• ಹೋಂ
  • »
  • ನ್ಯೂಸ್
  • »
  • IPL
  • »
  • DC vs SRH: ಡೆಲ್ಲಿ vs ಹೈದರಾಬಾದ್: ಉಭಯ ತಂಡಗಳಲ್ಲಿ 1 ಬದಲಾವಣೆ ಸಾಧ್ಯತೆ, ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

DC vs SRH: ಡೆಲ್ಲಿ vs ಹೈದರಾಬಾದ್: ಉಭಯ ತಂಡಗಳಲ್ಲಿ 1 ಬದಲಾವಣೆ ಸಾಧ್ಯತೆ, ಇಂದು ಕಣಕ್ಕಿಳಿಯುವ ತಂಡ ಹೀಗಿರಲಿದೆ

DC vs SRH

DC vs SRH

DC vs SRH Predicted Playing 11: ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ವಲಯದ್ದೇ ಚಿಂತೆ. ಮೊದಲ ಪಂದ್ಯದಲ್ಲಿ ಜಾನಿ ಬೈರ್​ಸ್ಟೋವ್ ಅಬ್ಬರಿಸಿದ್ರೆ, ಎರಡನೇ ಪಂದ್ಯದಲ್ಲಿ ಮನೀಷ್ ಪಾಂಡೆ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ.

  • Share this:

IPL 2020 ಟೂರ್ನಿಯ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಕಾದಾಟ ನಡೆಸಲಿದೆ. ಉಭಯ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಎರಡನ್ನೂ ಗೆಲ್ಲುವ ಮೂಲಕ ಶ್ರೇಯಸ್ ಪಡೆ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ಡೇವಿಡ್ ವಾರ್ನರ್ ಬಳಗ ಇಂದು ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ. ಉತ್ತಮ ಆಟಗಾರರನ್ನು ಒಳಗೊಂಡಿದ್ದರೂ ಸನ್​ರೈಸರ್ಸ್ ಹೈದರಾಬಾದ್ ಆರ್​ಸಿಬಿ ವಿರುದ್ಧ 10 ರನ್​ಗಳಿಂದ ಸೋತಿತ್ತು. ಹಾಗೆಯೇ ಕೆಕೆಆರ್ ವಿರುದ್ಧ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹೈದರಾಬಾದ್ ಎರಡನೇ ಪಂದ್ಯದಲ್ಲೂ ಶರಣಾಗಿತ್ತು.


ಡೆಲ್ಲಿ ಕ್ಯಾಪಿಲಟ್ಸ್​ ಕಿಂಗ್ಸ್ ಇಲೆವೆನ್ ವಿರುದ್ಧ ಸೂಪರ್ ಓವರ್​ನ ಅದೃಷ್ಟ ಆಟದಿಂದ ಗೆಲುವು ಸಾಧಿಸಿತ್ತು. ಆದರೆ ಬಲಿಷ್ಠ ಸಿಎಸ್​ಕೆ ವಿರುದ್ಧ ಗುಡುಗಿದ ಡೆಲ್ಲಿ ಹುಡುಗರು ಧೋನಿ ಪಡೆಯನ್ನು 44 ರನ್​ಗಳಿಂದ ಸೋಲಿಸುವ ಮೂಲಕ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಇದೇ ಹುಮ್ಮಸ್ಸಿನಲ್ಲಿ ಇಂದು ಕೂಡ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯಲಿದೆ.


ಈಗಾಗಲೇ ಡೆಲ್ಲಿ ಪರ ಆರಂಭಿಕರು ಉತ್ತಮ ಆಟ ಪ್ರದರ್ಶಿಸಿದ್ದು, ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ರಿಷಭ್ ಪಂತ್ ಉತ್ತಮ ಕಾಣಿಕೆಯನ್ನು ನೀಡುತ್ತಿದ್ದಾರೆ. ಆದರೆ ಶಿಮ್ರಾನ್ ಹೆಟ್ಮೆಯರ್ ವಿಫಲರಾಗುತ್ತಿರುವುದು ಡೆಲ್ಲಿ ಪಾಳಯದ ಸಣ್ಣ ಚಿಂತೆ. ಅದಾಗ್ಯೂ ಜಯದ ಲಯದಲ್ಲಿರುವ ಕಾರಣ ಇಂದು ಕೂಡ ಹೆಟ್ಮೆಯರ್ ಮತ್ತೊಂದು ಚಾನ್ಸ್ ನೀಡುವ ಸಾಧ್ಯತೆಯಿದೆ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಬಹುದು.


ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಮೊದಲೆರಡು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಕಗಿಸೋ ರಬಾಡ ವೇಗ, ಅನ್ರಿಕ್ ನಾರ್ಟ್ಜೆ ಕರಾರುವಾಕ್ ದಾಳಿ ಡೆಲ್ಲಿಯ ಆತ್ಮ ವಿಶ್ವಾಸ ಹೆಚ್ಚಿಸಿದೆ. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಗಾಯಗೊಂಡಿರುವ ಆರ್​. ಅಶ್ವಿನ್ ತಂಡಕ್ಕೆ ಮರಳಿದರೆ ಅಮಿತ್ ಮಿಶ್ರಾ ಸ್ಥಾನ ಕಳೆದುಕೊಳ್ಳಬಹುದು. ಇದರ ಹೊರತಾಗಿ ಶ್ರೇಯಸ್ ಪಡೆಯಲ್ಲಿ  ಯಾವುದೇ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ.


ಇತ್ತ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ವಲಯದ್ದೇ ಚಿಂತೆ. ಮೊದಲ ಪಂದ್ಯದಲ್ಲಿ ಜಾನಿ ಬೈರ್​ಸ್ಟೋವ್ ಅಬ್ಬರಿಸಿದ್ರೆ, ಎರಡನೇ ಪಂದ್ಯದಲ್ಲಿ ಮನೀಷ್ ಪಾಂಡೆ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಇವರಿಬ್ಬರ ಹೊರತಾಗಿ ಎಸ್​ಆರ್​ಹೆಚ್ ಬ್ಯಾಟ್ಸ್​ಮನ್​ಗಳಿಂದ ಸ್ಪೋಟಕ ಆಟ ಮೂಡಿ ಬಂದಿಲ್ಲ. ಅದರಲ್ಲೂ ನಾಯಕ ಡೇವಿಡ್ ವಾರ್ನರ್ ಔಟ್ ಆಫ್ ಫಾರ್ಮ್​ನಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ವೃದ್ಧಿಮಾನ್ ಸಾಹ ಕೆಕೆಆರ್ ವಿರುದ್ಧ ರನ್​ಗಳಿಸಲು ಪರದಾಡುತ್ತಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದೆ.


ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ಉತ್ತಮವಾಗಿ ಚೆಂಡೆಸೆಯುತ್ತಿದ್ದಾರೆ. ಆದರೆ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿರುವುದು ನಾಯಕನ ಚಿಂತೆಯ ವಿಷಯವಾಗಿದೆ. ಈ ಬಗ್ಗೆ ಸನ್​ರೈಸರ್ಸ್ ಹೈದರಾಬಾದ್ ಮತ್ತಷ್ಟು ಗಮನ ಹರಿಸದಿದ್ರೆ ಡೆಲ್ಲಿ ವಿರುದ್ಧ ಗೆಲುವು ಕಷ್ಟಸಾಧ್ಯ ಎಂಬುದಕ್ಕೆ ಕೆಕೆಆರ್ ವಿರುದ್ಧದ ಪಂದ್ಯವೇ ಸಾಕ್ಷಿ. ಹೀಗಾಗಿ ಇಂದು ತಂಡದಲ್ಲಿ ಟಿ. ನಟರಾಜನ್ ಸ್ಥಾನದಲ್ಲಿ ಸಿದ್ದಾರ್ಥ್ ಕೌಲ್ ಅಥವಾ ಬೆಸಿಲ್ ಥಂಪಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಇಂದು ಕಣಕ್ಕಿಳಿಯುವ ಉಭಯ ಸಂಭವನೀಯ ತಂಡಗಳು ಇಂತಿವೆ.


ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮೇರ್, ಮಾರ್ಕಸ್ ಸ್ಟೊಯಿನಿಸ್, ಆಕ್ಸರ್ ಪಟೇಲ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ.


ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ವೃದ್ಧಿಮಾನ್ ಸಹಾ, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, , ಟಿ ನಟರಾಜನ್/ಸಿದ್ಧಾರ್ಥ್ ಕೌಲ್


POINTS TABLE:



SCHEDULE TIME TABLE:



ORANGE CAP:



PURPLE CAP:



RESULT DATA:



MOST SIXES:

top videos



    KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!

    First published: