Harshal Patel- ಪಡಿಕ್ಕಲ್ ಕೈಚೆಲ್ಲಿದ ಕ್ಯಾಚ್; ಹರ್ಷಲ್ ಪಟೇಲ್ ಕೈತಪ್ಪಿದ ಐತಿಹಾಸಿಕ ದಾಖಲೆ

IPL 2021- ಡ್ವೇನ್ ಬ್ರಾವೋ ಅವರು ಒಂದು ಸೀಸನ್​ನಲ್ಲಿ ಗಳಿಸಿದ್ದ 32 ವಿಕೆಟ್​ಗಳ ಸಾಧನೆಯನ್ನ ಅಳಿಸಿಹಾಕುವ ಐತಿಹಾಸಿಕ ಅವಕಾಶ ಹರ್ಷಲ್ ಪಟೇಲ್ ಕೈತಪ್ಪಿತು.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

  • Share this:
    ಶಾರ್ಜಾ: ಈ ಬಾರಿ ಐಪಿಎಲ್​ನಿಂದ ಆರ್​ಸಿಬಿ ನಿರ್ಗಮಿಸಿದರೂ (RCB out of IPL 2021) ಅದರ ಬೌಲರ್ ಹರ್ಷಲ್ ಪಟೇಲ್ (Harshal Patel) ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಹರ್ಷಲ್ 2 ವಿಕೆಟ್ ಪಡೆದರು. ಈ ಸೀಸನ್​ನಲ್ಲಿ ಅವರು ಪಡೆದ ವಿಕೆಟ್​ಗಳ ಸಂಖ್ಯೆ 32ಕ್ಕೆ ಏರಿದೆ. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಅವರು ಬಹಳಷ್ಟು ಮುಂದಿದ್ದಾರೆ. ಆದರೆ, ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನ ಸ್ಥಾಪಿಸುವುದರಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದಾರೆ. 2013-14ರ ಐಪಿಎಲ್ ಸೀಸನ್​ನಲ್ಲಿ ಡ್ವೇನ್ ಬ್ರಾವೋ (Dwayne Bravo) 32 ವಿಕೆಟ್ ಪಡೆದಿದ್ದರು. ಹರ್ಷಲ್ ಪಟೇಲ್ ಈಗ ಬ್ರಾವೋ ದಾಖಲೆಯನ್ನ ಸರಿಗಟ್ಟಿದ್ದಾರೆ.

    ಆದರೆ, 17ನೇ ಓವರ್​ನ ಮೊದಲ ಎಸೆತದಲ್ಲೇ ಹರ್ಷಲ್ ಪಟೇಲ್ ಅವರು ಸುನೀಲ್ ನರೈನ್ ವಿಕೆಟ್ ಪಡೆಯಬೇಕಿತ್ತು. ಸುನೀಲ್ ಹೊಡೆದ ಚೆಂಡು ಮಿಡ್ ಆನ್​ನತ್ತ ಮೇಲೆ ಹೋಯಿತು. ಮಿಡ್ ವಿಕೆಟ್​ನಲ್ಲಿದ್ದ ದೇವದತ್ ಪಡಿಕ್ಕಲ್ ಓಡಿ ಬಂದು ಹಿಡಿಯಲು ಪ್ರಯತ್ನಿಸಿದರೂ ಅದರು ಕೈತಪ್ಪಿ ಬಿದ್ದಿತು. ದೇವದತ್ ಪಡಿಕ್ಕಲ್ ಆ ವಿಕೆಟ್ ಕಿತ್ತಿದ್ದರೆ ಹರ್ಷಲ್ ಪಟೇಲ್ ಹೊಸ ಇತಿಹಾಸ ಬರೆಯುತ್ತಿದ್ದರು. ಈ ಸೀಸನ್​ನಲ್ಲಿ ಅವರು ಪಟ್ಟ ಶ್ರಮಕ್ಕೆ ತಕ್ಕ ಫಲ ಸಿಗುತ್ತಿತ್ತು.

    ಆದರೆ, ಹರ್ಷಲ್ ಪಟೇಲ್ ಅವರು ಈ ಸೀಸನ್​ನಲ್ಲಿ ಪರ್ಪಲ್ ಕ್ಯಾಪ್ ಪಡೆಯುವ ಸಾಧ್ಯತೆ ಬಹಳ ದಟ್ಟವಾಗಿದೆ. ಇದರ ಜೊತೆಗೆ ಇನ್ನೂ ಹಲವು ದಾಖಲೆಗಳನ್ನ ಹರ್ಷಲ್ ಪಟೇಲ್ ಬರೆದಿದ್ದಾರೆ.

    ಇದನ್ನೂ ಓದಿ: KL Rahul- ಕೆಎಲ್ ರಾಹುಲ್​​ರ ಈ 3 ದಾಖಲೆ ಮುರಿಯಲು ಆಗುತ್ತಾ? ಉಳಿದಿರುವುದು ಎರಡೇ ಪಂದ್ಯ

    32 ವಿಕೆಟ್ ಪಡೆದ ಹರ್ಷಲ್ ಪಟೇಲ್ ಅವರ ದಾಖಲೆಗಳ ಪಟ್ಟಿ:

    1) ಐಪಿಎಲ್ 2021 ಸೀಸನ್​ನಲ್ಲಿ ಈವರೆಗೆ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಮೊದಲಿಗರು.

    2) ಐಪಿಎಲ್ ಇತಿಹಾಸದಲ್ಲೇ ಯಾವುದೇ ಸೀಸನ್​ನಲ್ಲಿ ಆರ್​ಸಿಬಿ ಬೌಲರ್ ಗಳಿಸಿದ ಅತಿ ಹೆಚ್ಚು ವಿಕೆಟ್​ಗಳಿವು. ಇದಕ್ಕೆ ಮುನ್ನ ಯುಜವೇಂದ್ರ ಚಹಲ್ 23 ವಿಕೆಟ್ ಪಡೆದಿದ್ದೇ ಗರಿಷ್ಠ.

    3) ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬ್ರಾವೋ ದಾಖಲೆಯನ್ನ ಸರಿಗಟ್ಟಿದ್ದಾರೆ ಹರ್ಷಲ್ ಪಟೇಲ್.

    4) ಒಂದು ಐಪಿಎಲ್ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಅವರು. ಈ ಮೊದಲು ಜಸ್​ಪ್ರೀತ್ ಬುಮ್ರಾ ಕಳೆದ ಸೀಸನ್​ನಲ್ಲಿ 27 ವಿಕೆಟ್ ಪಡೆದದ್ದು ದಾಖಲೆಯಾಗಿತ್ತು.

    ಇದನ್ನೂ ಓದಿ: KKR beat RCB- ಸುನೀಲ್ ಆದ್ಭುತ ಆಟ; ಇಲಿಮಿನೇಟರ್​ನಲ್ಲಿ ಕೆಕೆಆರ್​ಗೆ ಗೆಲುವು; ಆರ್​ಸಿಬಿ ಔಟ್

    ಇವತ್ತಿನ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ ಬೌಲ್ ಮಾಡಿ 19 ರನ್ನಿತ್ತು 2 ವಿಕೆಟ್ ಪಡೆದರು. ಅತ್ಯುತ್ತಮ ಫಾರ್ಮ್​ನಲ್ಲಿದ್ದ ಶುಬ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಅವರಿಬ್ಬರನ್ನೂ ಪಟೇಲ್ ಔಟ್ ಮಾಡಿದರು. ಹರ್ಷಲ್ ಪಟೇಲ್ ಜೊತೆಗೆ ಯುಜವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ತಲಾ ಎರಡು ವಿಕೆಟ್ ಪಡೆದು ಆರ್​ಸಿಬಿ ತಂಡವನ್ನ ಮತ್ತೆ ಗೆಲುವಿನ ಹಾದಿಗೆ ತಂದಿದ್ದರು. ಆದರೆ, 18ನೇ ಓವರ್ ಬಳಿಕ ಆರ್​ಸಿಬಿ ಬಳಿ ಇನ್​-ಫಾರ್ಮ್ ಬೌಲರ್ಸ್ ಇರಲಿಲ್ಲ. ಡೇನಿಯಲ್ ಕ್ರಿಸ್ಟಿಯನ್ ಮತ್ತು ಜಾರ್ಜ್ ಗಾರ್ಟನ್ ಅವರಿಬ್ಬರೇ ಕೊಹ್ಲಿಗೆ ಆಯ್ಕೆಯಾಗಿ ಉಳಿದದ್ದು.
    PURPLE CAP:
    ವಿರಾಟ್ ಕೊಹ್ಲಿ ಅವರಿಗೆ ಆರ್​ಸಿಬಿ ಕ್ಯಾಪ್ಟನ್ ಆಗಿ ಇದೇ ಕೊನೆಯ ಐಪಿಎಲ್ ಆಗಿದೆ. ನಾಯಕನಾಗಿ ಐಪಿಎಲ್ ಕಪ್ ಎತ್ತಿಹಿಡಿಯುವ ಭಾಗ್ಯ ಅವರಿಗೆ ದಕ್ಕದಾಗದೇ ಹೋಗಿದೆ.
    Published by:Vijayasarthy SN
    First published: