿದ್ದೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಲು ಪ್ರಮುಖ ಪಾತ್ರವಹಿಸಿದ್ದು ದೇವದತ್ ಪಡಿಕ್ಕಲ್. ಸದ್ಯ ಇವರು ಕನ್ನಡಿಗರಲ್ಲಿ ಕನ್ನಡದಲ್ಲೇ ಮಾತನಾಡಿದ ವಿಶೇಷ ಮನವಿ ಮಾಡಿದ್ದಾರೆ. 'ಎಲ್ಲರೂ ಆರ್ಸಿಬಿಗೆ ಸಪೋರ್ಟ್ ಮಾಡ್ತಾ ಇರಿ. ತುಂಬಾ ಚೆನ್ನಾಗಿತ್ತು ಫಸ್ಟ್ ಮ್ಯಾಚ್. ಹೀಗೇ ಆಡ್ತಾ ಇರ್ಬಹುದು ಅನ್ನೋ ಭರವಸೆ ಇದೆ. ನೀವು ಸಪೋರ್ಟ್ ಮಾಡ್ತಾ ಇರಿ, ನಾವು ಹೀಗೇ ಆಡ್ತಾ ಇರ್ತೀವಿ' ಎಂದು ಪಡಿಕ್ಕಲ್ ಕನ್ನಡದಲ್ಲೇ ಹೇಳಿದ್ದಾರೆ.
ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು ಭರ್ಜರಿ ವೈರಲ್ ಆಗುತ್ತಿದೆ. ಅಲ್ಲದೆ ಪಡಿಕ್ಕಲ್ ಅವರಿಗೆ ಕನ್ನಡ ಬರೋದಿಲ್ಲ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಇದಕ್ಕೆಲ್ಲ ಮೊದಲ ಪಂದ್ಯದಲ್ಲೇ ಖಡಕ್ ಉತ್ತರ ನೀಡಿದ್ದಾರೆ.
Umesh Yadav: 2 ರನ್ನಿಂದ ಹಾಫ್ ಸೆಂಚುರಿ ಮಿಸ್; ಹಿಗ್ಗಾ-ಮುಗ್ಗ ಟ್ರೋಲ್ ಆದ ಉಮೇಶ್ ಯಾದವ್
ಪಡಿಕ್ಕಲ್ ಕನ್ನಡದಲ್ಲಿ ಮಾತನಾಡಿದ ವಿಡಿಯೋಗೆ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ಯುವರಾಜ್ ಸಿಂಗ್ ಆಟವನ್ನು ನೆನಪಿಸಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಆರ್ಸಿಬಿ ಟೂರ್ನಿಯನ್ನು ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
20 ವರ್ಷದ ಯುವ ಆರ್ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್(42 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾದರು.
ಪಡಿಕ್ಕಲ್ 2019-20 ರ ವಿಜಯ್ ಹಜಾರೆ ಮತ್ತು ಸೈಯದ್ ಮುಸ್ತಾಕ್ ಆಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಹೊಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ