ಐಪಿಎಲ್ (IPL) ನಲ್ಲಿ ಇಂದು 50ನೇ ಪಂದ್ಯ ನಡೆದಿದೆ, ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderbad) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಮುಖಾಮುಖಿಯಾತ್ತು. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಟಾಸ್ (Toss) ಗೆದ್ದು ಮೊದಲಿಗೆ ಬೌಲಿಂಗ್ (Bowling) ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ರಿಷಭ್ ಪಂತ್ (Rishabh Pant) ಬಳಗ ಮೊದಲಿಗೆ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡಕ್ಕೆ ಗುರಿ ನಿಗದಿಪಡಿಸಲು ಆಹ್ವಾನ ನೀಡಿತ್ತು.
ಅನುಭವಿ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (David Warner) ಹಾಗೂ ರೋವ್ ಮನ್ ಪಾವೆಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿತ್ತು.
208ರನ್ಗಳ ಗುರಿ ಬೆನ್ನತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ವಿಫಲವಾಗಿದೆ. 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು ಸನ್ರೈಸರ್ಸ್ ಹೈದರಾಬಾದ್ 186ರನ್ಗಳಿಸಿತು
208ರನ್ ಬೆನ್ನತ್ತಿದ್ದ ಎಸ್ಆರ್ಎಚ್ಗೆ ಸೋಲು!
ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಬ್ಬರದ ಆಟವಾಡುವ ಮೂಲಕ ಗಮನಸೆಳೆಯಿತು. ಡೇವಿಡ್ ವಾರ್ನರ್ (92*ರನ್, 58ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ರೋವ್ ಮನ್ ಪಾವೆಲ್ (67*ರನ್, 35 ಎಸೆತ, 3 ಬೌಂಡರಿ, 6 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಗೆ 207 ರನ್ ಬಾರಿಸಿದೆ. ಈ ರನ್ ಪೇರಿಸುವಲ್ಲಿ ಸನ್ರಸೈರ್ಸ್ ಸೋತಿದೆ. ಬೌಲಿಂಗ್ನಲ್ಲೂ ಹಿಡಿತ ಸಾಧಿಸಿಕೊಂಡು ಬಂದ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ.
ಬೌಲಿಂಗ್ನಲ್ಲೂ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್!
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಬೌಲಿಂಗ್ನಲ್ಲೂ ಮೊದಲಿನಿಂದಲೂ ಹಿಡಿತ ಸಾಧಿಸಿಕೊಂಡು ಬಂದಿತ್ತು.. ಸನ್ರೈಸರ್ಸ್ ತಂಡ 8 ರನ್ಗಳಿಸಿದ್ದಾಗ ಅಭಿಷೇಕ್ ಶರ್ಮಾ ಔಟ್ ಆದರು. ಇನ್ನೂ 24ರನ್ ಆಗುವಷ್ಟರಲ್ಲೇ ಹೈದರಾಬಾದ್ ಸನ್ರೈಸರ್ಸ್ ತಂಡ ನಾಯಕ ಕೇನ್ ವಿಲಿಯಮ್ಸನ್ ಕೂಡ ಪಂತ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇವರ ಹಿಂದೆಯೆ ರಾಹುಲ್ ಟ್ರಿಪಾಠಿ ಕೂಡ ಔಟ್ ಆದರು. ಇದಾದ ಬಳಿಕ ಸ್ಕ್ರೀಜ್ಗೆ ಇಳಿದಿದ್ದ ಪೂರನ್ ಹಾಗೂ ಮಾಕ್ರಮ್ ಕೆಲ ಕಾಲ ಡೆಲ್ಲಿ ಬೌಲರ್ಗಳಿಗೆ ಕಾಟ ಕೊಟ್ರು. ನಿಕೋಲಸ್ ಪೂರನ್ 34 ಬಾಲ್ಗಳಲ್ಲಿ 64ರನ್ಗಳಿಸಿ ಔಟಾದರು.ಕ
ಇದನ್ನೂ ಓದಿ: ಲೈವ್ ಮ್ಯಾಚ್ನಲ್ಲೇ ಮಂಡಿಯೂರಿ ಪ್ರಪೋಸ್ ಮಾಡಿದ RCB ಗರ್ಲ್! ಹುಡುಗನ ರಿಯಾಕ್ಷನ್ ಹೀಗಿತ್ತು
ಹೇಗಿದೆ ಪಾಯಿಂಟ್ಸ್ ಟೇಬಲ್!
ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ ಮೊದಲ ಸ್ಥಾನ ಅಲಂಕರಿಸಿದೆ. ಗುಜರಾತ್ 16 ಅಂಕ ಸಂಪಾದಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ 10ರಲ್ಲಿ 7 ಪಂದ್ಯಗಳನ್ನು ಗೆದ್ದು 2ನೇ ಸ್ಥಾನದಲಲ್ಲಿದೆ. ಒಟ್ಟು 14 ಅಂಕ ಗಳಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ 10 ಪಂದ್ಯಗಳಲ್ಲಿ 6 ಗೆಲುವು ಕಂಡಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆುಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ವಾರ್ನರ್ ವಂಡರ್ಫುಲ್, ಪಾವೆಲ್ ಪವರ್ಫುಲ್! ಡೆಲ್ಲಿ ಅಬ್ಬರಕ್ಕೆ ಮಂಕಾದ ಹೈದರಾಬಾದ್
ಇನ್ನೂ 11ರಲ್ಲಿ 5ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿ ಪಂಜಾಬ್ ತಂಡ ಇದೆ. ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 7ನೇ ಸ್ಥಾನದಲ್ಲಿದೆ. ಡೆಲ್ಲಿ ಕೋಲ್ಕತಾ ನೈಟ್ ರೈಡರ್ಸ್ 10ರಲ್ಲಿ 4 ಗೆಲುವು ದಾಖಲಿಸಿ 8ನೇ ಸ್ಛಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 10ರಲ್ಲಿ 3 ಪಂದ್ಯದಲ್ಲಿ ಗೆಲುವು ದಾಖಲಿಸಿ 9ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 9 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿ 10ನೇ ಸ್ಥಾನದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ