DC vs SRH| ಗೆಲುವಿನ ನಾಗಾಲೋಟದಲ್ಲಿ ದೆಹಲಿ ಕ್ಯಾಪಿಟಲ್ಸ್; ಲಯಕ್ಕೆ ಮರಳುವುದೇ ಸನ್​ ರೈಸರ್ಸ್?

ರಿಷಭ್ ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಐಪಿಎಲ್‌ನ ಮೊದಲಾರ್ಧವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿತು ಮತ್ತು ದ್ವಿತಿಯಾರ್ಧವನ್ನೂ ಗೆಲುವಿನ ಸೂಚನೆಗಳೊಂದಿಗೆ ಆರಂಭಿಸಲು ಉತ್ಸುಕವಾಗಿದ್ದರೆ, ಸತತ ಸೋಲಿನಿಂದ ಕಂಗೆಟ್ಟಿರುವ ಸನ್​ ರೈಸರ್ಸ್​ ಚಿಂತಾಕ್ರಾಂತವಾಗಿದೆ.

ಸನ್​ ರೈಸರ್ಸ್​ ಹೈದ್ರಾಬಾದ್-ಡೆಲ್ಲಿ ಕ್ಯಾಪಿಟಲ್ಸ್.

ಸನ್​ ರೈಸರ್ಸ್​ ಹೈದ್ರಾಬಾದ್-ಡೆಲ್ಲಿ ಕ್ಯಾಪಿಟಲ್ಸ್.

 • Share this:
  ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮರಳಿದ್ದು, ಇಡೀ ತಂಡ ಹೊಸ ಹುರುಪಿನೊಂದಿಗೆ ಬುಧವಾರ ಸನ್​ ರೈಸರ್ಸ್​ ಹೈದ್ರಾಬಾದ್​ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸಿದ್ದವಾಗುತ್ತಿದೆ. ಈ ಪಂದ್ಯದ ಮೂಲಕ ಐಪಿಎಲ್ ದ್ವಿತಿಯಾರ್ಧವನ್ನು ಎರಡೂ ತಂಡಗಳೂ ಆರಂಭಿಸಲಿದೆ. 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಪ್ರಸ್ತುತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಕೇನ್ ವಿಲಿಯಮ್ಸನ್​ (kane williamson) ನೇತೃತ್ವದ ಸನ್ ರೈಸರ್ಸ್​ ಹೈದ್ರಾಬಾದ್ ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಲಯಕ್ಕೆ ಮರಳಲು ಹರಸಾಹಸ ಪಡುತ್ತಿದೆ. ಸನ್​ ರೈಸರ್ಸ್​ (sunrisers hyderabad) ಪ್ರಸ್ತುತ 7 ಪಂದ್ಯಗಳಲ್ಲಿ 6 ಸೋಲು ಮತ್ತು 1 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

  ರಿಷಭ್ ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಐಪಿಎಲ್‌ನ ಮೊದಲಾರ್ಧವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿತು ಮತ್ತು ದ್ವಿತಿಯಾರ್ಧವನ್ನೂ ಗೆಲುವಿನ ಸೂಚನೆಗಳೊಂದಿಗೆ ಆರಂಭಿಸಲು ಉತ್ಸುಕವಾಗಿದೆ. ಮತ್ತು ಸತತ ಗೆಲುವು ದಾಖಲಿಸಲು ತಂಡದಲ್ಲಿ ಸಾಕಷ್ಟು ಜನ ಪವರ್​ ಹಿಟ್ಟರ್​ಗಳಿದ್ದಾರೆ. ಎದುರಾಳಿ ತಂಡದ ಯಾವುದೇ ದಾಳಿಯನ್ನು ಸಮರ್ಥವಾಗಿ ಎದುರಿಸುವ ಬ್ಯಾಟ್ಸ್​ಮನ್​ಗಳು ತಂಡದಲ್ಲಿದ್ದಾರೆ. ಆದರೆ, ಸನ್​ ರೈಸರ್ಸ್​ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.

  ಡೆಲ್ಲಿ ತಂಡದ ಆರಂಭಿಕ ಶಿಖರ್ ಧವನ್ (380 ರನ್) ಈ ವರ್ಷದ ಐಪಿಎಲ್​ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆದರೂ, ಅವರನ್ನು ಭಾರತದ ವಿಶ್ವ ಟಿ20 ತಂಡಕ್ಕೆ ಆಯ್ಕೆ ಮಾಡದಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ ಧವನ್ ಗೆ ಮತ್ತೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅಗತ್ಯ ಇದೆ. ಮತ್ತೊಬ್ಬ ಆರಂಭಿಕ ಪೃಥ್ವಿ ಶಾ ಈ ಟೂರ್ನಿಯಲ್ಲಿ 308 ರನ್ ಗಳಿಸಿದ್ದು, ಅವರೂ ಸಹ ಉತ್ತಮ ಪಾರ್ಮ್​ನಲ್ಲಿ ಇದ್ದಾರೆ.  ಇದಲ್ಲದೆ, ಶ್ರೇಯಸ್ ಅಯ್ಯರ್, ನಾಯಕ ರಿಷಭ್ ಪಂತ್ (213 ರನ್), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (104 ರನ್) ಮತ್ತು ಮಾರ್ಕಸ್ ಸ್ಟೋಯಿನಿಸ್ (71 ರನ್), ವೆಸ್ಟ್​ ಇಂಡೀಸ್​ನ ಶಿಮ್ರಾನ್ ಹೆಟ್ಮೆಯರ್ (84 ರನ್) ಒಳಗೊಂಡ ಪ್ರಬಲ ಮಧ್ಯಮ ಕ್ರಮಾಂಕವನ್ನು ಎದುರುಗೊಳ್ಳುವುದು ಬೌಲರ್​ಗಳಿಗೆ ಅಷ್ಟು ಸುಲಭದ ಮಾತಲ್ಲ.

  ಮಾರ್ಚ್ ತಿಂಗಳಲ್ಲಿ ಉಂಟಾದ ಭುಜದ ಗಾಯದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಪುನರಾಗಮನ ಮಾಡುತ್ತಿರುವ ಅಯ್ಯರ್, ಪಂದ್ಯಾವಳಿಯನ್ನು ಉತ್ತಮವಾಗಿ ಆರಂಭಿಸಲು ಉತ್ಸುಕರಾಗಿದ್ದರು.

  ಇದನ್ನೂ ಓದಿ: PBKS vs RR| ರಾಹುಲ್-ಮಯಾಂಕ್ ಹೋರಾಟ ವ್ಯರ್ಥ; ರಾಜಸ್ತಾನ್​ಗೆ ರೋಚಕ ಗೆಲುವು, ಬೌಲಿಂಗ್​ನಲ್ಲಿ ಹೊಸ ಇತಿಹಾಸ ಬರೆದ ತ್ಯಾಗಿ!

  ಅಲ್ಲದೆ, ದೆಹಲಿಯು ಸ್ಥಿರ ಬೌಲಿಂಗ್ ದಾಳಿಯನ್ನು ಹೊಂದಿದೆ. ಅವೇಶ್ ಖಾನ್ (14 ವಿಕೆಟ್) ಮತ್ತು ಕಗ್ಗಿಸೋ ರಬಾಡ (8 ವಿಕೆಟ್) ವೇಗದ ಬೌಲಿಂಗ್ ಸಾರಥ್ಯ ವಹಿಸಿದರೆ, ರವಿಚಂದ್ರನ್ ಅಶ್ವಿನ್, ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಬಲ ತಂಡಕ್ಕಿದೆ. ಅಕ್ಸರ್ ಪಟೇಲ್, ಲಲಿತ್ ಯಾದವ್ ಮತ್ತು ಪ್ರವಿಣ್ ದುಬೆ ಸೇರಿದಂತೆ ಬೆಂಚ್​ ಸ್ಟ್ರೆಂಥ್​ ಸಹ ತಂಡದ ಬಲವಾಗಿದೆ.

  ಸಂಕಷ್ಟದಲ್ಲಿ ಸನ್​ ರೈಸರ್ಸ್​:

  ಒಂದೆಡೆ ಡೆಲ್ಲಿ ಬಲಿಷ್ಠ ತಂಡವನ್ನು ಹೊಂದಿದ್ದರೆ, ಮತ್ತೊಂದೆಡೆ ಸನ್​ ರೈಸರ್ಸ್​ ಹೈದ್ರಾಬಾದ್ ಲಯಕ್ಕೆ ಮರಳಲು ಸಾಕಷ್ಟು ಶ್ರಮ ಪಡುತ್ತಿದೆ. ಸನ್​ ರೈಸರ್ಸ್​ ಪರ ಜಾನಿ ಬೈರ್‌ಸ್ಟೊ ತಂಡದಿಂದ ಹಿಂದೆ ಸರಿದ ಪರಿಣಾಮ ಆಸ್ಟ್ರೇಲಿಯಾದ ಅರಂಭಿಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್​ (193 ರನ್) ಮೇಲೆ ನಿರೀಕ್ಷೆ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ವೃದ್ಧಿಮಾನ್ ಸಹಾ, ಕೇದಾರ್ ಜಾಧವ್, ಅಬ್ದುಲ್ ಸಮದ್ ಮತ್ತು ವಿಜಯ್ ಶಂಕರ್ ಅವರಂತಹವರು ದ್ವಿತಿಯಾರ್ಧದಲ್ಲಾದರೂ ಉತ್ತಮವಾಗಿ ಆಟ ಆಡಬೇಕಿದೆ.

  ಇದನ್ನೂ ಓದಿ: Watch Video| ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದು ಬೆರಗುಗೊಳಿಸಿದ ಫ್ಯಾಬಿಯನ್ ಅಲೆನ್; ಇಲ್ಲಿದೆ ನೋಡಿ ವಿಡಿಯೋ!

  ಅಲ್ಲದೆ, ಸ್ಪಿನ್ ಸೆನ್ಸೇಷನ್ ರಶೀದ್ ಖಾನ್ ನೇತೃತ್ವದ ಬೌಲರ್‌ಗಳು, ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ದೆಹಲಿ ಬ್ಯಾಟರ್‌ಗಳನ್ನು ನಿಯಂತ್ರಿಸಲು ಶಿಸ್ತಿನ ಪ್ರದರ್ಶನವನ್ನು ನೀಡಬೇಕಾಗುತ್ತದೆ.
  Published by:MAshok Kumar
  First published: