ಐಪಿಎಲ್ (IPL) ನಲ್ಲಿ ಇಂದು 50ನೇ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderbad) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಟಾಸ್ (Toss) ಗೆದ್ದು ಮೊದಲಿಗೆ ಬೌಲಿಂಗ್ (Bowling) ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ರಿಷಭ್ ಪಂತ್ (Rishabh Pant) ಬಳಗ ಮೊದಲಿಗೆ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡಕ್ಕೆ ಗುರಿ ನಿಗದಿಪಡಿಸಲು ಆಹ್ವಾನ ನೀಡಿತ್ತು. ಅನುಭವಿ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (David Warner) ಹಾಗೂ ರೋವ್ ಮನ್ ಪಾವೆಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿದೆ.
207ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್!
ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಬ್ಬರದ ಆಟವಾಡುವ ಮೂಲಕ ಗಮನಸೆಳೆಯಿತು. ಡೇವಿಡ್ ವಾರ್ನರ್ (92*ರನ್, 58ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ರೋವ್ ಮನ್ ಪಾವೆಲ್ (67*ರನ್, 35 ಎಸೆತ, 3 ಬೌಂಡರಿ, 6 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಗೆ 207 ರನ್ ಬಾರಿಸಿದೆ.
ವಾರ್ನರ್ಗೆ ಸಾಥ್ ಕೊಟ್ಟ ಪಂತ್, ಪಾವೆಲ್!
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಓವರ್ ನಲ್ಲಿಯೇ ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡಿತ್ತು. 2ನೇ ವಿಕೆಟ್ ಗೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ 37 ರನ್ ಗಳ ಉತ್ತಮ ಜೊತೆಯಾಟವಾಡಿ ನಿರ್ಗಮಿಸಿದರು. 37 ರನ್ ಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 3ನೇ ವಿಕೆಟ್ ಗೆ ನಾಯಕ ರಿಷಭ್ ಪಂತ್ ಹಾಗೂ ಡೇವಿಡ್ ವಾರ್ನರ್ ಆಸರೆಯಾದರು. ಮೈದಾನಕ್ಕೆ ಇಳಿದ ಹಂತದಿಂದಲೇ ಅಬ್ಬರಿಸಿದ ರಿಷಭ್ ಪಂತ್, ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ: ಆರ್ಸಿಬಿ ಬಿಟ್ಟು ಬೇರೆ ತಂಡ ಸೇರದ ಕಾರಣ ರಿವೀಲ್ ಮಾಡಿದ ಕೊಹ್ಲಿ!
ಹೇಗಿದೆ ಪಾಯಿಂಟ್ಸ್ ಟೇಬಲ್!
ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ ಮೊದಲ ಸ್ಥಾನ ಅಲಂಕರಿಸಿದೆ. ಗುಜರಾತ್ 16 ಅಂಕ ಸಂಪಾದಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ 10ರಲ್ಲಿ 7 ಪಂದ್ಯಗಳನ್ನು ಗೆದ್ದು 2ನೇ ಸ್ಥಾನದಲಲ್ಲಿದೆ. ಒಟ್ಟು 14 ಅಂಕ ಗಳಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ 10 ಪಂದ್ಯಗಳಲ್ಲಿ 6 ಗೆಲುವು ಕಂಡಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆುಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.ಇನ್ನು ಸನ್ರೈಸರ್ಸ್ ಹೈದರಾಬಾದ್ 9ರಲ್ಲಿ 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಚೆನ್ನೈ ಕಿಂಗ್ಸ್ ವಿರುದ್ಧ ಗೆದ್ದು ಕುಣಿದಾಡಿದ ಆರ್ಸಿಬಿ! ಸಿಎಸ್ಕೆ ಪ್ಲೇ ಆಫ್ ಕನಸು ನುಚ್ಚುನೂರು
ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 9ರಲ್ಲಿ 4 ಗೆಲುವು ದಾಖಲಿಸಿ 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 10ರಲ್ಲಿ 4 ಗೆಲುವು ದಾಖಲಿಸಿ 8ನೇ ಸ್ಛಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 10ರಲ್ಲಿ 3 ಪಂದ್ಯದಲ್ಲಿ ಗೆಲುವು ದಾಖಲಿಸಿ 9ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 9 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿ 10ನೇ ಸ್ಥಾನದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ