• ಹೋಂ
  • »
  • ನ್ಯೂಸ್
  • »
  • IPL
  • »
  • IPL 2021: ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಹಳೇ ಡೆಲ್ಲಿ ಹುಡುಗ್ರು..!

IPL 2021: ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಹಳೇ ಡೆಲ್ಲಿ ಹುಡುಗ್ರು..!

delhi capitals

delhi capitals

ರಿಕಿ ಪಾಂಟಿಂಗ್ ಕೋಚ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಕಳೆದ ಎರಡು ಸೀಸನ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಡೆಲ್ಲಿ ಈ ಬಾರಿಯೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

  • Share this:

    IPL 2021ರ ಸಿದ್ದತೆಗಳು ಶುರುವಾಗಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸಗಳನ್ನು ಆರಂಭಿಸಿದ್ದು, ಇಂಗ್ಲೆಂಡ್​ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಆಟಗಾರರು ಆಯಾ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಇತ್ತ ಕಳೆದ ಬಾರಿಯ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ ಈ ಬಾರಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುವ ಸೂಚನೆ ನೀಡಿದೆ. ಅದರ ಮೊದಲ ಎಂಬಂತೆ ಜೆರ್ಸಿಯಲ್ಲಿ ಬದಲಾವಣೆ ಮಾಡಿಕೊಂಡಿದೆ.


    2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಧರಿಸಲಿರುವ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ನೀಲಿ ಬಣ್ಣವನ್ನೇ ವಿನ್ಯಾಸದಲ್ಲಿ ಬಳಸಲಾಗಿದ್ದು, ಕೆಲ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾತ್ರ ಜೆರ್ಸಿಯಲ್ಲಿ ಮಾಡಲಾಗಿದೆ.


    ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕರಲ್ಲಿ ಒಬ್ಬರಾಗಿರುವ JSWನ ಜಾಹೀರಾತನ್ನು ಜೆರ್ಸಿಯ ಎದೆಯ ಭಾಗದಲ್ಲಿ ನೀಡಲಾಗಿದೆ. ಹಾಗೆಯೇ ಘರ್ಜಿಸುತ್ತಿರುವ ಹುಲಿಯ ಚಿತ್ರವನ್ನು ಬಳಸಲಾಗಿದ್ದು, ಕುತ್ತಿಗೆ ಭಾಗದಲ್ಲಿ ಕೆಂಪು ಬಣ್ಣದ ಕಾಲರ್ ನೀಡಲಾಗಿದೆ.





    ಹೊಸ ಜೆರ್ಸಿಯು ಯುವ ಪಡೆಯನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಚೆನ್ನಾಗಿ ಹೋಲುತ್ತದೆ. ಹೊಸ ಸವಾಲನ್ನು ಎದುರಿಸಲು ಯುವ ಪಡೆ ಸಿದ್ಧವಾಗಿದ್ದು, ಹುಲಿ ಉಗುರುಗಳು ಅದರ ಸೂಚನೆ ನೀಡುವಂತಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿಇಒ ವಿನೋದ್ ವಿಶ್ತ್ ಹೇಳಿದ್ದಾರೆ.

    ರಿಕಿ ಪಾಂಟಿಂಗ್ ಕೋಚ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಕಳೆದ ಎರಡು ಸೀಸನ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಡೆಲ್ಲಿ ಈ ಬಾರಿಯೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.

    Published by:zahir
    First published: