IPL 2021: ಐಪಿಎಲ್ ಆಡಬೇಕಿದ್ದ ಮತ್ತೋರ್ವ ಆಟಗಾರನಿಗೆ ಕೊರೋನಾ..!

ಈ ಬಾರಿಯ ಐಪಿಎಲ್​ ವೇಳೆ ಕೊರೋನಾ ಸೋಂಕಿಗೆ ಒಳಗಾಗುತ್ತಿರುವ ಐದನೇ ಆಟಗಾರ ಅನ್ರಿಕ್ ನೋಕಿಯ. ಇದಕ್ಕೂ ಮೊದಲು ಡೆಲ್ಲಿ ತಂಡದ ಅಕ್ಷರ್ ಪಟೇಲ್, ಆರ್​ಸಿಬಿಯ ಡೇನಿಯಲ್ ಸ್ಯಾಮ್ಸ್​, ಕೆಕೆಆರ್​ ತಂಡದ ನಿತೀಶ್ ರಾಣಾ ಹಾಗೂ ಆರ್​ಸಿಬಿ ತಂಡದ ದೇವದತ್ ಪಡಿಕ್ಕಲ್ ಕೊರೋನಾ ಸೋಂಕಿಗೆ ಒಳಗಾಗಿದ್ದರು.

ipl 2021 corona

ipl 2021 corona

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕೊರೋನಾ ಕಾಟ ಮುಂದುವರೆದಿದೆ. ಈಗಾಗಲೇ ಆರ್​ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಸೇರಿದಂತೆ ಕೆಲವು ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಆರ್​ಸಿಬಿಯ ಡೇನಿಯಲ್ ಸ್ಯಾಮ್ಸ್, ಡೆಲ್ಲಿ ಕ್ಯಾಪಿಟಲ್ಸ್​ನ ಅಕ್ಷರ್ ಪಟೇಲ್ ಪಟೇಲ್ ಕೊರೋನಾ ಸೋಂಕಿನ ಕಾರಣ ಐಸೊಲೇಷನ್​ನಲ್ಲಿದ್ದಾರೆ. ಇದೀಗ ಮತ್ತೋರ್ವ ಆಟಗಾರನಿಗೂ ಕೊರೋನಾ ಸೋಂಕಿರೋದು ಪತ್ತೆಯಾಗಿದೆ.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಅನ್ರಿಕ್ ನೋಕಿಯ ಅವರೂ ಕೂಡ ಕೊರೋನಾ ಪಾಸಿಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಿರುದ್ದದ ಟಿ20 ಸರಣಿ ಮುಗಿಸಿ ಏಪ್ರಿಲ್ 6 ರಂದು ಅನ್ರಿಕ್ ಐಪಿಎಲ್​ಗಾಗಿ ಭಾರತಕ್ಕೆ ಆಗಮಿಸಿದ್ದರು. ಅಲ್ಲದೆ ಬಿಸಿಸಿಐ ನಿಯಮದಂತೆ ಒಂದು ವಾರಗಳ ಕಾಲ ಕ್ವಾರಂಟೈನ್​ಗೆ ಒಳಗಾಗಿದ್ದರು. ಇದೇ ವೇಳೆ ನಡೆಸಿದ ಪರೀಕ್ಷೆಯಲ್ಲಿ ಅನ್ರಿಕ್ ನೋಕಿಯ ಅವರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಹೀಗಾಗಿ ಅವರಿಗೆ ಐಸೊಲೇಷನ್​ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವರದಿಯಾಗಿದೆ.

    ಇದಾಗ್ಯೂ ಅನ್ರಿಕ್ ನೋಕಿಯ ಅವರೊಂದಿಗೆ ಆಗಮಿಸಿದ ಕಗಿಸೋ ರಬಾಡ ಅವರ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ರಬಾಡ ಆಡುವ ಸಾಧ್ಯತೆ ಹೆಚ್ಚಿದೆ.

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕೊರೋನಾ ಕಾರಣದಿಂದ ದಕ್ಷಿಣ ಆಫ್ರಿಕಾ ವೇಗಿ ಅನ್ರಿಕ್ ನೋಕಿಯ ಅಲಭ್ಯರಾಗುವುದು ಖಚಿತವಾಗಿದೆ. ಕಳೆದ ಸೀಸನ್​ನಲ್ಲಿ 16 ಪಂದ್ಯಗಳನ್ನಾಡಿದ್ದ ನೋಕಿಯ 22 ವಿಕೆಟ್ ಉರುಳಿಸುವ ಮೂಲಕ ಡೆಲ್ಲಿ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಇನ್ನು ಈ ಬಾರಿಯ ಐಪಿಎಲ್​ ವೇಳೆ ಕೊರೋನಾ ಸೋಂಕಿಗೆ ಒಳಗಾಗುತ್ತಿರುವ ಐದನೇ ಆಟಗಾರ ಅನ್ರಿಕ್ ನೋಕಿಯ. ಇದಕ್ಕೂ ಮೊದಲು ಡೆಲ್ಲಿ ತಂಡದ ಅಕ್ಷರ್ ಪಟೇಲ್, ಆರ್​ಸಿಬಿಯ ಡೇನಿಯಲ್ ಸ್ಯಾಮ್ಸ್​, ಕೆಕೆಆರ್​ ತಂಡದ ನಿತೀಶ್ ರಾಣಾ ಹಾಗೂ ಆರ್​ಸಿಬಿ ತಂಡದ ದೇವದತ್ ಪಡಿಕ್ಕಲ್ ಕೊರೋನಾ ಸೋಂಕಿಗೆ ಒಳಗಾಗಿದ್ದರು.
    Published by:zahir
    First published: