DC vs SRH- ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ನಿರಾಯಾಸ ಗೆಲುವು; ಮತ್ತೆ ಅಗ್ರಸ್ಥಾನಕ್ಕೇರಿದ ಪಂತ್ ಪಡೆ

Delhi Capitals defeat SRH- ಹೈದರಾಬಾದ್ ಸನ್ ರೈಸರ್ಸ್ ತಂಡವನ್ನ 134 ರನ್​ಗೆ ಕಟ್ಟಿಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 8 ವಿಕೆಟ್ ಕೈಲಿರುವಂತೆ ಗೆಲುವಿನ ದಡ ಮುಟ್ಟಿತು.

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

 • Cricketnext
 • Last Updated :
 • Share this:
  ದುಬೈ, ಸೆ. 22: ಇಂಡಿಯನ್ ಪ್ರೀಮಿಯರ್ ಲೀಗ್ 2021 ಟೂರ್ನಿಯ 33ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಐಪಿಎಲ್ 33ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡ ಮೊದಲು ಬ್ಯಾಟ್ ಮಾಡಿ 135 ರನ್ ಕಲೆಹಾಕಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 18ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ಇನ್ನೂ 8 ವಿಕೆಟ್ ಕೈಲಿರುವಂತೆಯೇ ನಿರಾಯಾಸ ಗೆಲುವು ದಾಖಲಿಸಿತು. ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರು ಡೆಲ್ಲಿ ತಂಡದ ಚೇಸಿಂಗ್ ಸುಲಭವಾಗಿಸಿದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಹಿಂದಿಕ್ಕಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು.

  ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿತು. ಕಾಶ್ಮೀರಿ ಆಟಗಾರ ಅಬ್ದುಲ್ ಸಮದ್ (Abdul Samad) ಮತ್ತು ಅಫ್ಘಾನಿ ಆಟಗಾರ ಅಬ್ದುಲ್ ರಷೀದ್ (Abdul Rashid) ಅವರು ಉತ್ತಮ ಬ್ಯಾಟಿಂಗ್ ಮಾಡಿದ ಫಲವಾಗಿ ಸನ್ ರೈಸರ್ಸ್ ತಂಡಕ್ಕೆ 134 ರನ್ ಗಳಿಸಲು ಸಾಧ್ಯವಾಗಿದೆ. ಈ ಬ್ಯಾಟಿಂಗ್ ಪಿಚ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ಅದರಲ್ಲೂ ದಕ್ಷಿಣ ಆಫ್ರಿಕಾದ ಆನ್ರಿಚ್ ನೋರ್ಟಿಯಾ (Anrich Nortje) ಅವರ ಮಾರಕ ಬೌಲಿಂಗ್​ನಿಂದ ಹೈದರಾಬಾದ್ ಬ್ಯಾಟುಗಾರರು ತತ್ತರಿಸಿದರು. ಡೇವಿಡ್ ವಾರ್ನರ್ ಮತ್ತು ಕೇದಾರ್ ಜಾಧವ್ ವಿಕೆಟ್ ಪಡೆದ ನೋರ್ಕಿಯಾ ಕೇವಲ 12 ರನ್ನಿತ್ತು 2 ವಿಕೆಟ್ ಪಡೆದರು. ಕಗಿಸೋ ರಬಡ 3 ವಿಕೆಟ್ ಪಡೆದ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಪಡೆದರು.

  ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಆರಂಭವಾದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೇವರಿಟ್ ಎನಿಸಿತ್ತು. ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ತಳದಲ್ಲಿದ್ದು, ನಾಕೌಟ್ ಆಸೆ ಜೀವಂತವಾಗಿರಬೇಕಾದರೆ ಈ ಪಂದ್ಯ ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಈ ತಂಡ 7 ಪಂದ್ಯಗಳಿಂದ ಗಳಿಸಿರುವುದು ಎರಡೇ ಅಂಕ. ಅದರ ಜೊತೆಗೆ ತಂಡದ ಪ್ರಮುಖ ಬೌಲರ್ ಟಿ ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರು ಕೆಲ ಪಂದ್ಯಗಳನ್ನ ಆಡುವುದಿಲ್ಲ. ಇದು ತಂಡದ ಹುಮ್ಮಸ್ಸನ್ನ ಇನ್ನಷ್ಟು ಹಾಳು ಮಾಡಿರಬಹುದು.
  POINTS TABLE:
  ORANGE CAP:
  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗ ಬಲಿಷ್ಠವಾಗಿ ತೋರಿದೆ. ಇಂಗ್ಲೆಂಡ್ ಸರಣಿಯಲ್ಲಿ ರನ್ ಗಳಿಸಲು ಪರದಾಡಿದ್ದ ರಿಷಭ್ ಪಂತ್ ದುಬೈನಲ್ಲಿ ಫಾರ್ಮ್ ಮರಳಿ ಗಳಿಸಿದ್ದಾರೆ.  ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಫಾರ್ಮ್​ಗೂ ಮರಳಿದ್ಧಾರೆ.

  ಇದನ್ನೂ ಓದಿ: IPL- ಐಪಿಎಲ್ 2021ಗೆ ಕೋವಿಡ್ ಭೀತಿ; ನಟರಾಜನ್​ಗೆ ಪಾಸಿಟಿವ್; ಏಳು ಮಂದಿ ಐಸೋಲೇಶನ್

  ಇನ್ನು, ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಜಾನಿ ಬೇರ್​ಸ್ಟೋ ಅವರ ಅನುಪಸ್ಥಿತಿ ಕಾಡಿತು. ಮೊದಲ ಲೆಗ್​ನಲ್ಲಿ ಭರ್ಜರಿಯಾಗಿ ಆರ್ಭಟಿಸಿದ್ದ ಬೇರ್​ಸ್ಟೋ ಅವರು ಆಡದೇ ಇದ್ದದ್ದು ಹೈದರಾಬಾದ್​ಗೆ ದೊಡ್ಡ ಹಿನ್ನಡೆ ಎನಿಸಿತು. ಡೇವಿಡ್ ವಾರ್ನರ್ ಅವರು ಫಾರ್ಮ್​ಗೆ ಮರಳುವುದು ಹೈದರಾಬಾದ್​ಗೆ ಬಹಳ ಮುಖ್ಯವಾಗಿತ್ತು. ಆದರೆ, ಅವರು ಶೂನ್ಯ ಸಂಪಾದನೆ ಮಾಡಿ ನಿರಾಶೆಗೊಳಿಸಿದರು.

  ತಂಡಗಳು:

  ಡೆಲ್ಲಿ ಕ್ಯಾಪಿಟ,ಲ್ಸ್ ತಂಡ: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟಾಯ್ನಿಸ್, ಶಿಮ್ರಾನ್ ಹೆಟ್​ಮಯರ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಕಗಿಸೋ ರಬಡ, ಆನ್ರಿಕ್ ನಾರ್ಜೆ, ಅವೇಶ್ ಖಾನ್.

  ಸನ್​ರೈಸರ್ಸ್ ಹೈದರಾಬಾದ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಷೀದ್ ಖಾನ್, ಭುನವೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

  ಸ್ಕೋರು ವಿವರ: 

  ಸನ್ ರೈಸರ್ಸ್ ಹೈದರಾಬಾದ್ 20 ಓವರ್ 134/9
  (ಅಬ್ದುಲ್ ಸಮದ್ 28, ರಷೀದ್ ಖಾನ್ 22, ಕೇನ್ ವಿಲಿಯಮ್ಸನ್ 18, ವೃದ್ಧಿಮಾನ್ ಸಾಹಾ 18, ಮನೀಶ್ ಪಾಂಡೆ 17, ಜೇಸನ್ ಹೋಲ್ಡರ್ 10 ರನ್ - ಕಗಿಸೋ ರಬಡ 37/3, ಆನ್ರಿಚ್ ನೋರ್ಟಿಯಾ 12/2, ಅಕ್ಷರ್ ಪಟೇಲ್ 21/2)

  ಡೆಲ್ಲಿ ಕ್ಯಾಪಿಟಲ್ಸ್ ತಂಡ 17.5 ಓವರ್ 139/2
  (ಶ್ರೇಯಸ್ ಅಯ್ಯರ್ ಅಜೇಯ 47, ಶಿಖರ್ ಧವನ್ 42, ರಿಷಭ್ ಪಂತ್ ಅಜೇಯ 35 ರನ್)
  Published by:Vijayasarthy SN
  First published: